ಕಾರಟಗಿ: ಸ್ವಂತ ಖರ್ಚಿನಲ್ಲಿ ಎರಡು ಆ್ಯಂಬುಲೆನ್ಸ್ ನೀಡಿದ ಶಾಸಕ ದಢೇಸೂಗೂರ
* ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು
* ಸಾರ್ವಜನಿಕ ಸೇವೆಗೆ ಅರ್ಪಿಸಿದ ಆ್ಯಂಬುಲೆನ್ಸ್
* ಶ್ರೀರಾಮನಗರದಲ್ಲಿ 30 ಆಕ್ಸಿಜನ್‌ಬೆಡ್ ಆಸ್ಪತ್ರೆ ಪ್ರಾರಂಭ
ಕಾರಟಗಿ(ಮೇ.24): ಕ್ಷೇತ್ರದ ಜನರಿಗೆ ತುರ್ತಾಗಿ ಕೋವಿಡ್ ಸೇರಿದಂತೆ ನಾನಾ ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ದೊರಕಿಸಲು ಶಾಸಕ ಬಸವರಾಜ ದಢೇಸೂಗೂರು ತಮ್ಮ ಸ್ವಂತ ಖರ್ಚಿನಲ್ಲಿ 2 ಸುಸಜ್ಜಿತ ಆ್ಯಂಬುಲೆನ್ಸ್‌ಗಳನ್ನು ಸಾರ್ವಜನಿಕ ಸೇವೆಗೆ ಅರ್ಪಿಸಿದ್ದಾರೆ.
ಇಲ್ಲಿನ ಶಾಸಕರ ಕಚೇರಿ ಬಳಿ ಎರಡು ಸುಸಜ್ಜಿತ ಜೊತೆಗೆ ಆಮ್ಲಜನಕದ ಸೌಲಭ್ಯ ಹೊಂದಿದ ಆ್ಯಂಬುಲೆನ್ಸ್‌ಗಳಿಗೆ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ ಭಾನುವಾರ ಬೆಳಗ್ಗೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ದಢೇಸ್ಗೂರು, ಕನಕಗಿರಿ ಕ್ಷೇತ್ರದಲ್ಲಿ ಕೋವಿಡ್‌ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದಿಂದಲೂ ಸಾಮಾನ್ಯ ರೋಗಿಗಳು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಸಕಾಲಕ್ಕೆ ತುರ್ತು ಸೇವೆ ಒದಗಿಸಲು ಕನಕಗಿರಿ ಹಾಗೂ ಕಾರಟಗಿ ತಾಲೂಕಿಗೆ ಪ್ರತ್ಯೇಕ ಆ್ಯಂಬುಲೆನ್ಸ್‌ಗಳನ್ನು ವೈಯಕ್ತಿಕವಾಗಿ ಒದಗಿಸಲಾಗುತ್ತಿದೆ. ರೋಗಿಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗುವುದು. ಒಂದು ವೇಳೆ ಹೆಚ್ಚಿನ ಮತ್ತು ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಗಂಗಾವತಿ, ಕೊಪ್ಪಳಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಯಲಬುರ್ಗಾ: ವಿವಾದಕ್ಕೀಡಾದ ಆಕ್ಸಿಜನ್ ಬಸ್
ಇನ್ನು, ಕೋವಿಡ್ ಎರಡನೇ ಅಲೆ ಸೋಂಕು ಹಾವಳಿ ಹೆಚ್ಚುತ್ತಿದ್ದು ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಈಗಾಗಲೇ ಶ್ರೀರಾಮನಗರದಲ್ಲಿ 30 ಆಕ್ಸಿಜನ್‌ಬೆಡ್‌ಇರುವ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಕೊಪ್ಪಳದ ಗವಿಮಠದಲ್ಲೂ ಕೋವಿಡ್‌ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರ ಕನಕಗಿರಿಯಲ್ಲೂ ಆಕ್ಸಿಜನ್‌ಬೆಡ್‌ಆರಂಭಿಸಲಾಗುವುದು ಎಂದರು.
ಎಪಿಎಂಸಿ ಜಿ. ರಾಮಮೋಹನ್, ವಿಶೇಷ ಎಪಿಎಂಸಿ ಸದಸ್ಯ ಗಂಗಾಧರ ಕೊಮಾರೆಪ್ಪ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ, ತಹಸೀಲ್ದಾರ್‌ಶಿವಶಂಕ್ರಪ್ಪ ಕಟ್ಟೊಳ್ಳಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಘವೇಂದ್ರ ಟಿಕಾರೆ, ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ, ಪಿಎಸ್‌ಐ ಎಲ್.ಬಿ. ಅಗ್ನಿ, ಪ್ರಮುಖರಾದ ಶಿವಶರಣೆಗೌಡ ಯರಡೋಣಾ, ಮಹೆಬೂಬ್‌ಸಿದ್ದಾಪುರ, ಮಂಜುನಾಥ ಮಸ್ಕಿ, ಬಸವರಾಜ ಅಂಗಡಿ, ಮಂಜುನಾಥ ಗುಂಜಳ್ಳಿ ಸೇರಿದಂತೆ ಇತರರಿದ್ದರು.