ಬೆಂಗಳೂರು(ಜು.23): ಕೊರೋನಾ ಸೋಂಕಿನಿಂದ ಕಳೆದ ಆರು ತಿಂಗಳಿನಲ್ಲಿ ಎಲ್ಲ ವರ್ಗದ ಜನರ ಬದುಕು ಉಲ್ಟಾಪಲ್ಟಾಆಗಿದೆ. ಸೋಂಕಿಗೆ ಲಸಿಕೆ ಕಂಡು ಹಿಡಿಯುವುದಕ್ಕೆ ಇಡೀ ವಿಶ್ವವೇ ಪ್ರಯತ್ನಿಸುತ್ತಿದೆ. ಅಲ್ಲಿಯವರಿಗೆ ನಮಗಿರುವ ಲಸಿಕೆ ಎಂದರೆ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಅನುಸರಿಸುವ ಮೂಲಕ ಸರ್ಕಾರ ಮತ್ತು ಸೋಂಕು ನಿಯಂತ್ರಣ ಕಾರ್ಯಗಳಿಗೆ ಸಹಕಾರ ನೀಡುವುದಾಗಿದೆ ಎಂದು ಬಿಬಿಎಂಪಿ ಕೋವಿಡ್‌ ನಿಯಂತ್ರಣ ಜಾಗೃತಿಯ ರಾಯಭಾರಿ ನಟ ರಮೇಶ್‌ ಅರವಿಂದ್‌ ಹೇಳಿದ್ದಾರೆ.

ರಮೇಶ್‌ ಅವರು ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಕೊರೋನಾ ಸೋಂಕಿನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವಿಡಿಯೋ ಅನ್ನು ಬಿಬಿಎಂಪಿ ಬುಧವಾರ ಬಿಡುಗಡೆ ಮಾಡಿದೆ.

ಬಸವೇಶ್ವರನಗರ ಕೋವಿಡ್‌ ನಿಗಾ ಕೇಂದ್ರ ಉದ್ಘಾಟನೆ: ಸೋಂಕು ಲಕ್ಷಣ ಇಲ್ಲದವರಿಗೆ ಇಲ್ಲಿ ಚಿಕಿತ್ಸೆ

ಈ ವಿಡಿಯೋದಲ್ಲಿ ರಮೇಶ್‌ ಅವರು, ಕೊರೋನಾ ಬರುವ ಮೊದಲು ಮನುಷ್ಯ ತಾನು ಎಲ್ಲವನ್ನು ನಿಯಂತ್ರಿಸುತ್ತಿರುತ್ತೇನೆ ಎಂಬ ಮನಸ್ಥಿತಿ ಹೊಂದಿದ್ದನು. ಕೊರೋನಾ ಬಂದು ಎಲ್ಲರ ಕಪಾಳಕ್ಕೆ ಹೊಡೆದು ನೀನು ಅಂದುಕೊಂಡಿರುವುದು ಜೀವನವಲ್ಲ, ಏನು ನಡೆಯಲಿದೆ ಅದುವೇ ಜೀವನ ಎಂಬ ಬಹುದೊಡ್ಡ ಪಾಠವನ್ನು ಕಲಿಸಿದೆ.

ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ನಟ-ನಟಿಯರು, ಕಲಾವಿದರು ಚಿತ್ರೀಕರಣದಿಂದ ದೂರವಾಗಿದ್ದಾರೆ. ಸಣ್ಣ ಉದ್ದಿಮೆದಾರರು, ಅಂಗಡಿ ಮುಂಗಟ್ಟು ಮಾಲೀಕರು, ಬೀದಿ ಬದಿ ವ್ಯಾಪಾರಿಗಳು, ದಿನಗೂಲಿ ನೌಕರರು ಕೆಲಸವಿಲ್ಲದೇ ಕಷ್ಟಅನುಭವಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಪತ್ರಕರ್ತರು ಇತರೆ ಇಲಾಖೆ ಅಧಿಕಾರಿ ಸಿಬ್ಬಂದಿ ಕೆಲಸದ ಒತ್ತಡದಲ್ಲಿ ಸಿಲುಕಿ ಮೊತ್ತೊಂದು ರೀತಿಯ ಸಮಸ್ಯೆ ಒಳಗಾಗಿದ್ದಾರೆ ಎಂದಿದ್ದಾರೆ.

ಪಾಲಿಕೆ ಕೊರೋನಾ ಜಾಗೃತಿಗೆ ನಟ ರಮೇಶ್‌ ರಾಯಭಾರಿ

ಸಾರ್ವಜನಿಕರು ಸರ್ಕಾರದ ಆದೇಶ, ನಿಯಮ ಪಾಲಿಸದ ಕಾರಣ ಮತ್ತೆ ಲಾಕ್‌ಡೌನ್‌ ಮಾಡಬೇಕಾಯಿತು. ಸದ್ಯ ಲಾಕ್‌ಡೌನ್‌ ಮುಕ್ತರಾಗಿದ್ದೇವೆ. ಹೊರೆತು ಕೊರೋನಾದಿಂದ ಮುಕ್ತರಾಗಿಲ್ಲ. ಹಾಗಾಗಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಗುಂಪಾಗಿ ಸೇರದೇ ಸಾಧ್ಯವಾದಷ್ಟುಆರು ಅಡಿ ಸಾಮಾಜಿ ಅಂತರ ಕಾಯ್ದುಕೊಳ್ಳುಬೇಕು. ಸೋಂಕಿನ ಲಕ್ಷಣ, ಉಸಿರಾಟ ತೊಂದರೆ ಇಲ್ಲದವರು ಆಸ್ಪತ್ರೆಗೆ ದಾಖಲಾಗಿ ತೀವ್ರ ತೊಂದರೆಗೆ ಒಳಗಾದ ರೋಗಿಗೆ ಸಮಸ್ಯೆ ಉಂಟು ಮಾಡದೇ ಮನೆಯಲ್ಲೇ ಚಿಕಿತ್ಸೆ ಪಡೆಯಬೇಕಿದೆ ಎಂದು ಸಲಹೆ ನೀಡಿದ್ದಾರೆ.