ಮಂಗಳೂರು(ಆ.07): ನಿರಂತರ ಮಳೆಯಿಂದ ಹೊಸ ಭೂಕುಸಿತ ಸಂಭವಿಸಿದ ಶಿರಿಬಾಗಿಲು- ಸಕಲೇಶಪುರ ನಡುವಿನ ಘಾಟಿ ಪ್ರದೇಶದ ರೈಲು ಮಾರ್ಗ ಮಂಗಳವಾರ ಸಾಯಂಕಾಲ ದುರಸ್ತಿ ಪೂರ್ಣಗೊಂಡು ಬೆಂಗಳೂರು ರಾತ್ರಿ ರೈಲು ಮಂಗಳೂರಿನಿಂದ ನಿಗದಿತ ಸಮಯಕ್ಕೆ ಹೊರಡಲು ನಿಶ್ಚಯಿಸಲಾಗಿದ್ದರೂ, ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದುಗೊಂಡಿತು.

ವರದಿ ಸಿದ್ದಪಡಿಸುವ ವೇಳೆಗೆ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದುಗೊಳಿಸಲು ನಿರ್ದಿಷ್ಟಕಾರಣ ತಿಳಿದುಬಂದಿಲ್ಲ. ‘ಹಿರಿಯ ಅಧಿಕಾರಿಗಳಿಂದ ಕ್ಲಿಯರೆನ್ಸ್‌ ದೊರೆತ್ತಿಲ್ಲ’ ಎಂದಷ್ಟೇ ಮಂಗಳೂರು ಸೆಂಟ್ರಲ್‌ ರೈಲ್ವೆ ನಿಲ್ದಾಣದಿಂದ ತಿಳಿದ ಮಾಹಿತಿ.

ಈ ಮಾರ್ಗದಲ್ಲಿ ಹಗಲು ರೈಲುಗಳು ಕೂಡ ಸಂಚಾರ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಕಾರವಾರ- ಯಶವಂತಪುರ ವಾರದಲ್ಲಿ ಮೂರು ದಿನ ಸಂಚರಿಸುವ ಎಕ್ಸ್‌ಪ್ರೆಸ್‌ ಹಗಲು ರೈಲು (ನಂ.16516) ಮಂಗಳವಾರ ಯಶವಂತಪುರದಿಂದ ಮಂಗಳೂರು ತನಕ ಮಾತ್ರ ಸಂಚರಿಸಿದೆ. ಯಶವಂತಪುರ- ಮಂಗಳೂರು ಜಂಕ್ಷನ್‌ ವಾರದಲ್ಲಿ ಮೂರು ದಿನ ಸಂಚರಿಸುವ ಗೋಮಟೇಶ್ವರ ಎಕ್ಸ್‌ಪ್ರೆಸ್‌(ನಂ.16575) ಹಾಸನ ಮತ್ತು ಮಂಗಳೂರು ನಡುವೆ ಸಂಚರಿಸಿಲ್ಲ.

3 ದಿನ 20 ಸೆಂ.ಮೀ.ಗಿಂತ ಹೆಚ್ಚು ಮಳೆ ನಿರೀಕ್ಷೆ: ಈ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌!

ತಿರುವನಂತಪುರ- ನಿಜಾಮುದ್ದೀನ್‌ ರಾಜಧಾನಿ ಎಕ್ಸ್‌ಪ್ರೆಸ್‌ 9.15 ನಿಮಿಷ ತಡವಾಗಿ ಸಂಚರಿಸಿದೆ. ಮಂಗಳೂರು- ಮುಂಬಯಿ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ (ನಂ.12620) ಮತ್ತು ಮಂಗಳೂರು ಜಂಕ್ಷನ್‌- ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌ (ನಂ.12134) ಎಂದಿನಂತೆ ಸಂಚರಿಸಿದೆ.

ಕರಾವಳಿ - ಮಲೆನಾಡಿನಲ್ಲಿ ಭಾರೀ ಮಳೆ