ಬೆಂಗಳೂರು [ಜ.09]: ನಿತ್ಯೋತ್ಸವದ ಕವಿ ನಿಸಾರ್‌ ಅಹಮದ್‌ ಹಾಗೂ ಅವರ ಪುತ್ರ ನವೀದ್‌ ಅವರ ಆರೋಗ್ಯ ಚಿಕಿತ್ಸೆಗೆ ಬಿಬಿಎಂಪಿ ‘ಮೇಯರ್‌ ವೈದ್ಯಕೀಯ ಪರಿಹಾರ’ ನಿಧಿಯಿಂದ 10 ಲಕ್ಷ ರು. ಪರಿಹಾರ ನೀಡಲಾಗಿದೆ.

ಬುಧವಾರ ಬನ್ನೇರಘಟ್ಟಮುಖ್ಯರಸ್ತೆ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕವಿ ನಿಸಾರ್‌ ಅಹಮದ್‌ ಪುತ್ರ ನವೀದ್‌ ಅವರ ಆರೋಗ್ಯ ವಿಚಾರಿಸಿ ಮೇಯರ್‌ ಗೌತಮ್‌ ಕುಮಾರ್‌ ತುರ್ತು ಚಿಕಿತ್ಸೆಗೆ 10 ಲಕ್ಷ ರು. ಚೆಕ್‌ ಅನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತುರ್ತು ಚಿಕಿತ್ಸೆಗೆ ಇದೀಗ 10 ಲಕ್ಷ ರು. ನೀಡಲಾಗಿದೆ. ಉಳಿದ 10 ಲಕ್ಷ ರು. ಶೀಘ್ರದಲ್ಲಿ ನೀಡಲಾಗುವುದು ಎಂದು ಮೇಯರ್‌ ಗೌತಮ್‌ ಕುಮಾರ್‌ ತಿಳಿಸಿದ್ದಾರೆ. ಈ ವೇಳೆ ಉಪಮೇಯರ್‌ ರಾಮ್‌ ಮೋಹನ್‌ ರಾಜು, ಮಾಜಿ ಉಪ ಮೇಯರ್‌ ಎಲ್‌.ಶ್ರೀನಿವಾಸ್‌ ಉಪಸ್ಥಿತರಿದ್ದರು.