Asianet Suvarna News Asianet Suvarna News

ಬೆಂಗಳೂರು: 11.51 ಕೋಟಿ ತೆರಿಗೆ ಬಾಕಿ, ರಾಕ್‌ಲೈನ್‌ ಮಾಲ್‌ಗೆ ಬೀಗ

ರಾಕ್ ಲೈನ್ ಮಾಲ್‌ 2011ರಿಂದ 2023-24ರ ಅವಧಿಯ ಒಟ್ಟು ₹11.51 ಕೋಟಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಪಾವತಿಸಲು ಈಗಾಗಲೇ ಹಲವು ಬಾರಿ ಬಿಬಿಎಂಪಿ ಕಂದಾಯ ಅಧಿಕಾರಿಗಳು ನೋಟಿಸ್‌ ನೀಡಿದರೂ ರಾಕ್‌ ಲೈನ್‌ ಮಾಲ್‌ ಮಾಲೀಕರು ತೆರಿಗೆ ಪಾವತಿ ಮಾಡಿಲ್ಲ. ಹೀಗಾಗಿ, ಬುಧವಾರ ಬಿಬಿಎಂಪಿಯ ದಾಸರಹಳ್ಳಿ ವಲಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಾಕ್ ಲೈನ್ ಮಾಲನ್ನು ಸೀಜ್ ಮಾಡಲಾಗಿದೆ.

BBMP Locked the Rockline Mall Due to 11.51 Crore in Tax Pending in Bengaluru grg
Author
First Published Feb 15, 2024, 5:28 AM IST | Last Updated Feb 15, 2024, 5:28 AM IST

ಬೆಂಗಳೂರು(ಫೆ.15):  ಆಸ್ತಿ ತೆರಿಗೆ ಪಾವತಿ ಮಾಡದ ತುಮಕೂರು ರಸ್ತೆಯಲ್ಲಿರುವ ರಾಕ್‌ಲೈನ್‌ ಮಾಲನ್ನು ಬಿಬಿಎಂಪಿ ಅಧಿಕಾರಿಗಳು ಬುಧವಾರ ಬೀಗ ಹಾಕಿ ಸೀಜ್‌ ಮಾಡಿದ್ದಾರೆ. ರಾಕ್ ಲೈನ್ ಮಾಲ್‌ 2011ರಿಂದ 2023-24ರ ಅವಧಿಯ ಒಟ್ಟು ₹11.51 ಕೋಟಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ತೆರಿಗೆ ಪಾವತಿಸಲು ಈಗಾಗಲೇ ಹಲವು ಬಾರಿ ಬಿಬಿಎಂಪಿ ಕಂದಾಯ ಅಧಿಕಾರಿಗಳು ನೋಟಿಸ್‌ ನೀಡಿದರೂ ರಾಕ್‌ ಲೈನ್‌ ಮಾಲ್‌ ಮಾಲೀಕರು ತೆರಿಗೆ ಪಾವತಿ ಮಾಡಿಲ್ಲ. ಹೀಗಾಗಿ, ಬುಧವಾರ ಬಿಬಿಎಂಪಿಯ ದಾಸರಹಳ್ಳಿ ವಲಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಾಕ್ ಲೈನ್ ಮಾಲನ್ನು ಸೀಜ್ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ದಾಸರಹಳ್ಳಿ ವಲಯ ಜಂಟಿ ಆಯುಕ್ತ ಬಾಲಶೇಖರ್, ಕೋಟ್ಯಂತರ ರುಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಕಳೆದ 11 ವರ್ಷದಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ನೋಟಿಸ್‌ ನೀಡಿದರೂ ತೆರಿಗೆ ಪಾವತಿಗೆ ಮುಂದಾಗಿಲ್ಲ. ಹೀಗಾಗಿ, ಮಾಲ್‌ ಸೀಜ್‌ ಮಾಡಿದ್ದೇವೆ. ತೆರಿಗೆ ಪಾವತಿ ಮಾಡುವವರೆಗೆ ಮಾಲ್‌ ತೆರೆಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ರಾಕ್‌ಲೈನ್ ವೆಂಕಟೇಶ್ ನನ್ನ ಹಿಂದಿರುವ ನಿಜವಾದ ದೊಡ್ಡ ಶಕ್ತಿ; ಸುಮಲತಾ ಅಂಬರೀಷ್

ಏಕಾಏಕಿ ಮಾಲ್‌ಗೆ ಬೀಗ: ವ್ಯವಸ್ಥಾಪಕ ಆರೋಪ

ಇನ್ನು ರಾಕ್ ಲೈನ್ ಮಾಲ್‌ನ ಮ್ಯಾನೇಜರ್ ಪ್ರಕಾಶ್ ಮಾತನಾಡಿ, ಮಂಗಳವಾರ ರಾತ್ರಿ 9.30ಕ್ಕೆ ಬಂದಿದ್ದರು. ನಮಗೆ ನೋಟಿಸ್‌ ನೀಡಿಲ್ಲ. ನೋಟಿಸ್‌ ತೋರಿಸಿ ಹಾಗೇ ವಾಪಾಸ್‌ ತೆಗೆದುಕೊಂಡು ಹೋಗಿದ್ದಾರೆ. ಮೇಲಾಧಿಕಾರಿಗಳ ಒತ್ತಡ ಇದೆ. ಹಾಗಾಗಿ, ಮಾಲ್‌ ಸೀಜ್‌ ಮಾಡುತ್ತೇವೆ ಎಂದು ಹೇಳಿ ಹೋಗಿದ್ದರು. ಈ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗಿದ್ದು, ಕೋರ್ಟ್‌ ಸೂಚಿಸಿದಂತೆ ಹಣ ಠೇವಣಿ ಮಾಡಿದ್ದೇವೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಕೆ ಮಾಡುವಂತೆ ಕೋರ್ಟ್‌ ಸೂಚಿಸಿದೆ. ಆದರೆ, ಬಿಬಿಎಂಪಿ ಆಕ್ಷೇಪಣೆ ಸಲ್ಲಿಕೆ ಮಾಡಿಲ್ಲ. ಈಗ ಏಕಾಏಕಿ ಬಂದು ಮಾಲ್‌ಗೆ ಬೀಗ ಹಾಕಿದ್ದಾರೆ ಎಂದು ಆರೋಪಿಸಿದರು.

Latest Videos
Follow Us:
Download App:
  • android
  • ios