Asianet Suvarna News Asianet Suvarna News

Bengaluru: ಐಷಾರಾಮಿ ಫ್ಲ್ಯಾಟ್‌ ನಿರ್ಮಿಸಿದ ಬಿಡಿಎ: ಬೆಲೆ ಎಷ್ಟು?

*  ನಾಗರಬಾವಿಯಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣ
*  ಏಪ್ರಿಲ್‌, ಮೇಗೆ ಮಾರಾಟ
*  ಅಪಾರ್ಟ್‌ಮೆಂಟ್‌ ನಿರ್ಮಾಣದಲ್ಲಿ ಮಿವನ್‌ ತಂತ್ರಜ್ಞಾನ ಬಳಕೆ 
 

BDA Build Apartment in Bengaluru grg
Author
First Published Mar 17, 2022, 8:51 AM IST

ಬೆಂಗಳೂರು(ಮಾ.17):  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿ(BDA) ಇದೇ ಮೊದಲ ಬಾರಿಗೆ ಸುಮಾರು 1.04 ಕೋಟಿ ಬೆಲೆಯ (Flat) ಅಪಾರ್ಟ್‌ಮೆಂಟ್‌(Apartment) ನಿರ್ಮಿಸಿದ್ದು, ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಮಾರಾಟಕ್ಕೆ ಸಿದ್ಧತೆ ನಡೆಸಿದೆ. ನಾಗರಬಾವಿಯ ಸರ್ವೇ ನಂಬರ್‌ 103ರಲ್ಲಿ ಸುಮಾರು 1.23 ಎಕರೆ ಜಾಗದಲ್ಲಿ 3 ಬಿಎಚ್‌ಕೆಯ 120 ಪ್ಲಾಟ್‌ಗಳಿರುವ ಅಪಾರ್ಟ್‌ಮೆಂಟನ್ನು ಬಿಡಿಎ ನಿರ್ಮಿಸಿದೆ. ಪ್ರತಿಯೊಂದು ಫ್ಲ್ಯಾಟ್‌ ಸುತ್ತಳತೆ 1400 ಚದರ ಅಡಿಗಳಿದ್ದು, ಒಂದು ಪ್ಲಾಟ್‌ಗೆ ಬರೋಬ್ಬರಿ 1.04 ಕೋಟಿ ನಿಗದಿಪಡಿಸಲಾಗಿದೆ.

2017ರಲ್ಲೇ ಈ ಅಪಾರ್ಟ್‌ಮೆಂಟ್‌ ನಿರ್ಮಾಣ ಆರಂಭಗೊಂಡಿದ್ದರೂ ಭೂ ವಿವಾದದಿಂದಾಗಿ(Land Dispute) ಎರಡು ವರ್ಷ ನಿರ್ಮಾಣ ಕೆಲಸ ನಡೆದಿರಲಿಲ್ಲ. 2019ರಿಂದ ನಿರ್ಮಾಣ ಆರಂಭ ಮಾಡಿದ್ದು, 2021 ಆಗಸ್ಟ್‌ನಲ್ಲಿಯೇ ಪೂರ್ಣಗೊಳಿಸಬೇಕಿದ್ದ ಕಾಮಗಾರಿ ಕೋವಿಡ್‌(Covid-19) ಸೇರಿದಂತೆ ಇನ್ನಿತರ ಕಾರಣಗಳಿಂದ ವಿಳಂಬಗೊಂಡಿತ್ತು. ಇದೀಗ ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು ಸುಣ್ಣ, ಬಣ್ಣದ ಕೆಲಸವೂ ಮುಕ್ತಾಯವಾಗಲಿದೆ. ಈಗಾಗಲೇ ಅಪಾರ್ಟ್‌ಮೆಂಟ್‌ನ ಪ್ಲಾಟ್‌ಗಳನ್ನು ಮಾರಾಟ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ಸಿಕ್ಕಿದ ಕೂಡಲೇ ಮಾರಾಟ ಪ್ರಕ್ರಿಯೆ ಆರಂಭಿಸುವುದಾಗಿ ಬಿಡಿಎ ಅಭಿಯಂತರ ಸದಸ್ಯ ಶಾಂತರಾಜಣ್ಣ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಬೆಂಗಳೂರಿನ ಪರಿಷ್ಕೃತ ಮಾಸ್ಟರ್‌ ಪ್ಲ್ಯಾನ್ 2041 ಸಿದ್ಧಪಡಿಸುವ ಬಿಡಿಎ ನಿರ್ಧಾರಕ್ಕೆ ತೀವ್ರ ವಿರೋಧ!

ನಾಗರಬಾವಿ ಹೊರ ವರ್ತುಲ ರಸ್ತೆ ಸಮೀಪದ ಎತ್ತರ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗಿದೆ. ಕೆ.ಗೌಡ ಆ್ಯಂಡ್‌ ಕಂಪನಿಯು ಅಪಾರ್ಟ್‌ಮೆಂಟ್‌ ನಿರ್ಮಾಣದ ಗುತ್ತಿಗೆ ಪಡೆದಿದೆ. ಈ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕಾಗಿ ಖಾಸಗಿಯವರಿಂದ ಭೂಮಿ ಖರೀದಿ ಮಾಡಿದ್ದು ಅಪಾರ್ಟ್‌ಮೆಂಟ್‌ ದರವನ್ನು ನಿರ್ಮಾಣ ವೆಚ್ಚ ಮತ್ತು ಭೂಮಿ ದರದ ಆಧಾರದ ಮೇಲೆ ನಿಗದಿಪಡಿಸಿದ್ದೇವೆ. ಪ್ರಸ್ತುತ ಅಪಾರ್ಟ್‌ಮೆಂಟ್‌ನ ಒಳವಿನ್ಯಾಸದ ಕೆಲಸ ನಡೆಯುತ್ತಿದ್ದು, ಶೀಘ್ರವೇ ಸಿದ್ಧಗೊಳ್ಳಲಿದೆ. ಭೂಮಿಯ ದರ .40 ಕೋಟಿ ಇದ್ದು, ಗುತ್ತಿಗೆ ವೆಚ್ಚ, ಅಪಾರ್ಟ್‌ಮೆಂಟ್‌ ನಿರ್ಮಾಣ, ಬೆಸ್ಕಾಂ, ಜಲಮಂಡಳಿ ವೆಚ್ಚ ಸೇರಿದಂತೆ ಇತರೆ ಖರ್ಚು ವೆಚ್ಚ ಸೇರಿ ಫ್ಲ್ಯಾಟ್‌ಗಳ ದರ ನಿಗದಿಪಡಿಸಿದ್ದು, ಲಾಭವಿಲ್ಲದೆ ಪ್ರತಿ ಫ್ಲ್ಯಾಟ್‌ ಬೆಲೆ 1.04 ಕೋಟಿ ಎಂದು ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಮಿವನ್‌ ತಂತ್ರಜ್ಞಾನವನ್ನು(Mivan Technology) ಈ ಅಪಾರ್ಟ್‌ಮೆಂಟ್‌ ನಿರ್ಮಾಣದಲ್ಲಿ ಬಳಸಲಾಗಿದೆ. ಇಲ್ಲಿ ಸಾಮಾನ್ಯ ಬೀಮ್‌ ಮಾಡುವುದಿಲ್ಲ. ಬಾಕ್ಸ್‌ ಮಾದರಿಯಲ್ಲಿ ಫ್ರೇಮ್‌ ಇಟ್ಟು ಕಾಂಕ್ರಿಟ್‌ ಸುರಿದು ಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಮಳೆ ನೀರು ಕೊಯ್ಲು(Rain Water Harvesting) ವ್ಯವಸ್ಥೆ, ಮಕ್ಕಳಿಗಾಗಿ ಜಿಮ್‌ಪಾರ್ಕ್, ವಾಕಿಂಗ್‌ ಟ್ರ್ಯಾಕ್‌ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗುತ್ತಿದೆ. ಆದರೆ ಈಜುಕೊಳದ ವ್ಯವಸ್ಥೆ ಮಾಡಿಲ್ಲ. ಆದರೆ, ಆಧುನಿಕ ತಂತ್ರಜ್ಞಾನ (Modern Technology)ವ್ಯವಸ್ಥೆಗಳನ್ನು ನಿರ್ಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬಿಡಿಎ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

Corruption Case: 60 ಬಿಡಿಎ ಅಧಿಕಾರಿಗಳ ತನಿಖೆಗೆ ಅಸ್ತು

ಅಪಾರ್ಟ್‌ಮೆಂಟ್ಸ್‌ ಮಾರಾಟಕ್ಕೆ ಲಭ್ಯ

ಬಿಡಿಎ ಕಣಿಮಿಣಿಕೆಯಲ್ಲಿ 2, 3, 4ನೇ ಹಂತದಲ್ಲಿ ನಿರ್ಮಿಸಿರುವ 2 ಬಿಎಚ್‌ಕೆ (870 ಚದರ ಅಡಿ) ಅಪಾರ್ಟ್‌ಮೆಂಟ್‌ಗಳು, ಕೊಮ್ಮಘಟ್ಟದಲ್ಲಿ ನಿರ್ಮಾಣ ಮಾಡಿರುವ 2 ಬಿಎಚ್‌ಕೆ (830 ಚದರ ಅಡಿ), ವಲಗೇರಹಳ್ಳಿ 2 ಬಿಎಚ್‌ಕೆ (850 ಚದರ ಅಡಿ), ದೊಡ್ಡಬನಹಳ್ಳಿ 2 ಬಿಎಚ್‌ಕೆ (830 ಚದರ ಅಡಿ) ಅಪಾರ್ಟ್‌ಮೆಂಟ್‌ಗಳಲ್ಲಿ ಹಲವು ಫ್ಲ್ಯಾಟ್‌ಗಳು ಮಾರಾಟಕ್ಕೆ ಲಭ್ಯವಿದ್ದು, 25ರಿಂದ 44 ಲಕ್ಷದವರೆಗೆ ದರ ನಿಗದಿಪಡಿಸಲಾಗಿದೆ. ಸದ್ಯ ಚಂದ್ರಲೇಔಟ್‌ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯಿರುವ ನೂತನ 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳನ್ನು ಸರ್ಕಾರದ ಅನುಮತಿ ಸಿಕ್ಕಿದ ಕೂಡಲೇ ಮಾರಾಟ ಮಾಡುವುದಾಗಿ ಬಿಡಿಎ ತಿಳಿಸಿದೆ.

ಕೊಮ್ಮಘಟ್ಟ ಹಂತ 1 (2 ಬಿಎಚ್‌ಎ 830 ಚ.ಅಡಿಗಳು) ಮತ್ತು 2 (2 ಬಿಎಚ್‌ಕೆ 1060 ಚ.ಅಡಿಗಳು) ಹಾಗೂ ಕಣಿಮಿಣಿಕಿ ಹಂತ 2 (2 ಬಿಎಚ್‌ಕೆ 870 ಚ.ಅಡಿ) ಮತ್ತು 3 (2 ಬಿಎಚ್‌ಕೆ 1060 ಚ. ಅಡಿ) ಯೋಜನೆಗೆ ಶೇ.5ರಷ್ಟುರಿಯಾಯಿತಿ ಲಭ್ಯವಿದೆ.
 

Follow Us:
Download App:
  • android
  • ios