ಬೆಳಗಾವಿ[ಸೆ.21]: ಕೃಷಿ ಸಾಲಕ್ಕೆ ರೈತನೊಬ್ಬ ಅಡವಿಟ್ಟಿದ್ದ ಮಾಂಗಲ್ಯ ಸರವನ್ನು ಐಸಿಐಸಿಐ ಬ್ಯಾಂಕ್ ಸಿಬ್ಬಂದಿಗಳು ಮತ್ತೆ ಯಡವಟ್ಟು ಮಾಡಿಕೊಂಡಿರುವ ಘಟನೆ‌ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ.

ಬೈಲಹೊಂಗಲದ ಹರೀಶ್ ಮಿರಜಕರ್ ಎಂಬುವರು ಕೃಷಿ ಚಟುವಟಿಕೆಗಳಿಗೆ ಸಾಲವಾಗಿ 50 ಸಾವಿರ ಹಣ ಪಡೆಯಲು 2018 ನವೆಂಬರ್ 28ರಂದು ಪತ್ನಿಯ 48 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಐಸಿಐಸಿಐ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದಾರೆ. ಆದರೆ 10 ತಿಂಗಳವರೆಗೆ ಬಡ್ಡಿ ತುಂಬದಿದ್ದಕ್ಕೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಮಾಂಗಲ್ಯ ಸರವನ್ನು 1,23,000 ರೂ. ಮೊತ್ತಕ್ಕೆ ಹರಾಜು ಮಾಡಿದ್ದಾರೆ ಹಾಗೂ ಮಾರಾಟ ಮಾಡಿ ಉಳಿದ ಹಣವನ್ನು ಹರೀಶ್ ಮಿರಜಕರ್ ಅಕೌಂಟಗೆ ಜಮಾ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದೊಂದು ವಾರದಿಂದ ಹರೀಶ್ ತಂದೆ ತಾಯಿ ಸೊಸೆಯ ಮಾಂಗಲ್ಯ ಸರ ನೀಡಿ ಎಂದು ಬ್ಯಾಂಕ್ ಅಧಿಕಾರಿಗಳೆದುರು ಕಣ್ಣೀರಿಡುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಅಡವಿಟ್ಟ ಮಾಂಗಲ್ಯ ಸರ ಬಿಡಿಸಿಕ್ಕೊಳ್ಳಲು 6 ತಿಂಗಳ ಕಾಲಾವದಿ ಇತ್ತು, ಆದರೀಗ ಅಧಿಕಾರಿಗಳು ಅದನ್ನು ಹರಾಜು ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ನಾವೇನೂ ಮಾಡಲು ಸಾಧ್ಯವಿಲ್ಲ, ಅದನ್ನ ಮಾರಿಬಿಟ್ಟಿದ್ದೇವೆ ಎಂಬುವುದು ಬ್ಯಾಂಕ್‌ನವರು ನಿರ್ಲಕ್ಷ್ಯ ತೋರಿದ್ದಾರೆ.