Asianet Suvarna News Asianet Suvarna News

ಪ್ರತಿದಿನ 11,500 ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್ ನಡೆಸುವಲ್ಲಿ BBMP ಫೇಲ್..!

ಬೆಂಗಳೂರು ನಗರದಲ್ಲಿ ಪ್ರತಿದಿನ 11,500 ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ ನೀಡಿದ್ದ ಗುರಿ ಮುಟ್ಟುವಲ್ಲಿ ಬಿಬಿಎಂಪಿ ವಿಫಲವಾಗಿದೆ.

bbmp fails to reach covid19 test target in Bangalore
Author
Bangalore, First Published Jul 29, 2020, 7:42 AM IST

ಬೆಂಗಳೂರು(ಜು.28): ನಗರದಲ್ಲಿ ಪ್ರತಿದಿನ 11,500 ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ ನೀಡಿದ್ದ ಗುರಿ ಮುಟ್ಟುವಲ್ಲಿ ಬಿಬಿಎಂಪಿ ವಿಫಲವಾಗಿದೆ.

ನಗರದಲ್ಲಿ ಕೊರೋನಾ ಸೋಂಕಿತರ ತ್ವರಿತ ಪತ್ತೆಗೆ ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟು, ಪ್ರತಿದಿನ 11,500 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ಮಾಡುವಂತೆ ಪಾಲಿಕೆಗೆ ಸೂಚಿಸಲಾಗಿತ್ತು.

ಮಕ್ಕಳ ಅಶ್ಲೀಲ ವಿಡಿಯೋ ಪೋಸ್ಟ್‌: ದಂಧೆಕೋರ ಅರೆಸ್ಟ್‌

ಆದರೆ, ಬಿಬಿಎಂಪಿ ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ಮಾಲ್‌, ಮಾರುಕಟ್ಟೆಪ್ರದೇಶ ಸೇರಿದಂತೆ ಇನ್ನಿತರ ಕಡೆ ಮಾಡಬೇಕಾಗಿತ್ತು. ಆದರೆ, ಸಮರ್ಪಕ ಸಿಬ್ಬಂದಿ ಕೊರತೆಯಿಂದ ಬಿಬಿಎಂಪಿ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ.

ಕಳೆದ 10 ದಿನದಲ್ಲಿ ಒಂದು ದಿನ ಸಹ ಗುರಿ ಮುಟ್ಟಿಲ್ಲ. ಜು.17 ರಂದು 8,174ಗೆ ಆ್ಯಂಟಿಜೆನ್‌ ಪರೀಕ್ಷೆ ಮಾಡಲಾಗಿದೆ. ಜು.18ರಂದು 7,434, ಜು.19ರಂದು 4,703, ಜು.20ರಂದು 7,175, ಜು.21ರಂದು 8,397, ಜು.22ರಂದು 8,142, ಜು.23ರಂದು 8,644, ಜು.24ರಂದು 8,856, ಜು.25ರಂದು 9,697 ಹಾಗೂ ಜು.26ರಂದು ಕೇವಲ 5,930 ಮಂದಿಗೆ ಪರೀಕ್ಷೆ ನಡೆಸಲಾಗಿದೆ.

Follow Us:
Download App:
  • android
  • ios