ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಿಯಮ ತಿದ್ದುಪಡಿಗೆ ಪಾಲಿಕೆ ಪತ್ರ
ಅನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ಪ್ರಾಣಿದಯಾ ಸಂಘಟನೆಗಳೇ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ನಗರದಲ್ಲಿ ಸಂತಾನಹರಣ ಚಿಕಿತ್ಸೆಗೆ ಪ್ರಾಣಿದಯಾ ಸಂಘಗಳು ಆಸಕ್ತಿ ವಹಿಸುತ್ತಿಲ್ಲ. ಇದರಿಂದ ನಗರದಲ್ಲಿ ಸಮರ್ಪಕವಾಗಿ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಿಯಮ ತಿದ್ದುಪಡಿಗೆ ಪ್ರಾಣಿದಯಾ ಹಿತರಕ್ಷಣಾ ಮಂಡಳಿಗೆ ಪತ್ರ ಬರೆಯುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಬೆಂಗಳೂರು(ಜ.29): ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಪ್ರಾಣಿದಯಾ ಸಂಘಟನೆಗಳೇ ಮಾಡಬೇಕು ಎನ್ನುವ ನಿಯಮ ತಿದ್ದುಪಡಿ ಮಾಡುವಂತೆ ಪ್ರಾಣಿ ದಯಾ ಹಿತರಕ್ಷಣಾ ಮಂಡಳಿಗೆ ಪತ್ರ ಬರೆಯುವುದಾಗಿ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ಪ್ರಾಣಿದಯಾ ಸಂಘಟನೆಗಳೇ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ನಗರದಲ್ಲಿ ಸಂತಾನಹರಣ ಚಿಕಿತ್ಸೆಗೆ ಪ್ರಾಣಿದಯಾ ಸಂಘಗಳು ಆಸಕ್ತಿ ವಹಿಸುತ್ತಿಲ್ಲ. ಇದರಿಂದ ನಗರದಲ್ಲಿ ಸಮರ್ಪಕವಾಗಿ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಿಯಮ ತಿದ್ದುಪಡಿಗೆ ಪ್ರಾಣಿದಯಾ ಹಿತರಕ್ಷಣಾ ಮಂಡಳಿಗೆ ಪತ್ರ ಬರೆಯುವುದಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಾರ್ ಗರ್ಲ್‌ಗೆ ಉಡುಗೊರೆ ನೀಡಲು ವಾಚ್ ಅಂಗಡಿಗೆ ಕನ್ನ!
ನಾಯಿಗಳ ಎಬಿಸಿಗೆ ಬೆಂಗಳೂರು ಪೂರ್ವ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಮೂರು ಬಾರಿ ಟೆಂಡರ್ ಕರೆದಿದ್ದರೂ, ಯಾವುದೇ ಟೆಂಡರ್‌ದಾರರು ಮುಂದಾಗಿಲ್ಲ. ಹೀಗಾಗಿ, ನಾಯಿಗಳ ಸಂತಾನೋತ್ಪತ್ತಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ಸೂಚಿಸುವಂತೆ ಹಾಗೂ ಬೇರೆ ವೈದ್ಯರಿಂದ ನಾಯಿಗಳಿಗೆ ಎಬಿಸಿ ಮಾಡಲು ಅವಕಾಶ ನೀಡುವಂತೆ ಪ್ರಾಣಿದಯಾ ಹಿತರಕ್ಷಣಾ ಮಂಡಳಿಗೆ ಮನವಿ ಮಾಡಲಾಗುವುದು ಎಂದಿದ್ದಾರೆ.
ನಗರದಲ್ಲಿ ಮೂರು ಲಕ್ಷ ನಾಯಿಗಳಿದ್ದು, ಇದರ ಎಬಿಸಿ ಮಾಡುವುದಕ್ಕೆ ವಲಯಕ್ಕೆ ಒಂದು ಎಬಿಸಿ ಕೇಂದ್ರದಿಂದ ಸಾಧ್ಯವಿಲ್ಲ. ಹೀಗಾಗಿ, ವಿಧಾನಸಭಾ ಕ್ಷೇತ್ರವಾರು ಒಂದು ಅಥವಾ ವಲಯದಲ್ಲಿ ಮೂರರಿಂದ ನಾಲ್ಕು ಎಬಿಸಿ ಕೇಂದ್ರಗಳನ್ನು ಸ್ಥಾಪನೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈ ವರ್ಷ ಯಲಹಂಕ ಮತ್ತು ದಾಸರಹಳ್ಳಿ ವ್ಯಾಪ್ತಿಯಲ್ಲಿ ಈ ವರ್ಷ ಶೇ.100ರಷ್ಟುನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಉಳಿದ ಆರು ವಲಯಗಳಲ್ಲಿ ಶೇ.50ರಷ್ಟುಎಬಿಸಿ ಸಹ ಆಗಿಲ್ಲ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.