Asianet Suvarna News Asianet Suvarna News

ಬಿಬಿಎಂಪಿ ವಾರ್ಡ್‌ ಮೀಸಲು ಕರಡು ಪಟ್ಟಿ ಇನ್ನೊಂದು ವಾರದಲ್ಲಿ ಪ್ರಕಟ?

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ.30ರೊಳಗೆ ವಾರ್ಡ್‌ ಅಂತಿಮ ಮೀಸಲಾತಿ ಪಟ್ಟಿಪ್ರಕಟಿಸಬೇಕಿದೆ. ಹೀಗಾಗಿ ಇನ್ನೊಂದು ವಾರದಲ್ಲಿ ಕರಡು ಪಟ್ಟಿ ಪ್ರಕಟಿಸುವ ಸಾಧ್ಯತೆ ಇವೆ. 

BBMP ward reserve draft list to be published next week gvd
Author
First Published Nov 12, 2022, 11:36 AM IST

ಬೆಂಗಳೂರು (ನ.12): ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ.30ರೊಳಗೆ ವಾರ್ಡ್‌ ಅಂತಿಮ ಮೀಸಲಾತಿ ಪಟ್ಟಿಪ್ರಕಟಿಸಬೇಕಿದೆ. ಹೀಗಾಗಿ ಇನ್ನೊಂದು ವಾರದಲ್ಲಿ ಕರಡು ಪಟ್ಟಿ ಪ್ರಕಟಿಸುವ ಸಾಧ್ಯತೆ ಇವೆ. ಹೈಕೋರ್ಟ್‌ ಡಿ.31ರೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕು, ಅದಕ್ಕೂ ಮುನ್ನ ರಾಜ್ಯ ಸರ್ಕಾರ ನ.30ರೊಳಗೆ ವಾರ್ಡ್‌ ಮೀಸಲಾತಿ ನಿಗದಿ ಮಾಡಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ. ಈಗಾಗಲೇ ವಾರ್ಡ್‌ ಮೀಸಲಾತಿ ಪ್ರಕಟಿಸುವ ಕುರಿತಂತೆ ನ್ಯಾ.ಭಕ್ತವತ್ಸಲ ಸಮಿತಿ ಅ.30ರಂದೇ ರಾಜ್ಯ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ಕರಡು ಪಟ್ಟಿಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು 15 ದಿನ ಅಥವಾ 7 ದಿನ ಕಾಲವಕಾಶ ನೀಡಲಿದೆ.

ಮತ್ತೆ ಕಾಲಾವಕಾಶ ಕೋರಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ: ವಾರ್ಡ್‌ ಮೀಸಲಾತಿ ಮತ್ತು ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಏಕಸದಸ್ಯ ಪೀಠ ಸ್ಪಷ್ಟವಾದ ಸೂಚನೆ ನೀಡಿದೆ. ಡಿ.31ರೊಳಗೆ ಚುನಾವಣೆ ನಡೆಸಲೇಬೇಕು ಎಂದೂ ತಿಳಿಸಿದೆ. ಆದರೆ, ಅರ್ಜಿ ವಿಚಾರಣೆ ವೇಳೆ ಹೊಸದಾಗಿ ವಾರ್ಡ್‌ ಮೀಸಲಾತಿ ಪಟ್ಟಿಸಿದ್ಧಪಡಿಲು 16 ವಾರ ಕಾಲಾವಕಾಶ ಕೋರಲಾಗಿತ್ತು. ಅದಕ್ಕೊಪ್ಪದ ಹೈಕೋರ್ಟ್‌ ನ.1ರಿಂದ 30ರವರೆಗಿನ ಕಾಲಾವಕಾಶ ನೀಡಿತ್ತು. ರಾಜ್ಯ ಸರ್ಕಾರ ಈ ಹಿಂದೆ ಕೋರಿದ್ದ ಕಾಲಾವಕಾಶವನ್ನು ಗಮನಿಸಿದರೆ ವಾರ್ಡ್‌ ಮೀಸಲಾತಿ ಪಟ್ಟಿಸಿದ್ಧಪಡಿಸಲು ಮತ್ತಷ್ಟುಕಾಲಾವಕಾಶ ಕೋರಿ ಹೈಕೊರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.

Bengaluru: ವಸತಿ ಜಾಗದಲ್ಲಿ ಅನಧಿಕೃತ ಅಂಗಡಿಗಳಿದ್ದರೆ ಬಂದ್: ಬಿಬಿಎಂಪಿ

ಪಾಲಿಕೆ ವಾರ್ಡ್‌ ಮೀಸಲು ವರದಿ ಸರ್ಕಾರಕ್ಕೆ ಸಲ್ಲಿಕೆ: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿದ್ದ ಸೂಚನೆ ಮೇರೆಗೆ ನ್ಯಾ.ಭಕ್ತವತ್ಸಲ ಸಮಿತಿ ವಾರ್ಡ್‌ಗಳ ಮೀಸಲಾತಿ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕಳೆದ ಸೆಪ್ಟೆಂಬರ್‌ 30ರಂದು ಹೈಕೋರ್ಟ್‌ ಈ ವರ್ಷದ ಡಿಸೆಂಬರ್‌ 31ರೊಳಗೆ ಚುನಾವಣೆ ಮುಗಿಸಬೇಕು, ಅಕ್ಟೋಬರ್‌ 31ರೊಳಗೆ ನ್ಯಾ.ಭಕ್ತವತ್ಸಲ ಸಮಿತಿ ಮೀಸಲಾತಿ ಪ್ರಕಟಿಸಲು ವರದಿ ನೀಡಬೇಕು, ನ.30ರೊಳಗೆ ರಾಜ್ಯ ಸರ್ಕಾರ ಅಂತಿಮ ಮೀಸಲಾತಿ ಪಟ್ಟಿಪ್ರಕಟಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತ್ತು. ಅದರಂತೆ ನ್ಯಾ. ಭಕ್ತವತ್ಸಲ ಸಮಿತಿ ಮೀಸಲಾತಿ ನಿಗದಿಪಡಿಸಿ ತನ್ನ ವರದಿಯನ್ನು ಸೋಮವಾರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ.

Bengaluru: ಬಿಬಿಎಂಪಿಗೆ 130 ಕೋಟಿ ತೆರಿಗೆ ಮೋಸ!

ತಿಂಗಳಾಂತ್ಯದೊಳಗೆ ಮೀಸಲಾತಿ ಪಟ್ಟಿ: ರಾಜ್ಯ ಸರ್ಕಾರ ಸಮಿತಿ ನೀಡಿರುವ ವರದಿ ಆಧರಿಸಿ 15 ದಿನಗಳೊಳಗಾಗಿ ಮೀಸಲಾತಿ ಕರಡು ಪಟ್ಟಿಯನ್ನು ಸಿದ್ಧಪಡಿಸಿ ಅಧಿಸೂಚನೆ ಪ್ರಕಟಿಸಿ, ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಿಸಬೇಕಿದೆ, ಬಂದ ಆಕ್ಷೇಪಣೆಯನ್ನು ಪರಿಶೀಲಿಸಿ, ಮೀಸಲಾತಿಯಲ್ಲಿ ಬದಲಾವಣೆಯನ್ನು ಮಾಡಿ ಹೊಸದಾಗಿ ಮೀಸಲಾತಿ ಪಟ್ಟಿಸಿದ್ಧಪಡಿಸಿ ನ. 30ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಬೇಕಿದೆ.

Follow Us:
Download App:
  • android
  • ios