Asianet Suvarna News Asianet Suvarna News

Bengaluru| ಆರೇ ತಿಂಗಳಲ್ಲಿ 2,291 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದ ಬಿಬಿಎಂಪಿ

*  ಕಳೆದ ವರ್ಷಕ್ಕಿಂತ 239 ಕೋಟಿ ಹೆಚ್ಚು ತೆರಿಗೆ ಸಂಗ್ರಹಿಸಿದ ಬಿಬಿಎಂಪಿ
*  4 ಸಾವಿರ ಕೋಟಿ ಸಂಗ್ರಹ ಗುರಿ
*  ಇನ್ನಾರು ತಿಂಗಳಲ್ಲಿ ಬಾಕಿ ವಸೂಲಿ
 

BBMP Collected Rs 2,291 Crore Property Tax in 6 Months in Bengaluru grg
Author
Bengaluru, First Published Oct 9, 2021, 7:31 AM IST
  • Facebook
  • Twitter
  • Whatsapp

ಬೆಂಗಳೂರು(ಅ.09):  ಕೊರೋನಾ(Coronavirus) ಪರಿಸ್ಥಿತಿಯ ನಡುವೆಯೂ ಪಾಲಿಕೆ(BBMP) ಕಳೆದ ಆರು ತಿಂಗಳಲ್ಲಿ (ಏ.1ರಿಂದ ಸೆ.30ರ ವರೆಗೆ) .2,291 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 239 ಕೋಟಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ.

ನಗರದಲ್ಲಿ(Bengaluru) ಕೊರೋನಾ ಸೋಂಕು ತಗ್ಗಿದ್ದು, ನಗರ ನಿಧಾನಕ್ಕೆ ಸಹಜಸ್ಥಿತಿಗೆ ಮರುಳುತ್ತಿದೆ. ಈ ನಡುವೆ ಪಾಲಿಕೆ ಕಂದಾಯ ವಿಭಾಗವು ಆಸ್ತಿ ತೆರಿಗೆ(Property Tax) ಸಂಗ್ರಹದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಕಳೆದ ಆರು ತಿಂಗಳಲ್ಲಿ ಸಂಗ್ರಹವಾಗಿರುವ ಒಟ್ಟು .2,291 ಕೋಟಿ ಆಸ್ತಿ ತೆರಿಗೆ(Tax) ಪೈಕಿ ಆನ್‌ಲೈನ್‌ ಮುಖಾಂತರ .1,230 ಕೋಟಿ ಹಾಗೂ ಬ್ಯಾಂಕ್‌ ಖಾತೆ ಮೂಲಕ .1,061 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಆನ್‌ಲೈನ್‌ ಮೂಲಕವೇ ಹೆಚ್ಚಿನ ತೆರಿಗೆ ಪಾವತಿಯಾಗಿದೆ.

ಪ್ರಸಕ್ತ ಸಾಲಿನಲ್ಲಿ 4 ಸಾವಿರ ಕೋಟಿ ಆಸ್ತಿಗೆ ತೆರಿಗೆ ಸಂಗ್ರಹ ಗುರಿ ನಿಗದಿಪಡಿಸಲಾಗಿದೆ. ಈ ನಿಟ್ಟಿನಲ್ಲಿ ಆರು ತಿಂಗಳಲ್ಲಿ ಶೇ.57ರಷ್ಟು ಗುರಿ ಸಾಧಿಸಿದೆ. ಉಳಿದಿರುವ ಆರು ತಿಂಗಳಲ್ಲಿ ಶೇ.53ರಷ್ಟು ಗುರಿ ಸಾಧಿಸಬೇಕಿದೆ. ಪ್ರಸಕ್ತ ಆರ್ಥಿಕ ವರ್ಷದ ಆರಂಭದಿಂದಲೇ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಸಂಬಂಧ ಪಾಲಿಕೆಯಿಂದ ಹಲವು ಕ್ರಮ ಕೈಗೊಳ್ಳಲಾಗಿದೆ. ಪಾಲಿಕೆಯ ಎಂಟು ವಲಯಗಳಲ್ಲಿ ತೆರಿಗೆ ವಸೂಲಿ ಅಭಿಯಾನ, ಖಾತಾ ಮೇಳ ಸೇರಿದಂತೆ ತೆರಿಗೆ ಸಂಗ್ರಹಕ್ಕೆ ಪೂರಕ ಕ್ರಮ ಜರುಗಿಸಲಾಗಿದೆ.

ಕೊಳಗೇರಿ ಮಕ್ಕಳಿಗಾಗಿ ‘ಮನೆ ಬಾಗಿಲಿಗೆ ಶಾಲೆ’

ಪಾಲಿಕೆ ಎಂಟು ವಲಯಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಸುಮಾರು ಮೂರು ಲಕ್ಷಕ್ಕೂ ಅಧಿಕ ಸುಸ್ತಿದಾರರ ಪೈಕಿ 1.41 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಿ, ಬಾಕಿ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ ಎಂದು ಪಾಲಿಕೆ ಕಂದಾಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

21 ಸಾವಿರ ಹೊಸ ಆಸ್ತಿ ತೆರಿಗೆ ವ್ಯಾಪ್ತಿಗೆ

ವಲಯ ಮಟ್ಟದಲ್ಲಿ ಖಾತಾ ಮೇಳದ ಮುಖಾಂತರ ಪಾಲಿಕೆ ವ್ಯಾಪ್ತಿಯಲ್ಲಿ 21 ಸಾವಿರಕ್ಕೂ ಅಧಿಕ ಹೊಸ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ವಲಯದಲ್ಲಿ ಹೆಚ್ಚಿನ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಸೇರಿಸಬೇಕಿದೆ. ಶೀಘ್ರದಲ್ಲೇ ವಿಶೇಷ ಖಾತಾ ಮೇಳ ಹಮ್ಮಿಕೊಂಡು ಒಂದು ಲಕ್ಷಕ್ಕೂ ಅಧಿಕ ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ವಲಯ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಓಸಿ ಆಧರಿಸಿ ತೆರಿಗೆ ಸಂಗ್ರಹ

ನಿವೇಶನ, ವಾಸದ ಮನೆ, ವಾಣಿಜ್ಯ ಕಟ್ಟಡ ಸೇರಿದಂತೆ ಹಲವು ವರ್ಗದ ಕಟ್ಟಡಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ನಿಗದಿಗೊಳಿಸಲಾಗಿದೆ. ಉದಾಹರಣೆಗೆ ನಿವೇಶನಕ್ಕೆ ಆಸ್ತಿ ತೆರಿಗೆ ಕಡಿಮೆ ಇದೆ. ಮಾಲೀಕ ನಿವೇಶನದಲ್ಲಿ ಕಟ್ಟಡ ನಿರ್ಮಿಸಿ, ಸ್ವಾಧೀನಾನುಭವಪತ್ರ(ಓಸಿ) ಪಡೆದ ಬಳಿಕ ಕಟ್ಟಡಕ್ಕೆ ನಿಗದಿಗೊಳಿಸಿರುವ ಆಸ್ತಿಗೆ ತೆರಿಗೆ ಪಾವತಿಸಬೇಕು. ಆದರೆ, ಕೆಲವರು ಕಟ್ಟಡ ನಿರ್ಮಿಸಿ ಓಸಿ ಪಡೆದರೂ ನಿವೇಶನಕ್ಕೆ ಮಾತ್ರ ಆಸ್ತಿಗೆ ತೆರಿಗೆ ಪಾವತಿಸುತ್ತಿದ್ದಾರೆ. ಇಂಥವರನ್ನು ಪತ್ತೆ ಹಚ್ಚಿ ಆ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ.

ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಸಂಗ್ರಹ ವಿವರ (ಏ.1ರಿಂದ ಸೆ.30)

ವಲಯ ಗುರಿ ಸಂಗ್ರಹ (ಕೋಟಿ)

ಪೂರ್ವ 759 434
ಪಶ್ಚಿಮ 465 234
ದಕ್ಷಿಣ 623 350
ಯಲಹಂಕ 341 232
ಮಹದೇವಪುರ 996 592
ಬೊಮ್ಮನಹಳ್ಳಿ 432 230
ರಾಜರಾಜೇಶ್ವರಿನಗರ 262 154
ದಾಸರಹಳ್ಳಿ 120 63
ಒಟ್ಟು 4,000 2,291

Follow Us:
Download App:
  • android
  • ios