ಬಿಜಪಿ ಈಗ ಅಧಿಕಾರ ಪಡೆದುಕೊಳ್ಳಲು ಹೊಸ ಮಾರ್ಗವನ್ನು ಹುಡುಕುತ್ತಿದೆ. ಮೂವರು ಮುಖಂಡರಿಗೆ ಗಾಳ ಹಾಕಿದೆ.
ಬೆಂಗಳೂರು [ಸೆ.20]: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದೀಗ ಬಿಬಿಎಂಪಿಯಲ್ಲೂ ಅಧಿಕಾರಕ್ಕೇರಲು ಮೇಯರ್ ಚುನಾವಣೆಗೆ ವಾರಕ್ಕೂ ಮುನ್ನವೇ ಪಕ್ಷೇತರ ಸದಸ್ಯರಿಗೆ ಗಾಳ ಹಾಕಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಬಾರಿಯ ಮೇಯರ್ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರೇ ಗೆಲುವಿಗೆ ನಿರ್ಣಾಯಕರಾಗಿರುವುದರಿಂದ ಮೂವರು ಪಕ್ಷೇತರ ಸದಸ್ಯರನ್ನು ನಗರದ ಬಿಜೆಪಿ ಶಾಸಕರೊಬ್ಬರು ಅಜ್ಞಾನತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಕ್ಷೇತರ ಸದಸ್ಯರಾದ ಲಕ್ಷ್ಮೀ ನಾರಾಯಣ್ (ಗುಂಡಣ್ಣ), ರಮೇಶ್ ಹಾಗೂ ಆನಂದ್ ಅವರಿಗೆ ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಗಾಳ ಹಾಕಿ ಗೋವಾಗೆ ಕರೆದೊಯ್ದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಪಕ್ಷೇತರ ಸದಸ್ಯರ ಮೊಬೈಲ್ ಫೋನ್‌ಗಳು ಸಂಪರ್ಕಕ್ಕೆ ದೊರೆಯದಿರುವುದು ಇದನ್ನು ಪುಷ್ಠಿಕರಿಸಿದೆ.
