ಚಿತ್ರದುರ್ಗ (ಫೆ.03):   ತಮ್ಮ ಮೇಲಿನ ಶಿಸ್ತು ಕ್ರಮದ ಕುರಿತು ರಾಜ್ಯದಲ್ಲಿ ನಾವೇ ಮಂತ್ರಿಗಿರಿ ಕೊಡುವ ಯೋಗ ಬರಲಿದೆ. ದೆಹಲಿಗೆ ಹೋಗಿ, ಏನು ಹೇಳಿದ್ರೂ ಏನೂ ಆಗಲ್ಲ. ನಾನು ಏನೆಂಬುದು ಹೈಕಮಾಂಡ್‌ಗೆ ಗೊತ್ತಿದೆ’ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದರು.

 ನಗರದಲ್ಲಿ ಮಂಗಳವಾರ ಪಂಚಮಸಾಲಿ 2ಎ ಹೋರಾಟದ ಸಮಾವೇಶದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿದೆ. ಪಂಚಮಸಾಲಿ ಶ್ರೀಗಳು ಪಾದಯಾತ್ರೆ ಮಾಡಿದರೂ, ಸಿಎಂ ಮಾತನಾಡಿಲ್ಲ. ಈ ಬಗ್ಗೆ ನಾವು ಸದನದಲ್ಲಿ ಪ್ರಸ್ತಾಪಿಸಿದ ಬಳಿಕ ಸಭೆ ಕರೆದರು ಎಂದರು.

ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ ST, 2A ಮೀಸಲಾತಿ ಹೋರಾಟ: ಬಿಎಸ್‌ವೈ ಗಪ್‌-ಚುಪ್ ...

ಇವತ್ತು ಬಾವಿಗೆ ಇಳಿದು ನಾವು 2ಎ ಮೀಸಲಾತಿಗಾಗಿ ಧರಣಿ ಮಾಡಿದೆವು. ಸಿಎಂ ಊಟ, ನಾಷ್ಟಾಮಾಡಿಸುವುದರಿಂದ ನಮ್ಮ ಬೇಡಿಕೆ ಈಡೇರಲ್ಲ. ನಾವು ಶಾಸಕರು, ಸಂಸದರು ಹೇಗೆ ಆಗಬೇಕೆಂದು ನಮಗೆ ಗೊತ್ತಿದೆ. ನಮ್ಮನ್ನು ಹೊರಗೆ ಹಾಕಿದ್ರೂ ಆಗ್ತೀವಿ, ಪಕ್ಷದೊಳಗಿದ್ದರೂ ಗೆಲ್ತೀವಿ. ಪಕ್ಷೇತರವಾಗಿ ವಿಧಾನ ಪರಿಷತ್‌ಗೆ ಗೆದ್ದು ಬಂದಿದ್ದೆನು. ಶಾಸಕರ ಮನೆ ಬಳಿ ಪಂಚಮಸಾಲಿ ಸಮುದಾಯದ ಜನ ಧರಣಿ ಮಾಡಿ, ಪಂಚಮಸಾಲಿ ಸಮಾಜದ ಶಕ್ತಿ ತೋರಿಸಬೇಕಿದೆ ಎಂದು ಹೇಳಿ​ದರು.

ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ ಕ್ಷೇತ್ರಗಳಲ್ಲಿ ನಮ್ಮ ಸಮಾಜ ಇದೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ವಿಚಾರ ಎರಡು ಸಲ ಹೇಳಿ ಟಾಂಗ್‌ ಕೊಟ್ಟಿದ್ದೀರಿ, ಈ ಸಲ ಬಿಡುವು​ದಿ​ಲ್ಲ ಎಂದು ಸಿಎಂಗೆ ಹೇಳಿದ್ದೇನೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದ ಬಳಿಕವೇ ಮೀಟಿಂಗ್‌ ಎಂದು ಹೇಳಿದ್ದೇನೆ ಎಂದರು.

-ಶಾಸ​ಕರ ಮನೆ ಬಳಿ ಧರಣಿ ಮಾಡಿ, ಪಂಚ​ಮ​ಸಾಲಿ ಶಕ್ತಿ ತೋರಿ​ಸ​ಬೇ​ಕಿ​ದೆ