Asianet Suvarna News Asianet Suvarna News

'ಕೊರೋನಾ ಲಸಿಕಾ ಅಭಿಯಾನ ಮುಂದುವರೆಯುತ್ತದೆ'

ಬೆಂಗಳೂರಿನಲ್ಲಿ ಇಂದು ಸರ್ಕಾರಿಯ 53 ಹಾಗೂ ಖಾಸಗಿ ಆಸ್ಪತ್ರೆಯ 163 ಲಸಿಕಾ ಕೇಂದ್ರದಲ್ಲಿ ಒಟ್ಟು 20,608 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ| ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಅಭಿಯಾನ| 

BBMP Commissioner N Manjunath Prasad Talks Over Corona Vaccine grg
Author
Bengaluru, First Published Jan 27, 2021, 7:07 AM IST

ಬೆಂಗಳೂರು(ಜ.27): ರಾಜಧಾನಿ ಬೆಂಗಳೂರಿನಲ್ಲಿ ಜ.16ರಿಂದ ನಿರಂತರವಾಗಿ ನಡೆದ ಕೋವಿಡ್‌ ಲಸಿಕಾ ಅಭಿಯಾನ ಸರ್ಕಾರದ ಸೂಚನೆಯ ಮೇರೆಗೆ ಮಂಗಳವಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಿಸಲಾಗಿತ್ತು. ಬುಧವಾರದಿಂದ ಮತ್ತೆ ಈ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ನಗರದಲ್ಲಿ ಜ.16ರಿಂದ ಜ.25ರ ವರೆಗೆ ನಡೆದ ಕೋವಿಡ್‌ ಲಸಿಕಾ ಅಭಿಯಾನದಲ್ಲಿ 45 ಸಾವಿರಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಆದರೆ, ಮಂಗಳವಾರ ನಗರದಲ್ಲಿ ಕೋವಿಡ್‌ ಲಸಿಕಾ ಅಭಿಯಾನವನ್ನು ನಡೆಸಿಲ್ಲ. ಬುಧವಾರ ಯಥಾ ಪ್ರಕಾರ ನಗರದ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಅಭಿಯಾನ ಮುಂದುವರೆಯಲಿದೆ ಎಂದು ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಲಸಿಕೆ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದರೆ ಕಠಿಣ ಕ್ರಮ!

20 ಸಾವಿರ ಮಂದಿಗೆ ಲಸಿಕೆ: 

ನಗರದಲ್ಲಿ ಬುಧವಾರ ಸರ್ಕಾರಿಯ 53 ಹಾಗೂ ಖಾಸಗಿ ಆಸ್ಪತ್ರೆಯ 163 ಲಸಿಕಾ ಕೇಂದ್ರದಲ್ಲಿ ಒಟ್ಟು 20,608 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದಕ್ಕೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.
 

Follow Us:
Download App:
  • android
  • ios