ಕೊಪ್ಪಳ(ಮಾ.06): ನಾವು ಕಷ್ಟ ಪಟ್ಟು ಮೇಲೆ ಬಂದವರಾಗಿದ್ದೇವೆ, ನಮ್ಮ ಮೇಲೆ ಬಹಳ ಜನರ ಕಣ್ಣಿವೆ. ಕಾಲ ಬಹಳ ಕೆಟ್ಟಿದೆ, ನಮ್ಮ ಯಶಸ್ಸು ಸಹಿಸದೆ ಷಡ್ಯಂತ ಮಾಡಿ ಹಾಳು ಮಾಡಲು ಬಹಳ ಜನ ಕಾಯುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ಹೇಳಿದ್ದಾರೆ. 

"

ಮಾನ ಹಾನಿ ಉಂಟು ಮಾಡುವ ವಿಡಿಯೋ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಸಂಬಂಧ ಜಿಲ್ಲೆಯ ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಹಲವಾರು ಘಟನೆ ನಡೆದಿವೆ. ಹೀಗಾಗಿ ನಾವು ಕೋರ್ಟ್ ಮೊರೆ ಹೋಗಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ. 

ರಾಸಲೀಲೆ CD ಸ್ಫೋಟ: ಕೋರ್ಟ್ ಮೆಟ್ಟಿಲೇರಿದ 6 ಸಚಿವರು, ಅಚ್ಚರಿ ಮೂಡಿಸಿದ ನಡೆ

ನಮಗೆ ಆತಂಕ ಏನೂ ಇಲ್ಲ. ಅಪಖ್ಯಾತಿ ತರುವ ಜನ ಬಹಳ ಇದ್ದಾರೆ. ಸತ್ಯ ಹೊಸಲು ದಾಟಿ ಬರುವ ಹೊತ್ತಿಗೆ ಸುಳ್ಳು ಊರೆಲ್ಲ ಸುತ್ತಿ ಬರತ್ತದೆ. ನಾವು ರಾಜೀನಾಮೆ ಕೊಟ್ಟು ಬಂದವರು, ನಮ್ಮ ಮೇಲೆ ಬಹಳಷ್ಟು ಜನ ಹಗೆ ಸಾಧಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

"

ರಾಸಲೀಲೆ ಸಿಡಿ ಸ್ಫೋಟವಾಗುತ್ತಿದ್ದಂತೆ ರಮೇಶ್‌ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ತಮ್ಮ ಬಳಿ ಇನ್ನೂ ಕೆಲವರ ಪ್ರಭಾವಿ ರಾಜಕಾರಣಿಗಳ ವಿಡಿಯೋಗಳು ಇವೆ ಎಂದು ಹೇಳಿದ್ದರು. ಹೀಗಾಗಿ ಸಚಿವ ಶಿವರಾಮ್ ಹೆಬ್ಬಾರ್, ಸಚಿವ ಬಿ‌.ಸಿ ಪಾಟೀಲ್, ನಾರಾಯಣ ಗೌಡ, ಸಚಿವ ಕೆ ಸುಧಾಕರ್, ಸಚಿವ ಎಸ್ ಟಿ ಸೋಮಶೇಖರ್, ಸಚಿವ ಭೈರತಿ ಬಸವರಾಜು ಅವರು ಮಾಧ್ಯಮಗಳು ತಮ್ಮ ವಿರುದ್ಧ ವರದಿ ಬಿತ್ತರಿಸದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.