ಪಂಚೆ ಧರಿಸಿದ ರೈತನಿಗೆ ಅವಮಾನ; ಬೆಂಗಳೂರು ಮಾಲ್‌ಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಬಿಬಿಎಂಪಿ

ಬೆಂಗಳೂರಿನ ಜಿ.ಟಿ. ಮಾಲ್‌ನಲ್ಲಿ ಪಂಚೆ ಧರಿಸಿದ ರೈತನಿಗೆ ಪ್ರವೇಶ ನಿರಾಕರಿಸಿದ ಬೆನ್ನಲ್ಲಿಯೇ ಬಿಬಿಎಂಪಿ ವತಿಯಿಂದ ಎಲ್ಲ ಮಾಲ್‌ಗಳಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

BBMP orders new guidelines for Bengaluru Commercial Complexes and Shopping Malls sat

ಬೆಂಗಳೂರು (ಆ.02): ಸಿಲಿಕಾನ್ ಸಿಟಿ ಬೆಂಗಳೂರಿನ ಜಿ.ಟಿ. ವರ್ಲ್ಡ್ ಮಾಲ್‌ಗೆ ಪಂಚೆ ಧರಿಸಿ ಬಂದ ರೈತನಿಗೆ ಪ್ರವೇಶ ನಿರಾಕರಣೆ ಮಾಡಿದ ಬೆನ್ನಲ್ಲಿಯೇ ಒಂದು ವಾರ ಮಾಲ್ ಮುಚ್ಚಿಸಲಾಗಿತ್ತು. ಇದರ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ಬಿಬಿಎಂಪಿ ಬೆಂಗಳೂರಿನ ಎಲ್ಲ ಶಾಪಿಂಗ್ ಮಾಲ್‌ಗಳಿಗೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿಯನ್ನು ಪ್ರಕಟಣೆ ಮಾಡಿ ಆದೇಶ ಹೊರಡಿಸಿದೆ.

ಹೌದು, ಪಂಚೆ ಧರಿಸಿದ ರೈತನಿಗೆ ಮಾಲ್‌ಗೆ ಪ್ರವೇಶ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಮಾಲ್ ಗಳಿಗೆ ಬಿಬಿಎಂಪಿ ಯಿಂದ ಹೊಸ ಮಾರ್ಗ ಸೂಚಿಯನ್ನು ಹೊರಡಿಸಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ವಾಣಿಜ್ಯ ಸಮುಚ್ಚಯಗಳು ಹಾಗೂ ಇತರೆ ಅಂಗಡಿಗಳ ಮಾಲೀಕರಿಗೆ ಹೊಸ ಮಾರ್ಗಸೂಚಿ ಮೂಲಕ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರ ಪಾರಂಪರಿಕ ಉಡುಪಿನ ಬಗ್ಗೆ ತಾರತಮ್ಯ ಮಾಡುವಂತಿಲ್ಲ. ಭಾರತದ ಪ್ರತಿಯೊಬ್ಬ ನಾಗರೀಕರಿಗೂ ಸಾರ್ವಜನಿಕ ಪ್ರದೇಶಗಳಿಗೆ ಸಮಾನ ಪ್ರವೇಶ ಮತ್ತು ಸಾಮಾಜಿಕ ಸಮಾನತೆಯ  ಹಕ್ಕಿದೆ. ಈ ಹಿನ್ನೆಲೆಯಲ್ಲಿ ಕೆಳಗೆ ಸೂಚಿಸಲಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಬೆಂಗಳೂರು: ಪಂಚೆ ಹಾಕೊಂಡು ಬಂದಿದ್ದಕ್ಕೆ ಮಾಲ್‌ಗೆ ನೋ ಎಂಟ್ರಿ, ರೈತನನ್ನ ಹೊರಗಡೆ ಕೂಡಿಸಿದ ಸಿಬ್ಬಂದಿ..!

  • ಬೆಂಗಳೂರಿನ ಎಲ್ಲ ಶಾಪಿಂಗ್ ಮಾಲ್‌ಗಳು, ವಾಣಿಜ್ಯ ಸಮುಚ್ಛಯಗಳು, ಅಂಗಡಿ ಮುಂಗಟ್ಟುಗಳು ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳದ ಆಧಾರದ ಮೇಲೆ ಮಾತ್ರ ತಾರತಮ್ಯ ಮಾಡವಂತಿಲ್ಲ.
  • ಸಾರ್ವಜನಿಕರಿಗೆ ಪ್ರವೇಶ ಸಂದರ್ಭದಲ್ಲಿ ಭಾಷೆ, ಜಾತಿ, ಜನಾಂಗ, ಧರ್ಮ, ಉಡುಪು ಮತ್ತು ಜನ್ಮಸ್ಥಳದ ಆಧಾರದ ಮೇಲೆ ಮಾತ್ರ ತಾರತಮ್ಯ ಮಾಡುವಂತಿಲ್ಲ‌. ಮುಖ್ಯವಾಗಿ ಸಾರ್ವಜನಿಕರು ಧರಿಸಿದ ಬಟ್ಟೆಯನ್ನು ಆಧರಿಸಿ ಪ್ರವೇಶ ನಿರಾಕರಣೆ ಮಾಡುವಂತಿಲ್ಲ.
  • ವಾಣಿಜ್ಯ ಸಮುಚ್ಛಯಗಳು ಕೂಡಲೇ ಈ ಬಗ್ಗೆ ಭದ್ರತಾ ಸಿಬ್ಬಂದಿಗೆ ಸ್ಪಷ್ಟ ಸೂಚನೆ ನತ್ತು ಆದೇಶ ನೀಡಬೇಕು. ಒಂದು ವೇಳೆ ಬಟ್ಟೆಯನ್ನು ಧರಿಸಿದ ಆಧಾರದಲ್ಲಿ ಪ್ರವೇಶ ನಿರ್ಬಂಧ ಮಾಡಿದ ಘಟನೆಗಳು ನಡೆಯದಂತೆ ಮುನ್ನೆಚ್ಚರಿಗೆ ವಹಿಸಬೇಕು.
  • ಪಾಲಿಕೆಯಿಂದ ಸೂಚಿಸಲಾದ ಮಾರ್ಗಸೂಚಿಗಳನ್ನು ಪಾಲಿಸದೇ ಈ ರೀತಿಯ ಪ್ರಕರಣಗಳು ಮರುಕಳಿಸಿದರೆ ಅಪರಾಧ ಎಂದು ಪರಿಗಣಿಸಿ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಜೊತೆಗೆ, ಸಂಬಂಧಪಟ್ಟ ವಾಣಿಜ್ಯ ಸಮುಚ್ಛಯಗಳ ಮಾಲೀಕರು ಮತ್ತು ಸಿಬ್ಬಂದಿಯ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.

ಪಂಚೆಯುಟ್ಟ ರೈತನಿಗೆ ಪ್ರವೇಶ ನಿರಾಕರಸಿ ಅವಮಾನಿಸಿದ ಜಿಟಿ ಮಾಲ್ ಸಿಬ್ಬದಿಯಿಂದ ಕೈಮುಗಿದು ಕ್ಷಮೆ!

  • ಭಾಷೆ. ಲಿಂಗ, ಉಡುಪು ಹಾಗೂ ಜನಾಂಗವನ್ನು ಆಧರಿಸಿ ಪ್ರವೇಶ ನಿರಾಕರಣೆ ಮಾಡಿದಲ್ಲಿ ಅಂತಹ ವಾಣಿಜ್ಯ ಸಮುಚ್ಛಯಗಳ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗುವುದು. ಜೊತೆಗೆ, ಮಾಲ್  ಮತ್ತು ಅಂಗಡಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.

Latest Videos
Follow Us:
Download App:
  • android
  • ios