ಚಿತ್ರದುರ್ಗ (ಫೆ.28): ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇತಿಹಾಸ ಏನು..? ಅವರೆಷ್ಟು ಭೂ ಕಬಳಿಕೆ ಮಾಡಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಅವರೇನು ಬಹಳ ಸಾಚಾ ಎನ್ನುವಂತೆ ಮಾತಾಡುತ್ತಾರೆ ಎಂದು ಬಿಜೆಪಿ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

ಚಿತ್ರದುರ್ಗದಲ್ಲಿ ಮಾತನಾಡಿದ ಯತ್ನಾಳ್, ಸದನದಲ್ಲಿರುವ ಯತ್ನಾಳ್ ಓರ್ವ ನಾಲಾಯಕ್ ವ್ಯಕ್ತಿ ಎನ್ನುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 

ರಮೇಶ್ ಕುಮಾರ್ ಸತ್ಯಹರಿಶ್ಚಂದ್ರನಲ್ಲ.  ಮೊದಲು ಅವರು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ. ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ನನ್ನ ಮೇಲೆ ನೀರಾವರಿ ಹೋರಾಟದ 23 ಕೇಸ್ಗಳಿವೆ. ಯಾವುದೇ ಭೂ ಕಬಳಿಕೆ ಅತ್ಯಾಚಾರ, ನಕಲಿ ನೋಟ್ ಮಾಡಿರುವ ಕೇಸ್ ಇಲ್ಲ ಎಂದಿದ್ದಾರೆ. 

ದೊರೆಸ್ವಾಮಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ: ಸಚಿವ ಸೋಮಣ್ಣ...

ರಮೇಶ್ ಕುಮಾರ್ ಅವರಿಂದ ನಾನು ಯಾವುದೇ ಆದರ್ಶ ತತ್ವ ಕಲಿಯುವ ಅವಶ್ಯಕತೆ ಇಲ್ಲ.  ನಾನು ದೇಶ ವಿರೋಧಿ, ಪಾಕಿಸ್ತಾನದ ಏಜೆಂಟ್ ಅಲ್ಲ. ದೇಶದ ಪರ ಮಾತಾಡುವ ನನಗೆ ಯಾರ ಭಯವೂ ಇಲ್ಲ ಎಂದು ಯತ್ನಾಳ್ ಹೇಳಿದರು. 

ಮಂಗಳೂರಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಮಂಗಳೂರಲ್ಲಿಯೂ ದಿಲ್ಲಿ ರೀತಿಯ ಗಲಭೆಯೇ ಆಗುತಿತ್ತು. ದಿಲ್ಲಿಯಲ್ಲಿ ಪೊಲೀಸರಿಗೆ ಬಂದೂಕು ತೋರಿಸುತ್ತಿದ್ದಾರೆ. ಇದನ್ನ ವಿರೋಧ ಮಾಡುವುದು ಬಿಟ್ಟು ಪ್ರತಿಭಟನೆ ಮಾಡ್ತಾರೆ. ಕಾಂಗ್ರೆಸಿನವರಿಗೆ ನಾಚಿಕೆ ಆಗಬೇಕು ಎಂದು ಯತ್ನಾಳ್ ಹರಿಹಾಯ್ದರು. 

ಸಾವರ್ಕರ್ ಅಷ್ಟು ದೊರೆಸ್ವಾಮಿ ಲಾಟಿ ಏಟು ತಿಂದಿದ್ದಾರಾ..? ಇವರು ಯಾವ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿರಬಹುದು ಎಂದು ಮತ್ತೆ ದೊರೆಸ್ವಾಮಿ ವಿರುದ್ಧ ಹರಿಹಾಯ್ದರು. ಸಾವರ್ಕರ್ ವಿರುದ್ಧ ಅವಹೇಳನಕಾರಿ  ಹೇಳಿಕೆ ನೀಡುವ ಕಾಂಗ್ರೆಸ್ ಮುಖಂಡರು ಮೊದಲು ಕ್ಷಮೆ ಕೇಳಲಿ ಎಂದು ಯತ್ನಾಳ್ ಹೇಳಿದರು.