ಹುಬ್ಬಳ್ಳಿ(ಮೇ.14): ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಇದೀಗ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ವರೂರು ಬಳಿಯಿರುವ ನಿಸರ್ಗ ತೋಟದ ಮನೆಯಲ್ಲಿ ಕೃಷಿ ಕಾರ್ಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಹೊಲದಲ್ಲಿ ಸ್ವತಃ ಟ್ರ್ಯಾಕ್ಟರ್‌ ಮೂಲಕ ಉಳುಮೆ ಮಾಡುತ್ತ ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.

ಕೋವಿಡ್‌ನಿಂದ ಗುಣಮುಖ: ಹೊರಟ್ಟಿ ಆಸ್ಪತ್ರೆಗೆಯಿಂದ ಬಿಡುಗಡೆ

ಇದರೊಂದಿಗೆ ಹಲವಾರು ಸೋಂಕಿತ ನಾಗರಿಕರು, ಶಿಕ್ಷಕರು, ಸ್ನೇಹಿತರನ್ನು ಸಂಪರ್ಕಿಸಿ ಆರೋಗ್ಯ ವಿಚಾರಿಸುತ್ತಿದ್ದಾರೆ. ತಾವು ಕೋವಿಡ್‌ನಿಂದ ಗುಣಮುಖರಾಗಿ ಬಂದಿರುವುದರಿಂದ ಸ್ನೇಹಿತರಿಗೆ ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದಾರೆ.