ಬೆಂಗಳೂರು: ಖಾಸಗಿ ಬಿಲ್ಡರ್‌ಗಳ ಮೂಲಕ ಬಿಡಿಎ ಫ್ಲ್ಯಾಟ್ ಮಾರಾಟ
ಈ ಹಿಂದೆ ಬಿಡಿಎ ಒಂದೇ ಬಾರಿಗೆ 10ಕ್ಕಿಂತ ಹೆಚ್ಚು ಫ್ಲ್ಯಾಟ್ ಖರೀದಿ ಮಾಡುವವರಿಗೆ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಿತ್ತು. ಆನ್‌ಲೈನ್ ಹಾಗೂ ಫ್ಲ್ಯಾಟ್ ಮಾರಾಟ ಮೇಳ ನಡೆಸಿ ಗ್ರಾಹಕರನ್ನು ಆಕರ್ಷಿಸಲು ಸಾಕಷ್ಟು ಶ್ರಮವಹಿಸಿತ್ತು. ಆದರೂ, ಕೆಲವು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಫ್ಲ್ಯಾಟ್ ಖರೀದಿಗೆ ಮುಂದಾಗದಿರುವುದು ಬಿಡಿಎಗೆ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರು(ಸೆ.12): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಮಾರಾಟವಾಗದೇ ಉಳಿದಿರುವ 3,586 ಫ್ಲ್ಯಾಟ್‌ಗಳನ್ನು ಖಾಸಗಿ ಬಿಲ್ಡರ್‌ಗಳ ಮೂಲಕ ಮಾರಾಟ ಮಾಡಲು ಚಿಂತನೆ ನಡೆಸಿದೆ.
ಈ ಹಿಂದೆ ಬಿಡಿಎ ಒಂದೇ ಬಾರಿಗೆ 10ಕ್ಕಿಂತ ಹೆಚ್ಚು ಫ್ಲ್ಯಾಟ್ ಖರೀದಿ ಮಾಡುವವರಿಗೆ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಿತ್ತು. ಆನ್‌ಲೈನ್ ಹಾಗೂ ಫ್ಲ್ಯಾಟ್ ಮಾರಾಟ ಮೇಳ ನಡೆಸಿ ಗ್ರಾಹಕರನ್ನು ಆಕರ್ಷಿಸಲು ಸಾಕಷ್ಟು ಶ್ರಮವಹಿಸಿತ್ತು. ಆದರೂ, ಕೆಲವು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರು ಫ್ಲ್ಯಾಟ್ ಖರೀದಿಗೆ ಮುಂದಾಗದಿರುವುದು ಬಿಡಿಎಗೆ ತಲೆನೋವಾಗಿ ಪರಿಣಮಿಸಿದೆ.
ಹಾಗಾಗಿ ಹಲವು ವರ್ಷಗಳಿಂದ ಆಲೂರು, ವಲಗೇರಹಳ್ಳಿ, ಗುಂಜೂರು, ಕಣಿಮಿಣಿಕೆ, ತಿಪ್ಪಸಂದ್ರ, ಕೋನದಾಸನಪುರ ಸೇರಿ ವಿವಿಧೆಡೆ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಮಾರಾಟವಾಗದೆ ಉಳಿದಿರುವ 3,586 ಫ್ಲ್ಯಾಟ್‌ಗಳನ್ನು ಖಾಸಗಿ ಬಿಲ್ಡರ್‌ಗಳ (ರೀ-ಆಲ್ಟರ್ಸ್) ಮೂಲಕ ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ಜೊತೆಗೆ ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಮೂಲಕ ಅಪಾರ್ಟ್‌ಮೆಂಟ್ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವೆಡೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್ ಅವರು ತಿಳಿಸಿದ್ದಾರೆ.
ಬೆಂಗಳೂರು ರಿಯಲ್ ಎಸ್ಟೇಟ್ ಮಾಫಿಯಾ: ಬಿಡಿಎ, ಬಿಎಂಆರ್‌ಡಿಎ ಹೆಸರಿನಲ್ಲಿ 3,000ಕ್ಕೂ ಅನಧಿಕೃತ ಬಡಾವಣೆ!
ಖಾಸಗಿ ಫ್ಲ್ಯಾಟ್‌ಗಳಿಗೆ ಹೋಲಿಸರೆ ಬಿಡಿಎ ಫ್ಲ್ಯಾಟ್‌ಗಳು ಯಾವುದಕ್ಕೂ ಕಡಿಮೆಯಿಲ್ಲ. ಮಧ್ಯಮ ವರ್ಗದ ಜನರಿಗೆ ಸುಲಭವಾಗಿ ಕೈಗೆಟುಕುವ ದರದಲ್ಲಿ ಸೂರು ಕಲ್ಪಿಸುವ ಉದ್ದೇಶದಿಂದ ಬಿಡಿಎ ಕೆಲಸ ಮಾಡುತ್ತಿದೆ. ವಾಸಕ್ಕೆ ಬೇಕಾದ ಎಲ್ಲಾ ಮೂಲ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಆದರೂ ಕೆಲವು ಫ್ಲ್ಯಾಟ್‌ಗಳ ಖರೀದಿಗೆ ಗ್ರಾಹಕರು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿಯವರೊಂದಿಗೆ ಮಾತುಕತೆ ನಡೆಸಿ ಮಾರಾಟ ಮಾಡಲು ಯೋಜಿಸುತ್ತಿರುವುದಾಗಿ ಹೇಳಿದ್ದಾರೆ.
ಬಿಡಿಎ ಈವರೆಗೆ 38 ಸೆಕ್ಟರ್‌ಗಳಲ್ಲಿ ಒಟ್ಟಾರೆ 11,917 ಫ್ಲ್ಯಾಟ್‌ಗಳನ್ನು ನಿರ್ಮಿಸಿದ್ದು, ಇದರಲ್ಲಿ ಈವರೆಗೆ 8,331ಫ್ಲ್ಯಾಟ್‌ಗಳು ಮಾತ್ರ ಮಾರಾಟವಾಗಿವೆ. 3,586 ಮನೆಗಳು ಮಾರಾಟವಾಗದೆ ಉಳಿದಿವೆ. ಇದರಿಂದ ಬಿಡಿಎಗೆ ಕೋಟ್ಯಾಂತರ ರು. ನಷ್ಟವಾಗಿದೆ. ಈ ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗುತ್ತಿದೆ.
ಮಾರಾಟಕ್ಕೆ ಬಾಕಿಯಿರು ಫ್ಲ್ಯಾಟ್‌ಗಳು:
ಪ್ರಸ್ತುತ ತಿಪ್ಪಸಂದ್ರ 167 (ಒಟ್ಟು ಫ್ಲ್ಯಾಟ್‌ಗಳು 312), ಕಣಿಮಿಣಿಕೆ 2ನೇ ಹಂತ 465(672), ಕಣಿಮಿಣಿಕೆ 3ನೇ ಹಂತ 220(288), ಕಣಿಮಿಣಿಕೆ 4ನೇ ಹಂತ 43(108), ಕೋನದಾಸನಪುರ 130 (672), ಆಲೂರು 1ನೇ ಹಂತ 657 (1504), ವಲಗೇರಹಳ್ಳಿ 1ನೇ ಹಂತ 38 (640), ವಲಗೇರಹಳ್ಳಿ 2ನೇ ಹಂತ 12 (680), ಗುಂಜೂರು 1ನೇ ಹಂತ 132 (364), ಗುಂಜೂರು 2ನೇ ಹಂತ 32 (168) ಫ್ಲ್ಯಾಟ್‌ಗಳು ಮಾರಾಟವಾಗಬೇಕಿದೆ.