ಕೋವಿಡ್‌ನಿಂದ ಗುಣಮುಖ: ಹೊರಟ್ಟಿ ಆಸ್ಪತ್ರೆಗೆಯಿಂದ ಬಿಡುಗಡೆ
* ಕಿಮ್ಸ್‌ಗೆ ಇನ್ನಷ್ಟು ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ
* ಕಿಮ್ಸ್ ಆಸ್ಪತ್ರೆಯ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಹೊರಟ್ಟಿ
* ಇನ್ನಷ್ಟು ದಿನ ಮನೆಯಲ್ಲಿ ವಿಶ್ರಾಂತಿ ಪಡೆಯಲಿರುವ ಹೊರಟ್ಟಿ
ಹುಬ್ಬಳ್ಳಿ(ಮೇ.12): ಕೋವಿಡ್ ದೃಢಪಟ್ಟಿದ್ದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹುಷಾರಾಗಿ ಕಿಮ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನಷ್ಟು ದಿನ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಉತ್ತಮವಾಗಿ ನಿರ್ವಹಿಸುತ್ತಿರುವ ಕಿಮ್ಸ್ ಆಸ್ಪತ್ರೆಯ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಹೊರಟ್ಟಿ, ಕೊರೋನಾ ಸಂಬಂಧಪಟ್ಟಂತೆ ಸರ್ಕಾರಕ್ಕೆ ಪತ್ರ ಬರೆದು ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
"
ಹುಬ್ಬಳ್ಳಿ: ಸಭಾಪತಿ ಹೊರಟ್ಟಿಗೆ ಕೊರೋನಾ ದೃಢ
ಈ ಕಿಮ್ಸ್ ಆಸ್ಪತ್ರೆಗೆ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ ಹಾಗೂ ಕಾರವಾರ ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ಇಲ್ಲಿನ ಸಿಬ್ಬಂದಿ ಕೋವಿಡ್ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿದ್ದರೂ ಮೂಲಭೂತ ಸೌಕರ್ಯಗಳು ಹಾಗೂ ಯಂತ್ರೋಪಕರಣಗಳ ಕೊರತೆಯಿಂದ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಕೋವಿಡ್ ಸೋಂಕಿತರಿಗೆ ಅವಶ್ಯಕವಾಗಿರುವ ಆಕ್ಸಿಜನ್ ಬೆಡ್ ಹಾಗೂ ವೆಂಟಿಲೇಟರ್ ಬೆಡ್‌ಗಳ ತೀವ್ರ ಕೊರತೆಯಿದೆ. ನಿತ್ಯವೂ ಯುವಕರು ಸೇರಿದಂತೆ ಮರಣ ಹೊಂದಿದ್ದನ್ನು ಕಣ್ಣಾರೆ ಕಂಡಿದ್ದಾಗಿ ವಿವರಿಸಿದ್ದಾರೆ.
ಕಿಮ್ಸ್ ಆಸ್ಪತ್ರೆಯಲ್ಲಿ ಇದೀಗ ಕೇವಲ 100 ವೆಂಟಿಲೇಟರ್ ಬೆಡ್‌ಗಳು ಲಭ್ಯವಿದ್ದು, ಇಲ್ಲಿ ಇನ್ನೂ ಕನಿಷ್ಠ 300 ವೆಂಟಿಲೇಟರ್‌ಗಳ ಅವಶ್ಯಕತೆಯಿದೆ. ಕೂಡಲೇ ಈ ಬಗ್ಗೆ ತಾವು ಹೆಚ್ಚಿನ ಕಾಳಜಿ ವಹಿಸಿ ವೆಂಟಿಲೇಟರ್‌ಗಳನ್ನು ದೊರಕಿಸಿಕೊಬೇಕು. ಅಲ್ಲದೇ ಇದಕ್ಕೆ ಪೂರಕವಾಗುವಂತೆ ಅವಶ್ಯಕವಿರುವ ಆಮ್ಲಜನಕ ಸರಬರಾಜಿಗೆ ಅಗತ್ಯವಿರುವ ಘಟಕ ಸ್ಥಾಪಿಸಬೇಕು. ಇನ್ನು ಹೆಚ್ಚುವರಿಯಾಗಿ 500 ಆಕ್ಸಿಜನ್ ಬೆಡ್‌ಗಳ ಕಲ್ಪಿಸಬೇಕೆಂದು ಹೊರಟ್ಟಿ ಒತ್ತಾಯಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona