ಬೆಂಗಳೂರಿನಲ್ಲಿ 22 ಲಕ್ಷ ಇ-ಖಾತಾ ಆಸ್ತಿಗಳು ಲಭ್ಯವಿದ್ದು, ನಾಗರಿಕರು ಆನ್‌ಲೈನ್‌ನಲ್ಲಿ ಪಡೆಯಬಹುದು. 

ಬೆಂಗಳೂರು (ಡಿ.26): ಸಿಲಿಕಾನ್ ಸಿಟಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 22 ಲಕ್ಷ ಇ-ಖಾತಾ ಆಸ್ತಿಗಳು ಲಭ್ಯವಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳನ್ನು ಹೊಂದಿರುವಂತಹ ಎಲ್ಲ ನಾಗರೀಕರು ತಮ್ಮ ಬಿಬಿಎಂಪಿ ವತಿಯಿಂದ ವಿತರಿಸಲಾಗುವ ಇ-ಖಾತಾ ಪಡೆದುಕೊಳ್ಳುವಂತೆ ಪಾಲಿಕೆ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ದೂರದೃಷ್ಟಿ ಉದ್ದೇಶದ ಮೇರೆಗೆ ಸೂಚಿಸಿದಂತೆ ಬಿಬಿಎಂಪಿ ಎಲ್ಲಾ ಬೆಂಗಳೂರು ನಿವಾಸಿಗಳಿಗೆ ತಮ್ಮ ಸ್ವತ್ತುಗಳ ಇ-ಖಾತಾಗಳನ್ನು ನೀಡಲು ಬಿಬಿಎಂಪಿ ಸುಮಾರು 22 ಲಕ್ಷ ಕರಡು ಇ-ಖಾತಾಗಳನ್ನು ಸಿದ್ಧಪಡಿಸಿ ಆನ್‌ಲೈನ್‌ನಲ್ಲಿ ಇರಿಸಲಾಗಿರುತ್ತದೆ. ಎಲ್ಲ ಪಾಲಿಕೆ ವ್ಯಾಪ್ತಿಯ ನಾಗರೀಕರು ತಮ್ಮ ಬಿಬಿಎಂಪಿ ಇ-ಖಾತಾ ಪಡೆಯಬಹುದು. ಸಾರ್ವಜನಿಕರು https://bbmpeaasthi.karnataka.gov.in ಈ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಇ-ಖಾತಾ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಿಬಿಎಂಪಿಯ ಇ-ಖಾತಾ ಈಗ ನಾಗರೀಕರ ನಿಯಂತ್ರಣದಲ್ಲಿದೆ. ಪ್ರತಿಯೊಬ್ಬರಿಗೂ ಬಿಬಿಎಂಪಿಯ ಇ-ಖಾತಾವನ್ನು ಪಡೆಯಲು ಅನುಕೂಲ ಆಗುವಂತೆ ಬಿಬಿಎಂಪಿ ಜಾಲತಾಣ https://bbmpeaasthi.karnataka.gov.in ಗೆ ಭೇಟಿ ನೀಡಿ ಪಾಲಿಕೆಯ ಅಧಿಕಾರಿಗಳ ಸಂಪರ್ಕರಹಿತ, ಫೇಸ್‌ಲೆಸ್ ಮೂಲಕ ಆನ್‌ಲೈನ್ ಮೂಲಕವೇ ಇ-ಖಾತಾ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.

ಆನ್‌ಲೈನ್‌ನಲ್ಲಿ ನಿಮ್ಮ ಆಸ್ತಿ ಇ-ಖಾತಾ ಪಡೆಯುವ ಸರಳ ಮಾರ್ಗಗಳು:
1. ನಿಮ್ಮ ಕರಡು ಇ-ಖಾತಾವನ್ನು ವಾರ್ಡ್‌ ವಾರು ಪಟ್ಟಿಯಲ್ಲಿ ಹುಡುಕಿ. (ನಿಮ್ಮ ವಾರ್ಡ್‌ ಯಾವುದೆಂದು ನಿಮ್ಮ ಆಸ್ತಿ ತೆರಿಗೆ ರಶೀದಿ ಮೂಲಕ ತಿಳಿದುಕೊಳ್ಳಿ)
2. ಈ ಕೆಳಗಿನ ಮಾಹಿತಿಗಳನ್ನು ಆನ್‌ಲೈನ್ ನಲ್ಲಿ ನಮೂದಿಸಿ ನಿಮ್ಮ ಅಂತಿಮ ಇ-ಖಾತಾವನ್ನು ಮುದ್ರಿಸಿಕೊಳ್ಳಿ.

ಮಾಹಿತಿ ನಮೂದಿಸಲು ಬೇಕಿರುವ ದಾಖಲೆಗಳು
(i) ಆಧಾರ್ 
(ii) ಆಸ್ತಿ ತೆರಿಗೆ ID
(iii) ಕ್ರಯ/ನೊಂದಾಯಿತ ಪತ್ರ ಸಂಖ್ಯೆ
(iv) ಬೆಸ್ಕಾಂ ID (ಖಾಲಿ ನಿವೇಶನ ಆಯ್ಕೆ)

3. ನಿಮ್ಮ ಬಳಿ ಅಪೂರ್ಣ ಮಾಹಿತಿ ಇದ್ದಲ್ಲಿ ಅಥವಾ ಬಿಬಿಎಂಪಿ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದಿದ್ದಲ್ಲಿ ಮಾತ್ರ ಅಂತಹ ಪ್ರಕರಣಗಳು ನಿರ್ಧಾರಕ್ಕಾಗಿ ಎಆರ್‌ಒಗಳಿಗೆ ರವಾನೆಯಾಗುತ್ತವೆ. ಇ-ಖಾತಾ ಸಂಬಂಧಿಸಿದಂತೆ ಸಮಸ್ಯೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆ: 94806 83695 ಸಾರ್ವಜನಿಕರು ಕರೆ ಮಾಡಬಹುದು. 

ಜನರು ಇ-ಖಾತಾ ಪಡೆಯಲು ಈ ತರಬೇತಿ ವೀಡಿಯೊಗಳನ್ನು ನೋಡಬಹುದು:
ಆಂಗ್ಲ ಆವೃತ್ತಿ: https://youtu.be/GL8CWsdn3wo
ಕನ್ನಡ ಆವೃತ್ತಿ: https://youtu.be/JR3BxET46po