ಧಾರವಾಡ (ಅ.07): ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ ಬಸವರಾಜ ಗುರಿಕಾರ ಅವರು ತಾವು, ಪತ್ನಿ ಹಾಗೂ ಪುತ್ರ ಸೇರಿದಂತೆ ಒಟ್ಟು 1.44 ಕೋಟಿ ಕುಟುಂಬದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. 

ನಿವೃತ್ತ ಶಿಕ್ಷಕರಾಗಿರುವ ಗುರಿಕಾರ ಅವರ ಕೈಯಲ್ಲಿ 45 ಸಾವಿರ ನಗದು ಇದ್ದು, ಪತ್ನಿ ನಾಗರತ್ನ ಬಳಿ 41 ಸಾವಿರ ರು. ಹಾಗೂ ಪುತ್ರ ಪ್ರವೀಣ ಬಳಿ 48 ಸಾವಿರ ಇದೆ. 

ಮೂವರು ಸೇರಿ ಒಟ್ಟು ಚಿರಾಸ್ತಿ 81.07 ಲಕ್ಷ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಅದೇ ರೀತಿ ಗುರಿಕಾರ ಅವರ ಹೆಸರಿನಲ್ಲಿ ಯಾವ ಸ್ಥಿರಾಸ್ತಿ ಇಲ್ಲ. 

ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಡಿ.ಕೆ.ಶಿವಕುಮಾರ್

ಆದರೆ, ಪತ್ನಿ ನಾಗರತ್ನಾ ಅವರ ಹೆಸರಿನಲ್ಲಿ ವಿವಿಧೆಡೆ 35 ಲಕ್ಷ ರು. ಮೌಲ್ಯದ ಕೃಷಿಯೇತರ ಭೂಮಿ ಇದೆ. ಪುತ್ರ ಪ್ರವೀಣ ಬಳಿ 28 ಲಕ್ಷ ರು. ಮೌಲ್ಯದ ಕೃಷಿಯೇತರ ಭೂಮಿ ಇದೆ. ಒಟ್ಟು 63 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.