ಪೊರಕೆ ಹಿಡಿದ ಬಂಟ್ವಾಳ ತಹಸೀಲ್ದಾರ್‌ ರಶ್ಮಿ

ಬಂಟ್ವಾಳದಲ್ಲಿ ಸ್ವತಃ ತಹಸೀಲ್ದಾರ್ ಪೊರಕೆ ಕೈಯಲ್ಲಿ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲಗೊಂಡಿದ್ದರು. ಈ ಮೂಲಕ ಎಲ್ಲರಿಗೂ ಮಾದರಿಯಾದರು. 

Bantwal Tahashildar Rashim Participated in Cleaning

ಬಂಟ್ವಾಳ [ಅ.03]: ಕೈಯಲ್ಲಿ ಸದಾ ಪೆನ್‌ ಹಿಡಿದುಕೊಂಡು ದಂಡಾಧಿಕಾರಿಯ ಖದರ್‌ನಲ್ಲಿ ಕಾಣಿಸಿಕೊಳ್ಳುವ ಬಂಟ್ವಾಳ ತಹಸೀಲ್ದಾರರ ಸ್ಟೈಲೇ  ಬದಲಾಗಿತ್ತು. 

ಗಾಂಧಿ ಜಯಂತಿಯ ದಿನ ಬೆಳ್ಳಂಬೆಳಗ್ಗೆ ಕೈಯಲ್ಲಿ ಪೊರಕೆ ಹಿಡಿದುಕೊಂಡು ಮಿನಿ ವಿಧಾನಸೌಧದಲ್ಲಿ ಕಾಣಿಸಿಕೊಂಡ ತಹಸೀಲ್ದಾರ್‌ ರಶ್ಮಿ ಎಸ್‌.ಆರ್‌. ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಅವರೊಂದಿಗೆ ತಾಲೂಕು ಕಚೇರಿಯ ಇತರ ಸಿಬ್ಬಂದಿಯೂ ಕೈ ಜೋಡಿಸಿದರು. ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿಸಿದ ತಹಸೀಲ್ದಾರರ ಕ್ರಿಯಾಶೀಲತೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಾಂಧಿ ಜಯಂತಿ ದಿನದ ಅಂಗವಾಗಿ ದೇಶದ ಎಲ್ಲೆಡೆ ಸ್ವಚ್ಛತಾ ಕಾರ್ಯ ನಡೆದಿದ್ದು, ಈ ವೇಳೆ ಹಲವು ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಬಂಟ್ವಾಳ ತಹಸೀಲ್ದಾರ್ ಕೂಡ ಸ್ವಚ್ಛತಾ ಆರ್ಯ ಮಾಡಿ ಮಾದರಿ ಎನಿಸಿಕೊಂಡರು.

Latest Videos
Follow Us:
Download App:
  • android
  • ios