ಬೆಂಗಳೂರು-ಗೋವಾ ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ಎಲ್ಲೆಲ್ಲಿ..?
ಹೊಸ ರೈಲು ಯಶವಂತಪುರದಿಂದ ಸಂಜೆ 6.45ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 8.25ಕ್ಕೆ ಕಾರವಾರ ತಲುಪಲಿದೆ. ಅಲ್ಲಿಂದ 8.30ಕ್ಕೆ ಹೊರಟು 10.30ಕ್ಕೆ ವಾಸ್ಕೋ ತಲುಪಲಿದೆ. ರೈಲಿನ ವೇಳಾಪಟ್ಟಿ, ನಿಲುಗಡೆ ಸ್ಥಳದ ಸಂಪೂರ್ಣ ಮಾಹಿತಿ ಇಲ್ಲಿದೆ
ಮಂಗಳೂರು(ಮಾ.07): ಹೊಸ ರೈಲು ಯಶವಂತಪುರದಿಂದ ಸಂಜೆ 6.45ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 8.25ಕ್ಕೆ ಕಾರವಾರ ತಲುಪಲಿದೆ. ಅಲ್ಲಿಂದ 8.30ಕ್ಕೆ ಹೊರಟು 10.30ಕ್ಕೆ ವಾಸ್ಕೋ ತಲುಪಲಿದೆ.
ಅಲ್ಲಿಂದ ಅದೇ ರೈಲು ಸಂಜೆ 3.25ಕ್ಕೆ ಹೊರಟು 5.25ಕ್ಕೆ ಕಾರವಾರ ತಲುಪುವುದು. ಕಾರವಾರದಿಂದ ಸಂಜೆ 5.30ಕ್ಕೆ ಹೊರಟು ಮರುದಿನ ಬೆಳಗ್ಗೆ ಎಂಟು ಗಂಟೆಗೆ ಯಶವಂತಪುರ ತಲುಪಲಿದೆ. ಹಳೆ ರೈಲು ಬೆಂಗಳೂರು- ಕಾರವಾರ ನಡುವಿನ ಪ್ರಯಾಣದ ಅವಧಿ 17 ಗಂಟೆ ಇದ್ದು, ಹೊಸ ರೈಲು ಈ ಅಂತರವನ್ನು 14.25 ಗಂಟೆಯಲ್ಲಿ ತಲುಪಬಹುದು ಎನ್ನುವುದು ಇಲಾಖೆ ಅಧಿಕಾರಿಗಳ ನಿರೀಕ್ಷೆ.
ನಿಲುಗಡೆ:
ಹೊಸ ರೈಲಿಗೆ ಚಿಕ್ಕಬಾಣಾವರ, ಚೆನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಾಣಿಯೂರು, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲದಲ್ಲಿ ನಿಲುಗಡೆ ಇರಲಿದೆ.
ಹಳೆ ರೈಲು ಸಂಚಾರ ರದ್ದತಿಗೆ ವಿರೋಧ
ಬೆಂಗಳೂರು ಮತ್ತು ಕಾರವಾರ ನಡುವೆ ಇದ್ದ ಹಳೆ ರೈಲು ಸಂಚಾರ ರದ್ದುಗೊಳಿಸಿದ ರೈಲ್ವೆ ಇಲಾಖೆಯ ತೀರ್ಮಾನವನ್ನು ನಾವು ವಿರೋಧಿಸುತ್ತೇವೆ. ಹಳೆ ರೈಲು ಮೈಸೂರು ಮತ್ತು ಕಾರವಾರ ನಡುವಿನ ಪ್ರಯಾಣಕ್ಕೆ ತುಂಬಾ ಅನುಕೂಲವಿತ್ತು. ಮಂಗಳೂರು ನಗರದಿಂದ ಕಾರವಾರಕ್ಕೆ ಇದ್ದ ಒಂದು ಉತ್ತಮ ರೈಲು ಸಂಪರ್ಕ ಕೂಡ ಕಡಿದುಕೊಂಡಂತಾಗಿದೆ ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಂಘದ ಸಲಹೆಗಾರ ಅನಿಲ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
ಗೋವಾಗೆ ಹೋಗೋರಿಗೆ ಗುಡ್ ನ್ಯೂಸ್ : ಬೆಂಗಳೂರಿನಿಂದ ಡೈರೆಕ್ಟ್ ಟ್ರೈನ್
ಹಳೆ ರೈಲು ಸೇವೆ ರದ್ದುಪಡಿಸುವ ಮೂಲಕ ಕಾರವಾರ ಮತ್ತು ಮೈಸೂರು ರೈಲು ಸಂಪರ್ಕ ಕಡಿತಗೊಂಡಿದೆ. ಈ ರೈಲು ಮರು ಆರಂಭಿಸಬೇಕು ಎಂದು ಮೈಸೂರು ಗ್ರಾಹಕ ಪರಿಷತ್‌ನ ಯೋಗೇಂದ್ರ ಸ್ವಾಮಿ ಆಗ್ರಹಿಸಿದ್ದಾರೆ.