ಬೆಂಗಳೂರು, (ಮಾ.05): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಈ ಪ್ರಕರಣ ಪ್ರಭಾವಿ ರಾಜಕಾರಣಿ ರಮೇಶ್ ಜಾರಕಿಹೊಳಿಯವರ ಸಚಿವ ಸ್ಥಾನ ನುಂಗಿದೆ.

ಈ ಪ್ರಕರಣದ ಬೆನ್ನಲ್ಲೇ ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡಬಾರದು ಎಂದು ರಾಜ್ಯದ 6 ಸಚಿವರು ಕೋರ್ಟ್ ಮೆಟ್ಟಿಲೇರಿದ್ದಾರೆ.ಜಾರಕಿಹೊಳಿ ಸಿ.ಡಿ. ರಿಲೀಸ್ ಮಾಡಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ತಮ್ಮ ಬಳಿ ಇನ್ನೂ ಕೆಲವರ ಪ್ರಭಾವಿ ರಾಜಕಾರಣಿಗಳ ವಿಡಿಯೋಗಳು ಇವೆ ಎಂದು ಹೇಳಿದ್ದಾರೆ. ಇದರ ಮಧ್ಯೆ ಇದೀಗ ಈ ಸಚಿವರ ನಡೆ ಅಚ್ಚರಿ ಮೂಡಿಸುವುದರ ಜೊತೆಗೆ ಸಚಿವರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಜಾರಕಿಹೊಳಿ ರಾಸಲೀಲೆ CD: ಶೇ. 60ರಷ್ಟು ಶಾಸಕರಿಗೆ ಇದೆ ಅದೇ ಪ್ರವೃತ್ತಿ, ಸ್ಫೋಟಕ ಹೇಳಿಕೆ

ಹೌದು...ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ‌.ಸಿ ಪಾಟೀಲ್, ಕ್ರೀಡಾ ಸಚಿವ ನಾರಾಯಣ ಗೌಡ, ಆರೋಗ್ಯ ಸಚಿವ ಕೆ ಸುಧಾಕರ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಮಾಧ್ಯಮಗಳು ತಮ್ಮ ವಿರುದ್ಧ ವರದಿ ಬಿತ್ತರಿಸದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಬಿಡುಗಡೆಯಾಗಿ ಸಾಕಷ್ಟು ಕೋಲಾಹಲ ಸೃಷ್ಟಿಸಿದೆ. ಅಲ್ಲದೇ ಅವರ ಮಂತ್ರಿ ಸ್ಥಾನವನ್ನು ನುಂಗಿದೆ. ಇದೀಗ ಈ 6 ಸಚಿವರು ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಹಾಗೇ ಅನುಮಾನ, ಪ್ರಶ್ನೆಗಳು ಮೂಡಿಸಿದೆ.

ಈ ಆರು ಸಚಿವರುಗಳು ಏಕೆ ಕೋರ್ಟ್ ಮೊರೆ ಹೋಗಿದ್ಯಾಕೆ? ಇವರ ವೀಡಿಯೊ ಇರೋ‌ ಭಯ ಇದ್ಯಾ? ಹೀಗೆ ಹಲವು ಪ್ರಶ್ನೆ ಉದ್ಭವಿಸಿವೆ. ಇನ್ನು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ,