ಬೆಂ.ಗ್ರಾಮಾಂತರ(ಜು.19): ನಗರದ ಲಯನ್ಸ್‌ ಸಂಸ್ಥೆಯಲ್ಲಿ ನಡೆದ ನೇತ್ರ ಚಿಕಿತ್ಸಾ ಶಿಬಿರದ ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಕರೀಗೌಡರು ವೇದಿಕೆಯಲ್ಲಿ ಮಾತನಾಡಿದ ಕೂಡಲೇ ಇತರ ಕಾರ್ಯಕ್ರಮಕ್ಕಾಗಿ ಹೊರಡಬೇಕಾಗಿತ್ತು.

ಜಿಲ್ಲಾಧಿಕಾರಿಯವರ ಸನ್ಮಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಸಂಘಟಕರು ಡಿಸಿಯವರನ್ನು ಹಿಂಬಾಲಿಸಿ ಅವರು ಕಾರು ಹತ್ತುವ ಮುನ್ನವೇ ಸನ್ಮಾನ ಮಾಡಿದ್ದಾರೆ.

ಸಂಘದ ಸದಸ್ಯರಾದ ಸಿ. ಭಾಸ್ಕರ್‌, ವಿ. ಗೋಪಾಲ್‌, ಎಸ್‌. ರಮೇಶ್‌ಕುಮಾರ್‌ ಸನ್ಮಾನಕ್ಕಾಗಿ ಸಿದ್ಧಗೊಳಿಸಿದ್ದ ಸ್ಮರಣಿಕೆ, ಪೇಟ, ಶಾಲು, ಹಾರದೊಂದಿಗೆ ಹಿಂಬಾಲಿಸಿ ಜಿಲ್ಲಾಧಿಕಾರಿ ಕಾರು ಹತ್ತುವ ಮೊದಲೇ ರಸ್ತೆಯಲ್ಲೇ ನಿಲ್ಲಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸೊಸೈಟಿ ಕುಮಾರ್‌ ಹಾಗೂ ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ ಇದ್ದರು.

ಬೆಂಗಳೂರು ಜಿಲ್ಲಾಧಿಕಾರಿಗೆ ಜಾಮೀನು ನಿರಾಕರಣೆ : ಕಣ್ಣೀರಿಟ್ಟ ಡಿಸಿ