ಬೆಂಗಳೂರು(ಜು.31): ಸರ್ಕಾರದ ಆದೇಶಿಸಿದ್ದರೂ ಕೋವಿಡ್‌ ಸೋಂಕಿತರಿಗೆ ಹಾಸಿಗೆ ಮೀಸಲಿಡದ ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ 19 ಖಾಸಗಿ ಆಸ್ಪತ್ರೆಗಳಲ್ಲಿನ ಒಟ್ಟು 712 ಹಾಸಿಗೆ ವಶಕ್ಕೆ ಪಡೆಯಲಾಗಿದೆ.

ದಕ್ಷಿಣ ವಲಯದ ಆರೋಗ್ಯ ಅಧಿಕಾರಿ ಡಾ. ಶಿವಕುಮಾರ್‌ ನೇತೃತ್ವದಲ್ಲಿ ಗುರುವಾರ ಪರಿಶೀಲನೆ ನಡೆಸಿಲಾಗಿದೆ. ಈ ವೇಳೆಯಲ್ಲಿ ರಾಜ್ಯ ಸರ್ಕಾರ ಸೂಚನೆ ಮೇರೆಗೆ ಈ 17 ಖಾಸಗಿ ಆಸ್ಪತೆಗಳ ಶೇ.50ರಷ್ಟುಹಾಸಿಗೆಗಳನ್ನು ಬಿಬಿಎಂಪಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ವಶಕ್ಕೆ ಪಡೆದಿದ್ದು, ಹಾಸಿಗೆ ಲಭ್ಯತೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಆಸ್ಪತ್ರೆಗಳ ಎದುರು ಬ್ಯಾನರ್‌ ಅಳವಡಿಸಿದೆ.

ಬೆಂಗಳೂರು: ಕೊರೋನಾ ನಡುವೆ ವರಮಹಾಲಕ್ಷ್ಮಿ ಹಬ್ಬ ಸಡಗರ

ಈ ಹಿಂದೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೋವಿಡ್‌ ಸೋಂಕಿತರಿಗೆ ಹಾಸಿಗೆ ಮೀಸಲಿಡಲು ಸೂಚಿಸಿದ್ದರೂ ಖಾಸಗಿ ಆಸ್ಪತ್ರೆಗಳು ನಿರ್ಲಕ್ಷ್ಯ ತಳೆದಿದ್ದವು. ಶೋಕಾಸ್‌ ನೋಟಿಸ್‌ ಜಾರಿ ಮಾಡಿದರೂ ಪ್ರಯೋಜವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಸಿಗೆ ವಶಕ್ಕೆ ಪಡೆಯಲಾಗಿದೆ.

ಮನೆಯಲ್ಲಿ ಹೀಗೆ ಮಾಡಿದ್ರೆ ದರಿದ್ರ ಲಕ್ಷ್ಮಿ ವಕ್ಕರಿಸುವುದು ಖಂಡಿತ!

ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಬಸವನಗುಡಿ ಕ್ಷೇತ್ರದ 4 ಆಸ್ಪತ್ರೆಗಳಿಂದ 114, ವಿಜಯನಗರ ಕ್ಷೇತ್ರದ 4 ಆಸ್ಪತೆಗಳಿಂದ 285, ಪದ್ಮನಾಭನಗರ ಕ್ಷೇತ್ರದ 5 ಆಸ್ಪತ್ರೆಗಳಿಂದ 155, ಬಿಟಿಎಂ ಲೇಔಟ್‌ ಕ್ಷೇತ್ರದ 4 ಆಸ್ಪತೆಗಳಿಂದ 54 ಹಾಗೂ ಚಿಕ್ಕಪೇಟೆ ಕ್ಷೇತ್ರದ 3 ಆಸ್ಪತ್ರೆಗಳಿಂದ 104 ಸೇರಿ ಒಟ್ಟು 712 ಹಾಸಿಗೆ ವಶಕ್ಕೆ ಪಡೆಯಲಾಗಿದೆ ಎಂದು ಡಾ. ಶಿವಕುಮಾರ್‌ ತಿಳಿಸಿದರು.

ಪೊಲೀಸ್‌ ಠಾಣೆಗಳಲ್ಲಿ ದೂರು:

ಬಸವನಗುಡಿ ವಿಧಾನಸಭಾ ಕ್ಷೇತ್ರದ ಅನುಗ್ರಹ, ವಿಠಲ, ವಿನಾಯಕ, ಪ್ರಶಾಂತ್‌ ಮತ್ತು ರಾಧಾಕೃಷ್ಣ ಆಸ್ಪತ್ರೆಗಳು, ವಿಜಯನಗರ ವಿಧಾನಸಭಾ ಕ್ಷೇತ್ರದ ಗುರುಶ್ರೀ, ಕಾಲಭೈರವೇಶ್ವರ, ಪದ್ಮಶ್ರೀ ಮತ್ತು ಮಾರುತಿ ಆಸ್ಪತ್ರೆಗಳು, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪ್ರೇಮೆಡ್‌, ಎನ್‌.ಯು.ದೀಪಕ್‌, ಸೇವಾಕ್ಷೇತ್ರ ಮತ್ತು ಉದ್ಭವ ಆಸ್ಪತ್ರೆಗಳು, ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಗಂಗೋತ್ರಿ, ಅಕ್ಯೂರ್‌ ಮತ್ತು ಕಾರಂತ ಆಸ್ಪತ್ರೆಗಳು ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಚ್‌.ಸಿ.ಜಿ ಕ್ಯಾನ್ಸರ್‌ ಆಸ್ಪತ್ರೆ, ಟ್ರಿನಿಟಿ ಹಾಗೂ ಮೈಯಾ ಆಸ್ಪತ್ರೆಗಳ ತಾತ್ಕಾಲಿಕ ಪರವಾನಗಿ ರದ್ದುಗೊಳಿಸಲಾಗಿದೆ. ಅಲ್ಲದೆ ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ ಎಂದು ದಕ್ಷಿಣ ವಲಯ ಆರೋಗ್ಯಾಧಿಕಾರಿ ಡಾ. ಶಿವಕುಮಾರ್‌ ರವರು ತಿಳಿಸಿದರು.