Asianet Suvarna News Asianet Suvarna News

ಮದ್ಯ ಖರೀದಿಗೂ ಅವಕಾಶ ಮಾಡಿಕೊಡಿ: ಸಿಎಂಗೆ ಬಾರ್‌ ಅಸೋಸಿಯೇಷನ್ ಮನವಿ

ಬಾರ್ ಅಸೋಸಿಯೇಷನ್ ಅಧ್ಯಕ್ಷರಿಂದ ಸಿಎಂ ಯಡಿಯೂರಪ್ಪ ಭೇಟಿ| ಕನಿಷ್ಠ ಒಂದು ತಿಂಗಳ ಸನ್ನದು ಶುಲ್ಕವನ್ನು  ಮುಂದಿನ ವರ್ಷದ ಸನ್ನದು ಶುಲ್ಕದೊಂದಿಗೆ ಹೊಂದಾಣಿಕೆ ಮಾಡಿಕೊಡಲು ಕೇಳಿದ್ದೇವೆ| 2020-21 ಸಾಲಿನ ಸನ್ನದು ಶುಲ್ಕವನ್ನು ಕಟ್ಟಲು ನಾಲ್ಕು ಕಂತುಗಳನ್ನು ನೀಡಲು ಕೇಳಿದ್ದೇವೆ| ವಿದ್ಯುತ್ ಬಿಲ್ ಪಾವತಿ / ರಿಯಾಯತಿ ಬಗ್ಗೆ ಕೆಪಿಟಿಸಿಎಲ್‌ ಗೆ ನಿರ್ದೇಶನ ನೀಡಲು ಮನವಿ|

Bar Association Met with CM B S Yediyurappa
Author
Bengaluru, First Published May 13, 2020, 11:48 AM IST

ಬೆಂಗಳೂರು(ಮೇ.13): ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಈಗಾಗಲೇ ನಮಗೆ 800 ರಿಂದ ಸಾವಿರ ಕೋಟಿ ರು.  ನಷ್ಟ ಉಂಟಾಗಿದೆ. ಸ್ಟಾಕ್ ಇರುವ ಮದ್ಯ ಸೇಲ್ ಮಾಡಲು ರಾಜ್ಯ ಸರ್ಕಾರ ಅವಕಾಶ ನೀಡಿದೆ. ಅದೇ ರೀತಿ ಮದ್ಯ ಖರೀದಿಗೂ ಅವಕಾಶ ಮಾಡಿಕೊಡುವಂತೆ ಕೇಳಿದ್ದೇವೆ. ಇದಕ್ಕೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾವ್ ರಾಜ್ ಹೆಗಡೆ ಹೇಳಿದ್ದಾರೆ. 

ಇಂದು(ಬುಧವಾರ) ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ. ಎಸ್‌.ಯಡಿಯೂರಪ್ಪ ಅವರನ್ನ ಭೇಟಿ ಮಾಡಿದ ಬಳಿಕ ಮಾಧ್ಯದಮವರ ಜೊತೆ ಮಾತನಾಡಿದ ಗೋವಿಂದರಾವ್ ರಾಜ್ ಅವರು,  ಕನಿಷ್ಠ ಒಂದು ತಿಂಗಳ ಸನ್ನದು ಶುಲ್ಕವನ್ನು  ಮುಂದಿನ ವರ್ಷದ ಸನ್ನದು ಶುಲ್ಕದೊಂದಿಗೆ ಹೊಂದಾಣಿಕೆ ಮಾಡಿಕೊಡಲು ಕೇಳಿದ್ದೇವೆ. 2020-21 ಸಾಲಿನ ಸನ್ನದು ಶುಲ್ಕವನ್ನು ಕಟ್ಟಲು ನಾಲ್ಕು ಕಂತುಗಳನ್ನು ನೀಡಲು ಕೇಳಿದ್ದೇವೆ. ವಿದ್ಯುತ್ ಬಿಲ್ ಪಾವತಿ / ರಿಯಾಯತಿ ಬಗ್ಗೆ ಕೆಪಿಟಿಸಿಎಲ್‌ ಗೆ ನಿರ್ದೇಶನ ನೀಡಲು ಮನವಿ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಆರ್ಥಿಕ ಪ್ಯಾಕೇಜ್: ಸಂಜೆ 4 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸುದ್ದಿಗೋಷ್ಠಿ!

ಬ್ಯಾಂಕ್ ಸಾಲದ ಕಂತು ಮತ್ತು ಬಡ್ಡಿ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಹೇಳಿದ್ದೇವೆ. ಆಸ್ತಿ ತೆರಿಗೆ ಕಟ್ಟಡ ತೆರಿಗೆಗಳಲ್ಲಿ ರಿಯಾಯಿತಿ ನೀಡಲು ಮನವಿ ಮಾಡಿಕೊಂಡಿದ್ದೇವೆ ಇದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios