ಬೆಂಗಳೂರು[ಮೇ.14]: ಬೆಂಗಳೂರು ವಿಶ್ವವಿದ್ಯಾಲಯವು ಬಿಕಾಂ., ಬಿಬಿಎಂ, ಬಿಬಿಎ ಕೋರ್ಸ್‌ಗಳ 6ನೇ ಸೆಮಿಸ್ಟರ್‌ ಪರೀಕ್ಷಾ ವೇಳಾಪಟ್ಟಿ ಪರಿಷ್ಕರಿಸಿದ್ದು, ಪರೀಕ್ಷೆಗಳು ಜೂ.10ರಿಂದ 21ರ ವರೆಗೆ ನಡೆಯಲಿದೆ.

ಈ ಹಿಂದೆ ನಿಗದಿಯಾಗಿದ್ದ ಮೇ 27ರಿಂದ ಜೂ.12ರ ವರೆಗಿನ ವೇಳಾಪಟ್ಟಿಸಮಯದಲ್ಲಿ ಲೆಕ್ಕಾಧಿಕಾರಿ (ಸಿಎ) ಪರೀಕ್ಷೆ ನಡೆಯುತ್ತಿರುವುದರಿಂದ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

ಹೊಸ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ವಿವಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ ಎಂದು ಬೆಂವಿವಿ ಮೌಲ್ಯಮಾಪನ ಕುಲಸಚಿವ ಡಾ. ಸಿ. ಶಿವರಾಜು ತಿಳಿಸಿದ್ದಾರೆ.