ಲಿಂಗಾಯತರಿಗೆ ಬಸವಣ್ಣನೇ ಧರ್ಮ ಗುರು: ಸಚಿವ ಕಾರಜೋಳ
ಬಸವಸಾಗರ ಆಣೆಕಟ್ಟೆ ವೃತ್ತದ ಮುಖ್ಯದ್ವಾರದಲ್ಲಿ ಅಶ್ವಾರೂಢ ಬಸವಣ್ಣನವರ ಮೂರ್ತಿ ಪ್ರತಿಸ್ಠಾಪನೆ
ಲಿಂಗಸುಗೂರು(ಸೆ.07): ಬಸವಣ್ಣನವರು ಲಿಂಗಾಯತರಿಗೆ ಧರ್ಮ ಗುರು, ವಚನಗಳೇ ಧರ್ಮ ಗ್ರಂಥಗಳಾಗಿವೆ. ಇವುಗಳನ್ನು ಸರಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಬಸವಣ್ಣನವರು ಬಯಸಿದ ಸಮಾನತೆಯ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ತಾಲೂಕಿನ ಜಾವೂರ ಬಳಿಯ ಬಸವಸಾಗರ ಆಣೆಕಟ್ಟೆಯ ವೃತ್ತದ ಮುಖ್ಯದ್ವಾರದಲ್ಲಿ ಅಶ್ವಾರೂಢ ಬಸವಣ್ಣನವರ ಮೂರ್ತಿ ಪ್ರತಿಸ್ಠಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸುಂದರ ಕನಸು ಅನುಭವ ಮಂಟಪವಾಗಿದೆ. ಅದರ ಮೂಖೇನ ಸಮಾಜದ ಸುಧಾರಣೆ ಶ್ರಮಿಸಿದರು. ಸರ್ವ ಜಾತಿ, ಜನರನ್ನು ಒಂದುಗೂಡಿಸಿ ಲಿಂಗಭೇದ ತೊಡೆದು ಹಾಕಲು ಅಡಿಪಾಯ ಹಾಕಿದರು. 770 ಗಣಂಗಳು ಬಸವಣ್ಣವರು ವಾರಸುದಾರರಾಗಿದ್ದಾರೆ ಎಂದು ಹೇಳಿದರು.
ಸ್ವಂತ ಖರ್ಚಲ್ಲಿ ವಿಚಾರಣೆಗೆ ಬರಲು ಅಧಿಕಾರಿಗೆ ಸೂಚನೆ: ತಪ್ಪು ಮಾಹಿತಿ ನೀಡಿದ ಆಯುಕ್ತ ವಿರುದ್ಧ ಹೈಕೋರ್ಟ್ ಗರಂ
12ನೇ ಶತಮಾನದಲ್ಲಿ ಬಸವಣ್ಣನವರು ಹುಟ್ಟು ಹಾಕಿದ ಸಮ ಸಮಾಜದ ಕನಸು 21ನೇ ಶತಮಾನದಲ್ಲಿ ಮುಂದುವರಿದಿದೆ. ಪ್ರಸ್ತುತ ದಿನಮಾನಗಳಲ್ಲಿ ಅದು ಸಾಕಾರಗೊಳ್ಳಲು ಸಮಾಜದಲ್ಲೂ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ. ಬಸವಣ್ಣನವರ ಕನಸು ನನಸು ಮಾಡಲು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಮುನ್ನೆಡೆಯಬೇಕೆಂದು ಕರೆ ನೀಡಿದರರು.
ನೀರಾವರಿ:
ರಾಜ್ಯದಲ್ಲಿ ನಾನಾ ಜಲಮೂಲಗಳಿಂದ 64 ಲಕ್ಷ ಹೆಕ್ಟೇರ್ ನೀರಾವರಿ ಸೌಲಭ್ಯ ಹೊಂದಬಹುದಾಗಿದೆ. ಈ ಪೈಕಿ 47 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು ಕೃಷ್ಣಾನದಿಯ ನೀರು ಹಂಚಿಕೆಗೆ ಆಂಧ್ರ ಸೇರಿ ಇತರೇ ರಾಜ್ಯಗಳು ವ್ಯಾಜ್ಯ ಹೂಡಿವೆ. ಆಲಮಟ್ಟಿಆಣೆಕಟ್ಟೆಎತ್ತರಿಸಿದರೆ 22 ಗ್ರಾಮಗಳು ಮುಳುಗಡೆಯಾಗಲಿವೆ. ಕೃಷ್ಣಾನದಿ ನೀರು ಬಳಕೆಗೆ ಸರ್ಕಾರ ಯೋಜನೆ ರೂಪಿಸಿಕೊಂಡಿದೆ. ಪ್ರಸಕ್ತ ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು 70 ಸಾವಿರ ಕೋಟಿ ಹಣ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಹಿಂದೆ ಕೇಂದ್ರದಲ್ಲಿ ಹಲವು ದಶಕಗಳ ಕಾಲ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇತ್ತು. ಅವರು ಮನಸ್ಸು ಮಾಡಿದ್ದರೆ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಲ್ಲಾ ಹಳ್ಳಿಗಳನ್ನು ನೀರಾವರಿಗೆ ಒಳಪಡಿಸಬಹುದಿತ್ತು. ಆದರೆ ಕಾಂಗ್ರೆಸ್ ಪಕ್ಷವು ರೈತರ ಅಭಿವೃದ್ಧಿಗೆ ಮುಂದಾಗಲಿಲ್ಲ. ಸುಪ್ರೀಂ ಕೋರ್ಟನಲ್ಲಿ ಕೃಷ್ಣಾನದಿ ನೀರಿನ ಹಂಚಿಕೆಯಾದರೆ ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತವಾಗಲಿದೆ ಎಂದು ತಿಳಿಸಿದರು.
Raichur: ಬ್ಲ್ಯಾಕ್‌ಮೇಲ್ ಮಾಡಿ 5 ಲಕ್ಷಕ್ಕೆ ಬೇಡಿಕೆ, 6 ಜನ ನಕಲಿ ಪತ್ರಕರ್ತರ ಬಂಧನ
ಬಸವಸಾಗರ ಆಣೆಕಟ್ಟೆಕೆಳಗಡೆ ಉದ್ಯಾನವನ ನಿರ್ಮಾಣಕ್ಕೆ 100 ಕೋಟಿ ಅನುದಾನ ನೀಡಲಾಗುವುದು, ಆಣೆಕಟ್ಟೆಯನ್ನು ಸುಂದರ ತಾಣವಾಗಿಸಲು ಸರ್ಕಾರ ಯತ್ನಿಸಲಿದೆ. ಲಿಂಗಸುಗೂರು ತಾಲೂಕಿನ 5 ಕೆರೆಗಳ ತುಂಬಿಸಿಕೊಳ್ಳಲು ಅಗತ್ಯ ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಶಾಸಕ ಡಿ.ಎಸ್ ಹೂಲಗೇರಿ, ಹುನಗುಂದ ಶಾಸಕ ದೊಡ್ಡನಗೌಡ ಲೆಕ್ಕಿಹಾಳ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಹಟ್ಟಿಚಿನ್ನದಗಣಿ ಅಧ್ಯಕ್ಷ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಚಿತ್ತಾಪುರ ಗ್ರಾ.ಪಂ ಅಧ್ಯಕ್ಷೆ ಹನುಮವ್ವ ರಂಗಪ್ಪ, ಸಹಾಯಕ ಆಯುಕ್ತ ರಾಹುಲ್ ಸಂಕನೂರು, ತಹಸೀಲ್ದಾರ ಬಲರಾಮ ಕಟ್ಟಿಮನಿ, ಕೃಷ್ಣಾ ಮೇಲ್ದಂಡೆ ಯೋಜನೆ ಎಂಜಿನಿಯರುಗಳಾದ ಸಂಜೀವ ಕುಮಾರ, ಅಶೋಕ, ಶಂಕರ ಕಿಮಾವತ್, ಮಲ್ಲಿಕಾರ್ಜುನ ಪಾಟೀಲ್ ಸೇರಿದಂತೆ ಇದ್ದರು.