Tumakuru: ಪ್ರೊ.ಬರಗೂರು ರಾಮಚಂದ್ರಪ್ಪ ನಾಡಿನ ಸಾಂಸ್ಕೃತಿಕ ರಾಯಭಾರಿ: ಬಿಎಸ್‌ಪಿ
ಪ್ರೊ. ಬರಗೂರು ರಾಮಚಂದ್ರಪ್ಪ ನಾಡು ಕಂಡ ಪ್ರಸಿದ್ಧ ಸಾಹಿತಿ, ಸಾಂಸ್ಕೃತಿಕ ರಾಯಭಾರಿ. ಅವರ ವಿರುದ್ಧ ಬಿಜೆಪಿ ಮುಖಂಡರು ಕೊಟ್ಟಿರುವ ಹುರುಳಿಲ್ಲದ ದೂರನ್ನು ಕೂಡಲೇ ರದ್ದುಪಡಿಸುವಂತೆ ರಾಜ್ಯ ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ ಒತ್ತಾಯಿಸಿದರು.
ತುಮಕೂರು (ಸೆ.11): ಪ್ರೊ. ಬರಗೂರು ರಾಮಚಂದ್ರಪ್ಪ ನಾಡು ಕಂಡ ಪ್ರಸಿದ್ಧ ಸಾಹಿತಿ, ಸಾಂಸ್ಕೃತಿಕ ರಾಯಭಾರಿ. ಅವರ ವಿರುದ್ಧ ಬಿಜೆಪಿ ಮುಖಂಡರು ಕೊಟ್ಟಿರುವ ಹುರುಳಿಲ್ಲದ ದೂರನ್ನು ಕೂಡಲೇ ರದ್ದುಪಡಿಸುವಂತೆ ರಾಜ್ಯ ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ ಒತ್ತಾಯಿಸಿದರು. ತುಮಕೂರಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಮಾತನಾಡಿದರು. ಬಂಡಾಯ ಸಾಹಿತಿಯಾಗಿ, ದಲಿತ-ಬಂಡಾಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಈಗ ಬಂಡಾಯ ಸಾಹಿತ್ಯ ಸಂಘಟನೆಯ ಮೂಲಕ ರಾಜ್ಯಾದ್ಯಂತ ಖ್ಯಾತರಾಗಿರುವ ಬರಗೂರು ರಾಮಚಂದ್ರಪ್ಪನವರು ಕಥೆ, ಕವನ, ಕಾದಂಬರಿ, ಸಿನಿಮಾ ನಿರ್ದೇಶನದ ಮೂಲಕ ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.
ರಾಜ್ಯದ ಅನೇಕ ವಿಶ್ವ ವಿದ್ಯಾಲಯಗಳಲ್ಲಿ ಇವರ ಶಿಷ್ಯರು ಪಾಠ ಮಾಡುತ್ತಿದ್ದಾರೆ. ಇಂತಹ ಬರಗೂರು ತುಮಕೂರು ಜಿಲ್ಲೆಯವರೇ ಆಗಿರುವುದು ಹೆಮ್ಮೆಯ ಸಂಗತಿ. ಇವರ ವಿರುದ್ಧ ಹುರುಳಿಲ್ಲದ ದೂರನ್ನು ಬಿಜೆಪಿ ಮುಖಂಡರು ಬೆಂಗಳೂರಿನಲ್ಲಿ ದಾಖಲಿಸಿರುವುದು ಹಾಸ್ಯಾಸ್ಪದ. ಈ ಸಂಬಂಧ ಈಗಾಗಲೇ ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ ನೀಡಿದ್ದರೂ, ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ ಎಂದು ಗುರುಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು. ಬಿಎಸ್‌ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ. ರಂಗಧಾಮಯ್ಯ ಮಾತನಾಡಿ, ಬರಗೂರು ರಾಮಚಂದ್ರಪ್ಪ ಮೇಷ್ಟ್ರು ಎಂದೆ ಪ್ರಸಿದ್ಧರಾಗಿದ್ದು ತನ್ನದೇ ಸಾಹಿತ್ಯ, ಚಳವಳಿಗಳ ಮೂಲಕ ಕನ್ನಡ ನಾಡಿಗೆ ಸೇವೆ ಸಲ್ಲಿಸಿದ್ದಾರೆ.
ಜೆಡಿಎಸ್ ಸದೃಢಗೊಳಿಸಲು ಪಂಚರತ್ನ ಪ್ರವಾಸ: ನಿಖಿಲ್ ಕುಮಾರಸ್ವಾಮಿ
ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿಶ್ವ ವಿದ್ಯಾಲಯವನ್ನು ಸ್ಥಾಪಿಸುವುದಕ್ಕಿಂತ ಮುಂಚೆ ಕನ್ನಡ ಮತ್ತು ಇತಿಹಾಸ ವಿಭಾಗಗಳನ್ನು ತೆಗೆದು ಬಹಳಷ್ಟುಗ್ರಾಮೀಣ ಪ್ರತಿಭೆಗಳಿಗೆ ಉನ್ನತ ಶಿಕ್ಷಣ ಪಡೆಯಲು ಹಾಗೂ ಸ್ನಾತಕ ಪದವಿ ಪಡೆಯಲು ಕಾರಣೀಭೂತರಾಗಿದ್ದಾರೆ. ಕರ್ನಾಟಕ ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಮಕ್ಕಳಿಗೆ ಉತ್ತಮವಾದ ಮಾಹಿತಿ ನೀಡುವ ಪುಸ್ತಕಗಳನ್ನು ನೀಡಿದ್ದಾರೆ. ಅನೇಕ ವಿಚಾರ-ಗೋಷ್ಟಿಗಳನ್ನು ನಡೆಸುವ ಮೂಲಕ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ.
ಇಂತಹ ವ್ಯಕ್ತಿಯ ವಿರುದ್ಧ ಭರತನಗರಿ ಎಂಬ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆಂದು ಸುಳ್ಳು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ತಿನ ಸದಸ್ಯರಾದ ರವಿಕುಮಾರ್ ಮತ್ತು ಛಲವಾದಿ ನಾರಾಯಣಸ್ವಾಮಿಯವರು ಪೊಲೀಸ್ ಆಯುಕ್ತರಿಗೆ ದೂರು ನೀಡಿರುವದು ಹಾಸ್ಯಾಸ್ಪದ. ಈ ಸಂಬಂಧದ ಪ್ರೊ. ಬರಗೂರು ರಾಮಚಂದ್ರಪ್ಪನವರು ಕೂಡ ಪತ್ರಿಕೆಗಳಲ್ಲಿ ಸ್ವಷ್ಟನೆ ನೀಡಿದ್ದಾರೆ. ಆದ್ದರಿಂದ ಇವರ ವಿರುದ್ಧ ನೀಡಿರುವ ಬಿಜೆಪಿ ಮುಖಂಡರು ಕೊಟ್ಟಿರುವ ದೂರನ್ನು ರದ್ದುಗೊಳಿಸಬೇಕು ಎಂದರು.
ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ: ರಾಜ್ಯ ಕಾರ್ಯದರ್ಶಿ ಶೂಲಯ್ಯ ಮಾತನಾಡಿ ಪ್ರೊ.ಬರಗೂರು ರಾಮಚಂದ್ರಪ್ಪನವರು ನಮ್ಮ ನಾಡು ಕಂಡ ಪಡೆದ ಪ್ರಸಿದ್ಧ ಲೇಖಕರು. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ಪಾತ್ರರಾದವರು. ಜೊತೆಗೆ ತುಮಕೂರು ಜಿಲ್ಲೆಯನ್ನು ಸಾಹಿತ್ಯ ಮತ್ತು ಸಿನಿಮಾಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಇಂತಹ ಮೇರು ವ್ಯಕ್ತಿತ್ವವುಳ್ಳ ಪ್ರಜಾ ಪ್ರತಿಭೆಯ ಮೇಲೆ ಕೊಟ್ಟಿರುವ ದೂರಿನಲ್ಲಿ ಸತ್ಯಾಂಶವಿಲ್ಲ ಎಂದರು. ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾ ಸಮಿತಿ ಹಾಗೂ ಪದಾಧಿಕಾರಿಗಳು ಇದ್ದರು.
ಇತ್ತೀಚೆಗೆ ಬಿಡುಗಡೆಯಾದ ಬರಗೂರು ಅವರ ಸಮಗ್ರ ಸಾಹಿತ್ಯ ಸಂಪುಟಗಳಲ್ಲಿ ರಾಷ್ಟ್ರಗೀತೆ ದಾಟಿಯ ಗೀತೆಯನ್ನು ಕೈ ಬಿಟ್ಟಿದ್ದು, ಸ್ಪಷ್ಟನೆಯನ್ನು ನೀಡಿದ್ದಾರೆ. ಹೀಗಾಗಿ ಈಗ ದೂರು ಕೊಡುವುದು ಕಾನೂನಾತ್ಮಕವಾಗಿಯೂ, ನೈತಿಕವಾಗಿಯೂ ಸರಿಯಿಲ್ಲವೆಂಬುದು ನಮ್ಮ ಭಾವನೆಯಾಗಿದೆ. ಹೀಗಾಗಿ ಪೊಲೀಸರು ವಿವೇಚನೆ ಬಳಸಿ, ಸುಳ್ಳು ದೂರಿಗೆ ಬೆಲೆ ಕೊಡಬಾರದು.
-ದಾಸಪ್ಪ ವಕೀಲ
Tumakuru: ದೇಶದ ಸಮಗ್ರತೆಗಾಗಿ ಭಾರತ್ ಜೋಡೋ ಪಾದಯಾತ್ರೆ: ಮಾಜಿ ಶಾಸಕ ಷಡಕ್ಷರಿ
ಸಾಂಸ್ಕೃತಿಕ ರಾಯಭಾರಿ, ತಳ ಸಮುದಾಯಗಳ, ಬಡವರ, ದಲಿತರ, ಧ್ವನಿಯಾಗಿ ರಾಮಚಂದ್ರಪ್ಪನವರು ಇಡೀ ರಾಜ್ಯಾದ್ಯಂತ ಬಂಡಾಯ ಸಾಹಿತ್ಯ ಸಮ್ಮೇಳನಗಳನ್ನು ಮಾಡುವ ಮೂಲಕ ಅನೇಕ ಪ್ರಸ್ತುತ ಸಮಕಾಲೀನ ಸಮಸ್ಯೆಗಳ ಬಗ್ಗೆ ಸಾಮಾನ್ಯ ಜನರಿಗೆ ಸಮ್ಮೇಳನಗಳ ಜಾಗೃತಿ ಮೂಡಿಸುತ್ತಿದ್ದಾರೆ. ಇಂತಹ ವ್ಯಕ್ತಿಯ ವಿರುದ್ಧ ಬಿಜೆಪಿ ಮುಖಂಡರು ಸುಳ್ಳು ದೂರು ದಾಖಲಿಸಿರುವುದು ಖಂಡನೀಯ.
-ರಾಜಸಿಂಹ ಜಿಲ್ಲಾಧ್ಯಕ್ಷ, ಬಿಎಸ್‌ಪಿ