ಡೆಂಘೀ ನಿಯಂತ್ರಣಕ್ಕೆ ಬಿಬಿಎಂಪಿ ಹೊಸ ಪ್ಲ್ಯಾನ್!

ಬಿಸಿಲು ಮಳೆಯ ಆಟದಲ್ಲಿ ಇಲ್ಲ ಸಲ್ಲದ ರೋಗಗಳು ಹರಡುತ್ತವೆ. ಈ ಬೆನ್ನಲ್ಲೇ ಡೆಂಘೀ, ಮಲೇರಿಯಾ ಪ್ರಕರಣಗಳೂ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಬಿಬಿಎಂಪಿ ಹೊಸ ಯೋಜನೆಯೊಂದನ್ನು ಹಮ್ಮಿಕೊಂಡಿದೆ. ಹೇಗೆ?

BBMP to use garbage autos to sensitize people about Dengue

ಬೆಂಗಳೂರು (ಜೂ.22): ನಗರದಲ್ಲಿ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳ ತಡೆಗೆ ಬಿಬಿಎಂಪಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ತ್ಯಾಜ್ಯ ಸಂಗ್ರಹಿಸಲು ಮನೆ ಮನೆಗೆ ಹೋಗುವ ಆಟೋಗಳಿಗೆ ಧ್ವನಿವರ್ಧಕ ಮೂಲಕ ಜನರಲ್ಲಿ ಜಾಗೃತಿ ಸಂದೇಶ ನೀಡಲು ತೀರ್ಮಾನಿಸಿದೆ.

ಶುಂಠಿ ಎಂಬ ಮನೆಮದ್ದು

ರಾಜ್ಯದ ಇತರೆ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಡೆಂಘೀ ಜ್ವರಕ್ಕೆ ತುತ್ತಾದವರ ಸಂಖ್ಯೆ ಹೆಚ್ಚಾಗಿದೆ. ಕಳೆದ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ೭೨೯ ಡೆಂಘೀ ಪ್ರಕರಣಗಳು ದಾಖಲಾಗಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳು ಮುಂದಾಗಿರುವ ಬಿಬಿಎಂಪಿ, ಎಲ್ಲೆಡೆ ಫಾಗಿಂಗ್, ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಿದೆ. ಅದರ ಜತೆಗೆ ಇದೀಗ ಪ್ರತಿದಿನ ತ್ಯಾಜ್ಯ ಸಂಗ್ರಹಕ್ಕಾಗಿ ಮನೆ ಮನೆಗೆ ತೆರಳುವ ಆಟೋ ಟಿಪ್ಪರ್‌ಗಳಲ್ಲಿ ಡೆಂಘೀ ಹರಡುವ ಬಗೆ, ಅದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮೈಕ್ (ಧ್ವನಿವರ್ಧಕ) ಮೂಲಕ ಮುನ್ನೆಚ್ಚರಿಕೆ ಕ್ರಮ ಪ್ರಕಟಿಸಲು ನಿರ್ಧರಿಸಲಾಗಿದೆ.

ಮತ್ತೆ ಮತ್ತೆ ಕಾಡೋ ಅನಾರೋಗ್ಯದಿಂದ ಮುಕ್ತರಾಗಿ

ಬಿಬಿಎಂಪಿ ಆರೋಗ್ಯ ವಿಭಾಗ ಆ ಕುರಿತು ಈಗಾಗಲೆ ಚರ್ಚಿಸಿದ್ದು, ಇನ್ನೊಂದು ವಾರದಲ್ಲಿ ಅದನ್ನು ಜಾರಿಗೊಳಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿ ಡೆಂಘೀ ಹರಡುವ ಸೊಳ್ಳೆ ಉತ್ಪತ್ತಿಯಾಗಲು ಕಾರಣ, ಅದನ್ನು ತಡೆಯಲು ಏನೆಲ್ಲ ಕ್ರಮ ಕೈಗೊಳ್ಳಬೇಕು, ಒಂದು ವೇಳೆ ಡೆಂಘೀ ಜ್ವರ ಕಾಣಿಸಿಕೊಂಡರೆ ಅದಕ್ಕೆ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಎಂಬುದನ್ನು ಧ್ವನಿ ಸಂದೇಶ ತಿಳಿಸಲಾಗಿದೆ. ಆ ಆಡಿಯೋವನ್ನು ಆಟೋಗಳಿಗೆ ಅಳವಡಿಸಲಾಗಿರುವ ಸ್ಪೀಕರ್ ಮೂಲಕ ಪ್ರಸಾರ ಮಾಡಲಾಗುತ್ತದೆ.

ನಗರದಲ್ಲಿ ಡೆಂಘೀ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆರಂಭಿಸಲಾಗುತ್ತಿದ್ದು, ಅದಕ್ಕಾಗಿ ತ್ಯಾಜ್ಯವಿಲೇವಾರಿ ಮಾಡುವ ಟಿಪ್ಪರ್ ಆಟೋಗಳಲ್ಲಿ ಜಾಗೃತಿ ಧ್ವನಿ ಸಂದೇಶ ಪ್ರಕಟಿಸಲಾಗುವುದು. 
- ಗಂಗಾಂಬಿಕೆ ಮೇಯರ್

Latest Videos
Follow Us:
Download App:
  • android
  • ios