ಪಂಚೆಯುಟ್ಟ ರೈತನಿಗೆ ಪ್ರವೇಶ ನಿರಾಕರಸಿ ಅವಮಾನಿಸಿದ ಜಿಟಿ ಮಾಲ್ ಸಿಬ್ಬದಿಯಿಂದ ಕೈಮುಗಿದು ಕ್ಷಮೆ!

ಬೆಂಗಳೂರಿನ ಜಿಟಿ ವರ್ಲ್ಡ್ ಮಾಲ್‌ಗೆ ಸಿನಿಮಾ ನೋಡಲು ಪಂಚೆ ಧರಿಸಿಕೊಂಡು ಬಂದ ರೈತನನ್ನು ಒಳಗೆ ಬಿಡದೇ ಅವಮಾನಿಸಿದ ಭದ್ರತಾ ಸಿಬ್ಬಂದಿ ರೈತನಿಗೆ ಕೈಮುಗಿದು ಕ್ಷಮೆ ಕೇಳಿದ್ದಾನೆ. 

farmer humiliated in gt world mall Bengaluru today mall staff apologized sat

ಬೆಂಗಳೂರು (ಜು .17): ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಜಿಟಿ ವರ್ಲ್ಡ್ ಮಾಲ್‌ಗೆ ಸಿನಿಮಾ ನೋಡಲು ಪಂಚೆ ಧರಿಸಿಕೊಂಡು ಬಂದ ರೈತನನ್ನು ಒಳಗೆ ಬಿಡದೇ ಅವಮಾನಿಸಿದ ಭದ್ರತಾ ಸಿಬ್ಬಂದಿ ಇಂದು ರೈತನಿಗೆ ಕೈಮುಗಿದು ಕ್ಷಮೆ ಕೇಳಿದ್ದಾನೆ. 

ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಅನ್ನದಾತ ರೈತನಿಗೆ ಅವಮಾನಿಸುವ ಘಟನೆಗಳು ವರದಿ ಆಗುತ್ತಲೇ ಇವೆ. ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರು ಮೆಟ್ರೋ ರೈಲು ಸಂಚಾರಕ್ಕೆ ಹೋಗುತ್ತಿದ್ದ ರೈತನಿಗೆ ನಿನ್ನ ಬಟ್ಟೆ ಕೊಳೆಯಾಗಿದೆ ಎಂದು ರೈಲಿನಲ್ಲಿ ಪ್ರಯಾಣಿಸಲು ಬಿಡದೇ ಅವಮಾನ ಮಾಡಲಾಗಿತ್ತು. ಈ ಘಟನೆಯ ನೆನಪು ಮಾಸುವ ಮುನ್ನವೇ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗಳಲ್ಲಿ ಒಂದಾದ ಜಿಟಿ ವರ್ಲ್ಡ್ ಮಾಲ್‌ನಲ್ಲಿ ರೈತನು ಪಂಚೆ ಹಾಕಿಕೊಂಡು ಬಂದಿದ್ದಾನೆಂದು ಒಳಗೆ ಬಿಡದೇ ಅವಮಾನ ಮಾಡಿದ ಘಟನೆ ನಡೆದಿದೆ. ಈ ಘಟನೆಗೆ ರೈತ ಸಂಘಟನೆಗಳಿಂದ ಭಾರಿ ವಿರಧ ವ್ಯಕ್ತವಾದ ಬೆನ್ನಲ್ಲಿಯೇ ಜಿಟಿ ಮಾಲ್‌ ಸಕ್ಯೂರಿಟಿ ಸಿಬ್ಬಂದಿ ರೈತನಿಗೆ ಕೈ ಮುಗಿದು ಕ್ಷಮೆ ಕೇಳಿದ್ದಾನೆ.

ಬೆಂಗಳೂರು: ಪಂಚೆ ಹಾಕೊಂಡು ಬಂದಿದ್ದಕ್ಕೆ ಮಾಲ್‌ಗೆ ನೋ ಎಂಟ್ರಿ, ರೈತನನ್ನ ಹೊರಗಡೆ ಕೂಡಿಸಿದ ಸಿಬ್ಬಂದಿ..!

ಜಿಟಿ ಮಾಲ್ ನಲ್ಲಿ ರೈತನನ್ನ ಒಳಗೆ ಬಿಡದೆ ಪ್ರವೇಶ ನಿರ್ಬಂಧ  ಮಾಡಿದ ಪ್ರಕರಣದ ಬಗ್ಗೆ ಮಾಲ್‌ನ ಸೆಕ್ಯೂರಿಟಿ ಮೇಲ್ವಿಚಾರಕ ಯಶವಂತ್ ಕ್ಷಮೆ ಕೋರಿದ್ದಾರೆ. ನಿನ್ನೆ ರೈತನನ್ನ ತಡೆದ ಸೆಕ್ಯೂರಿಟಿ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಮಧ್ಯಾಹ್ನ ವ್ಯಕ್ತಿಯೊಬ್ಬರು ಪಂಚೆ ಮೇಲೆ ಮಾಲ್ ಗೆ ಬಂದಿದ್ದರು. ಪಂಚೆಯನ್ನ ಮೊಣಕಾಲಿನ ತನಕ ಉಟ್ಕೊಂಡು ನಿಂತಿದ್ದರು. ಆಗ ಕೆಳಗಿನ ಫ್ಲೋರ್‌ನಲ್ಲಿ ಬರ್ತಡೇ ಪಾರ್ಟಿಯ ಇವೆಂಟ್ ನಡೆಯುತಿತ್ತು. ಈ ವೇಳೆ ಈ ವಿಚಾರವನ್ನ ಮ್ಯಾನೆಜ್‌ಮೆಂಟ್‌ ಗಮನಕ್ಕೆ  ತಂದಿದ್ದರು. ಸಂಜೆ ಮತ್ತೆ ರೈತನೊಬ್ಬ ಪಂಚೆ ಮೇಲೆ ಬಂದಿದ್ದರು.

ಈ ಸಮಯದಲ್ಲಿ ನಾವು ತಡೆದು, ಮ್ಯಾನೆಜ್‌ಮೆಂಟ್‌ ಗಮನಕ್ಕೆ ತಂದಿದ್ದೇವೆ. ಉದ್ದೇಶಪೂರ್ವಕವಾಗಿ ನಾವು ತಡೆದಿಲ್ಲ‌, ಮ್ಯಾನೆಜ್‌ಮೆಂಟ್‌ ಅವರಿಂದ ಉತ್ತರ ಬರೋ ತನಕ ಕಾಯಿಸಿದ್ವಿ ಅಷ್ಟೆ. ನಾನು ಅವರನ್ನು ಒಳಗೆ ಬಿಡದೇ ತಡೆದಿದ್ದಕ್ಕೆ ಎಲ್ಲಾ ರೈತರಿಗೆ ಕ್ಷಮೆ ಕೇಳುತ್ತೇನೆ. ಇನ್ನು ಮಾಲ್ ಗೆ ಪೊಲೀಸ್ ಭದ್ರತೆ ನೀಡಲಾಗುತ್ತದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆವಹಿಸಲಾಗಿದೆ ಎಂದು ಸೆಕ್ಯೂರಿಟಿ ಮೇಲ್ವಿಚಾರಕ ಯಶವಂತ್ ಹೇಳಿದರು.

ಸೆಕ್ಯೂರಿಟಿಗೆ ಗೊತ್ತಾಗದೆ ಈ ರೀತಿ ಆಗಿದೆ. ರೈತರಿಗೆ ಕ್ಷಮೆ ಕೇಳುತ್ತೇವೆ. ಸೆಕ್ಯೂರಿಟಿಗೂ ಈ ಬಗ್ಗೆ ಬುದ್ದಿ ಮಾತು ಹೇಳುತ್ತೇವೆ. ಅವಮಾನಿಸ್ಬೇಕು ಅಂತ ಈ ರೀತಿ ಮಾಡಿಲ್ಲ. ಇನ್ನು ನಿನ್ನೆ ಮಧ್ಯಾಹ್ನ ಕಾರ್ಯಕ್ರಮ ನಡೆದಾಗ ಪಂಚೆ ಹಾಕೊಂಡು ಬಂದಿರುವ ವಿಚಾರ ಗೊತ್ತಿಲ್ಲ. ಯವುದೇ ರೈತರಿಗೆ ಪಂಚೆ ಹಾಕೊಂಡು ಬರ್ಬೇಡಿ ಅಂತಾ ನಾವು ಹೇಳೋದೆ ಇಲ್ಲ. 
- ಸುರೇಶ್, ಜಿಟಿ ಮಾಲ್ ಮೇಲ್ವಿಚಾರಕ

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್; 20 ವರ್ಷದ ಹಿಂದಿನ ಕೊಲೆ ಕೇಸಿನಲ್ಲಿ ಮತ್ತೊಬ್ಬ ನಿರ್ದೇಶಕ ಅರೆಸ್ಟ್

ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ರೈತರಿಗೆ ನಿನ್ನೆ ಅವಮಾನ ಮಾಡಿದ ಘಟನೆಯಿಂದ ಆಕ್ರೋಶಗೊಂಡ ಕೆಲವು ಕನ್ನಡಪರ ಸಂಘಟನೆಗಳ ಸದಸ್ಯರು ಬುಧವಾರ ಬೆಳಗ್ಗೆ ಪಂಚೆ ಧರಿಸಿಕೊಂಡು ಬಂದು ಜಿಟಿ ಮಾಲ್‌ನ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಮ್ಮ ರೈತರು ಧರಿಸುವ ಬಟ್ಟೆ ನಮ್ಮ ಸಂಸ್ಕೃತಿಯಾಗಿದೆ. ಆದರೆ, ನಮ್ಮ ಸಂಸ್ಕೃತಿಯ ಪ್ರತೀಕವಾದ ರೈತರನ್ನು ಮಾಲ್‌ನೊಳಗೆ ಬಿಡದ ಸೆಕ್ಯೂರಿಟಿ ಸಿಬ್ಬಂದಿ ಮತ್ತು ಶಾಪಿಂಗ್ ಮಾಲ್ ವಿರುದ್ಧ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆಗಳ ಸದಸ್ಯರು ಆಗ್ರಹಿಸಿದ್ದಾರೆ.

Latest Videos
Follow Us:
Download App:
  • android
  • ios