ಬೆಂಗಳೂರು ವೈದ್ಯೆಗೆ ನಗ್ನ ಫೋಟೋ ಕೇಳಿದ ಬಸವನಗುಡಿ PSI ಕೇಸಲ್ಲಿ ಬಿಗ್ ಟ್ವಿಸ್ಟ್!
ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯ ಪಿಎಸ್ಐ ರಾಜಕುಮಾರ ಜೋಡಟ್ಟಿ ವಿರುದ್ಧ ವೈದ್ಯೆಯೊಬ್ಬರು ನೀಡಿದ್ದ ದೂರಿನಲ್ಲಿ ಹೊಸ ತಿರುವು ಪಡೆದುಕೊಂಡಿದೆ. ದೂರುದಾರ ವೈದ್ಯೆಯ ಸಹೋದರ ಎಂದು ಹೇಳಿಕೊಂಡು ಬಂದ ವ್ಯಕ್ತಿಯಿಂದಲೇ ಈ ತಿರುವು ಸಿಕ್ಕಿದೆ.
ಬೆಂಗಳೂರು (ನ.15): ಸಿಲಿಕಾಕ್ ಸಿಟಿ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾನೆಯ ಪಿಎಸ್ಐ ರಾಜಕುಮಾರ ಜೋಡಟ್ಟಿ ಅವರು ಖಾಸಗಿ ಆಸ್ಪತ್ರೆಯೊಂದರ ವೈದ್ಯೆಯ ನಗ್ನ ಫೋಟೋ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ಕೊಟ್ಟ ಯುವತಿಯ ಸಹೋದರ ಎಂದು ಹೇಳಿಕೊಂಡ ಬಂದ ವ್ಯಕ್ತಿಯಿಂದ ಇಡೀ ಕೇಸಿಗೆ ರೋಚಕ ತಿರುವು ಸಿಕ್ಕಿದೆ. ಅಸಲಿಗೆ ಇಲ್ಲಿ ಸಮಾಜ ಕಾಯುವ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ವೈದ್ಯೆಯ ಹೆಸರನಲ್ಲಿ ಮುಂದಾಗಿದ್ದ ಪೂರ್ಣ ವಿವರ ಇಲ್ಲಿದೆ ನೋಡಿ...
ಬಸವನಗುಡಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ನಿಂದ ವೈದ್ಯೆಗೆ ಕಿರುಕುಳ ಆರೋಪಕ್ಕೆ ದೂರು ಕೊಟ್ಟ ಯುವತಿ ವೈದ್ಯೆ ಸ್ವಾತಿಯ ಸಹೋದರ ಎಂದು ಹೇಳಿಕೊಂಡು ಬಂದ ಸಿದ್ದಪ್ಪ ದ್ಯಾಮಕ್ಕನವರ ಎಂಬುವವನೇ ಿದೀಗ ಯೂಟರ್ನ್ ಹೊಡೆದಿದ್ದಾನೆ. ಇನ್ನು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ಇ-ಮೇಲ್ ಮೂಲಕ ದೂರು ನೀಡಿರುವ ವೈದ್ಯೆ ಸ್ವಾತಿ ದ್ಯಾಮಕ್ಕನವರ್ ಯಾರು ಎಂಬುದೇ ನಿಗೂಢವಾಗಿದೆ. ಸಬ್ ಇನ್ಸ್ಪೆಕ್ಟರ್ ರಾಜ್ ಕುಮಾರ್ ವಿಡಿಯೋ ಕಾಲ್ ಮಾಡಿದ್ದು ನಿಜನಾ..? ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಲು ವೈದ್ಯೆಯ ಹೆಸರಿನಲ್ಲಿ ಅಕೌಂಟ್ ತೆಗೆದಿದ್ದನು ಎಂದು ಹೇಳಲಾಗುತ್ತಿದೆ.
ಬಸವನಗುಡಿ ಪೊಲೀಸ್ ಸಬ್ ಇನ್ಸಪೆಕ್ಟರ್‌ಗೂ ನಿಗೂಢ ವ್ಯಕ್ತಿಗೂ ಸಂಬಂಧ ಏನು? ನನ್ನ ಅಕ್ಕನಿಗೆ ಮೋಸ ಆಗಿದೆ ಅಂತ ಬಂದಿರೋ ವ್ಯಕ್ತಿ ಸಿದ್ದಪ್ಪ ದ್ಯಾಮಕ್ಕನವರ್ ಯಾರು? ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಅಸಲಿ ಕಹಾನಿ ಬೆಳಕಿಗೆ ಬಂದಿದೆ. ಈ ಕೇಸಿನಲ್ಲಿ ಇಲ್ಲದಿರೋ ವೈದ್ಯೆಯ ಹೆಸರಿನಲ್ಲಿ ಫೇಸ್ ಬುಕ್ ನಕಲಿ ಖಾತೆಯನ್ನು ಕ್ರಿಯೇಟ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಸಲಿಗೆ ಸ್ವಾತಿ ದ್ಯಾಮಕ್ಕನವರ್ ಅನ್ನುವ ಡಾಕ್ಟರ್ ಅಕೌಂಟ್ ಫೇಕ್ ಆಗಿದೆ. ಫೇಕ್ ಅಕೌಂಟ್ ಕ್ರಿಯೆಟ್ ಮಾಡಿದ್ದು, ಸ್ವಾತಿಯ ಸಹೋದರ ಎಂದು ಹೇಳಿಕೊಂಡು ಬಂದಿರುವ ಇದೇ ಸಿದ್ದಪ್ಪ ದ್ಯಾಮಕ್ಕನವರ್ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ವೈದ್ಯೆಯ ನಗ್ನ ಫೋಟೋ ಕೇಳಿದ ಬಸವನಗುಡಿ ಪಿಎಸ್‌ಐ; ಪೊಲೀಸ್ ಕಮಿಷನರ್‌ಗೆ ದೂರು!
ಫೇಸ್‌ಬುಕ್‌ನಲ್ಲಿ ವೈದ್ಯೆ ಸ್ವಾತಿ ಹೆಸರಿನಲ್ಲಿ ನಕಲಿ ಖಾತೆ ತೆರೆದ ಸಿದ್ದಣ್ಣ ಸಬ್ ಇನ್ಸಪೆಕ್ಟರ್ ಬಳಿ ಹಣ ಪೀಕಲು ಪ್ಲಾನ್ ಮಾಡಿದ್ದನು. ಹೀಗಾಗಿ, ಫೇಕ್ ಅಕೌಂಟ್ ನಿಂದ ಸಬ್ ಇನ್ಸಪೆಕ್ಟರ್ ಪರಿಚಯ ಮಾಡಿಕೊಂಡು ಹಂತ ಹಂತವಾಗಿ ಹಣ ವಸೂಲಿ ಮಾಡಿದ್ದನು. ಸ್ವಾತಿ ಹೆಸರಿನಲ್ಲಿ ಸಬ್ ಇನ್ಸಪೆಕ್ಟರ್ ರಾಜಕುಮಾರ ಬಳಿ 50 ಸಾವಿರ ರೂ. ಹಣ ಪಡೆದಿದ್ದನು. ನಂತರ ಹಣವನ್ನು ವಾಪಸ್ ಕೊಡದೇ ಇದ್ದಾಗ ಸಬ್ ಇನ್ಸಪೆಕ್ಟರ್ ಕೋಪಗೊಂಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ನಕಲಿ ಫೇಸ್‌ಬುಕ್ ಖಾತೆ ಎಂಬುದು ಪತ್ತೆಯಾಗಿದೆ.
ಸ್ವಾತಿ ಆಗಲಿ ಅಥವಾ ಬೇರೆ ಯಾರೇ ಆಗಲಿ ಪಡೆದುಕೊಂಡ ಹಣವನ್ನು ವಾಪಸ್ ಕೊಡಿದಿದ್ದಾಗ ಸಬ್ ಇನ್ಸಪೆಕ್ಟರ್ ರಾಜ್‌ಕುಮಾರ್ ಜೋಡಟ್ಟಿ ಅವರು ಅಸಲಿ ಪೊಲೀಸ್ ಗಿರಿ ತೋರಿಸಿದ್ದಾರೆ. ಆಗ ಇದರಿಂದ ನನ್ನ ಬಂಡವಾಳ ಬಯಲಾಯ್ತು ಎಂದು ಕೋಪಗೊಂಡ ಸಿದ್ದಪ್ಪ ದ್ಯಾಮಕ್ಕನವರ್ ಎಂಬ ವ್ಯಕ್ತಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮರ್ಯಾದೆ ಕಳೆಯುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದನು. ಹೀಗಾಗಿ, ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದನು. ಇದಾದ ನಂತರ ಪೊಲೀಸರಿಗೆ ನಕಲಿ ಖಾತೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ತಾನು ದೂರು ಕೊಟ್ಟ ವೈದ್ಯೆ ಸ್ವಾತಿ ಸಹೋದರ ಎಂದು ಹೇಳಿಕೊಂಡು ಬಂದಿದ್ದನು. ಯಾವಾಗ ಇದು ಫೇಸ್‌ಬುಕ್ ನಕಲಿ ಖಾತೆ ಎಂಬುದು ಪೊಲೀಸರಿಗೆ ತಿಳಿಯುತ್ತಿದ್ದಂತೆ ಯೂಟರ್ನ್ ಹೊಡೆದು ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ: ಗಂಡನಿಲ್ಲದ ಆಂಟಿಯ ಸಂಬಂಧಕ್ಕೆ ಸ್ನೇಹಿತನನ್ನೇ ಪರಲೋಕ ಸೇರಿಸಿದ ಫ್ರೆಂಡ್!
ಈ ಪ್ರಕರಣ ಸಂಬಂಧ ಸದ್ಯ ತನಿಖೆ ನಡೆಸಲಾಗುತ್ತಿದೆ. ಹನುಮಂತ ನಗರ ಠಾಣೆ ಇನ್ಸಪೆಕ್ಟರ್ ತನಿಖೆ ಮಾಡುತ್ತಿದ್ದಾರೆ. ಈವರೆಗೂ ಆ ವೈದ್ಯ ಯುವತಿ ವಿಚಾರಣೆಗೆ ಹಾಜರಾಗಿಲ್ಲ. ಹುಡುಗಿ ರೀತಿ ಚಾಟ್ ಮಾಡಿ ಹುಡಗಿ ವಾಯ್ಸ್ ನಲ್ಲಿ ಮಾತನಾಡಿ ಟ್ರ್ಯಾಪ್ ಮಾಡಿರೋ ಅನುಮಾನ ಇದೆ. ಪಿಎಸ್ ಐ ಮತ್ತು ಯುವತಿ ನಡುವೆ ಹಣದ ವ್ಯವಹಾರ ನಡೆದಿದೆ. ಸಹೋದರ ಅಂತಾ ಬಂದಿರೋ ವ್ಯಕ್ತಿಯ ಬಗ್ಗೆ ಅನುಮಾನ ಇದೆ. ಎಲ್ಲೋ ಒಂದ್ಕಡೆ ಅಧಿಕಾರಿಯನ್ನೇ ಟ್ರ್ಯಾಪ್ ಮಾಡಲು ಯತ್ನಿಸಿದಂತಿದೆ. ತನಿಖೆ ನಂತರ ಅಸಲಿ ಕಹಾನಿ ಗೊತ್ತಾಗುತ್ತದೆ.
- ಬಿ. ದಯಾನಂದ, ಬೆಂಗಳೂರು ನಗರ ಪೊಲೀಸ್ ಆಯುಕ್ತ