Asianet Suvarna News Asianet Suvarna News

ಬೆಂಗಳೂರು: ಹಿಂದಿ ಬಾರದ ಕನ್ನಡ ಗ್ರಾಹಕರಿಗೆ ಬ್ಯಾಂಕ್‌ ಮ್ಯಾನೇಜರ್‌ ಧಮ್ಕಿ..!

ಮ್ಯಾನೇಜರ್‌ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕನ್ನಡ ಬಾರದ ಬ್ಯಾಂಕ್‌ ಸಿಬ್ಬಂದಿ ಉದ್ದಟತನ ವಿರುದ್ಧ ಗ್ರಾಹಕರ ಆಕ್ರೋಶ. 

Bank Manager Threatens Kannada Customers who do not know Hindi in Bengaluru grg
Author
First Published Apr 2, 2023, 10:48 AM IST

ನೆಲಮಂಗಲ(ಏ.02):  ನಗರದ ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅನ್ಯಭಾಷೆಯ ಬ್ಯಾಂಕ್‌ ಮ್ಯಾನೇಜರ್‌ ಹಿಂದಿ ಬಾರದ ಕನ್ನಡ ಗ್ರಾಹಕರಿಗೆ ಬ್ಯಾಂಕ್‌ನಲ್ಲಿ ವಹಿವಾಟಿನ ಸಮಸ್ಯೆ ಬಗೆಹರಿಸಲು ನೆರವಾಗುವುದು ಬಿಟ್ಟು ಹಿಂದಿಯಲ್ಲಿ ಉದ್ದಟತನದಿಂದ ಅವಾಜ್‌ ಹಾಕಿ ಹಿಂದಿಯನ್ನ ಕಲಿತು ಬ್ಯಾಂಕ್‌ಗೆ ಬಾ ಎಂದಿರುವ ಘಟನೆ ಸಾಮಾಜಿಕ ಜಾಲತಾಟದಲ್ಲಿ ವೈರಲ್‌ ಆಗಿದೆ. 

ರಾಷ್ಟ್ರೀಕೃತ ಬ್ಯಾಂಕುಗಳು ಅನ್ಯಭಾಷಿಗರನ್ನು ಬ್ಯಾಂಕ್‌ನ ಉನ್ನತ ಹುದ್ದೆಗಳಲ್ಲಿ ಕೂರಿಸುವುದರಿಂದ ಬ್ಯಾಂಕ್‌ನ ಕೆಳ ಹಂತದ ಸಿಬ್ಬಂದಿಗೆ ವಹಿವಾಟಿನ ಸಮಸ್ಯೆ ತಲೆದೋರಿದಾಗ ಮ್ಯಾನೇಜರ್‌ ಅವರನ್ನು ಸಂಪರ್ಕಿಸಲು ಹೇಳುತ್ತಾರೆ.

SBI ಗ್ರಾಹಕರೇ ಗಮನಿಸಿ; ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಹೀಗೆ ಮಾಡಿ

ಅನ್ಯಭಾಷಿಕರಾದ ಬ್ಯಾಂಕ್‌ ಮ್ಯಾನೇಜರ್‌ ಸ್ಥಳೀಯ ಭಾಷೆ ಕಲಿತು ಉತ್ತರಿಸಿ ಸಮಸ್ಯೆ ಬಗೆಹರಿಬೇಕು. ಅದನ್ನೆಲ್ಲಾ ಬಿಟ್ಟು ನಮಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಗ್ರಾಹಕರು ಹೇಳಿದರೆ ಕನ್ನಡಿಗರನ್ನು ಕೀಳಾಗಿ ಕಾಣುವ ಮೂಲಕ ಹಿಂದಿಯನ್ನ ಕಲಿತು ಬ್ಯಾಂಕ್‌ಗೆ ಬಾ ಎಂದು ಆವಾಜ್‌ ಹಾಕಿರುವ ಮ್ಯಾನೇಜರ್‌ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕನ್ನಡ ಬಾರದ ಬ್ಯಾಂಕ್‌ ಸಿಬ್ಬಂದಿ ಉದ್ದಟತನ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios