Ballari ಪಾಲಿಕೆಯ ಆಯುಕ್ತೆಯ ದಿಟ್ಟ ನಿರ್ಧಾರಕ್ಕೆ, ಅಧಿಕಾರಿಗಳಿಗೆ ನಡುಕ!

  • ಪಾಲಿಕೆಯ 60ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಗೆ ಶಿಪಾರಸ್ಸು.
  • ಒಂದೇ ಕಡೆ ಗೂಟ ಹೊಡೆದುಕೊಂಡು ಕೂತ ಪಾಲಿಕೆ ಅಧಿಕಾರಿಗಳಿಗೆ ತಳಮಳ.
  • ಪಾಲಿಕೆ ಆಯುಕ್ತರ ಕ್ರಮಕ್ಕೆ ಮಹಾನಗರ ಪಾಲಿಕೆ ಸದಸ್ಯರ ಬೆಂಬಲ
  • ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಶುರುವಾಗಿದೆ ಡವಡವ
ballari municipal corporation  Commissioner Preeti Gehlot Recommends for more than 60 officers transfer gow

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
  
ಬಳ್ಳಾರಿ (ಜೂ.14) : ಆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಈಗ ಇದೀಗ ಭಯ ಶುರುವಾಗಿದೆ. ಐದಾರು ವರ್ಷಗಳಿಂದ  ಆಯಕಟ್ಟಿನ ಸ್ಥಳದಲ್ಲಿ ಗೂಟ ಹೊಡೆದುಕೊಂಡ ಕೂಳಿತ ಅಧಿಕಾರಿಗಳಿಗೀಗ ತಳಮಳಗೊಂಡಿದ್ದಾರೆ.  ಕೆಲಸ ಮಾಡದೇ ಕೂತಲ್ಲೆ ಕೂತು ಟೈಂ ಪಾಸ್ ಮಾಡೋ ಅಧಿಕಾರಿಗಳಿಗೆ ಕೊನೆಗೂ ಬಿಸಿ ಮುಟ್ಟಿಸಲು ಪ್ಲಾನ್ ಮಾಡಲಾಗಿದೆ. ಹೌದು, ಭ್ರಷ್ಟ್ರಾಚಾರ ಮುಕ್ತ ಆಡಳಿತಕ್ಕಾಗಿ ಎಲ್ಲ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಎಂದು ಸ್ವತ: ಬಳ್ಳಾರಿ  ಪಾಲಿಕೆ ಆಯುಕ್ತರೇ ಸರ್ಕಾರಕ್ಕೆ ಪತ್ರ ಬರೆದಿರುವುದು ಪಾಲಿಕೆ ಅಧಿಕಾರಿಗಳ ಅತಂಕಕಕ್ಕೆ ಕಾರಣವಾಗಿದೆ.

ಪಾಲಿಕೆಯ 60ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಗೆ ಶಿಪಾರಸ್ಸು: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು ಕೆಲಸ ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ. ಇದರಿಂದ ಜನರಿಗೆ ಸಹಾಯ ಆಗ್ತದೆಯೋ ಇಲ್ಲವೋ ಕೂಡ ಗೊತ್ತಿಲ್ಲ. ಆದ್ರೇ, ಆಯಕಟ್ಟಿನ ಸ್ಥಳದಲ್ಲಿ 60ಕ್ಕೂ ಹೆಚ್ಚು ಸಿಬ್ಬಂದಿ ತಳವೂರಿ 5 ರಿಂದ 10 ವರ್ಷಗಳೆ ಕಳೆದಿವೆ. ಶಾಸಕರು-ಸಚಿವರ ಶಿಪಾರಸ್ಸಿನಿಂದ ಒಂದೇ ಸ್ಥಳದಲ್ಲಿ ಕಳೆದ ಹತ್ತಾರು ವರ್ಷಗಳಿಂದ 60ಕ್ಕೂ ಹೆಚ್ಚು ಸಿಬ್ಬಂದಿಗಳು- ಹಿರಿಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

HUBBALLI KIMS ಆಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಜೇಷ್ಠತಾ ಆಧಾರದ ಮೇಲೆ ಅಧಿಕಾರಿಗಳು ಮತ್ತು ಸಿಬ್ಬಂದಿ  ಪ್ರತಿ 3 ರಿಂದ4 ವರ್ಷಕ್ಕೊಮ್ಮೆ ವರ್ಗಾವಣೆ ಮಾಡಬೇಕು. ಆದ್ರೇ,  ಈ ಪಾಲಿಕೆಯ ಅಧಿಕಾರಿಗಳು ಮಾತ್ರ ವರ್ಗಾವಣೆಗೊಂಡಿಲ್ಲ. ಹೀಗಾಗಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ 60 ಕ್ಕೂ ಹೆಚ್ಚು ಸಿಬ್ಬಂದಿಗಳನ್ನ ಬೇರೆಡೆ ವರ್ಗಾವಣೆ ಮಾಡಿ ಎಂದು ಸ್ವತ: ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 5 ರಿಂದ 10 ವರ್ಷಗಳ ಅವಧಿಗೆ ಪಾಲಿಕೆಯ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ,ಬಿ,ಸಿ ವೃಂದದ ಅಧಿಕಾರಿಗಳನ್ನ ವರ್ಗಾವಣೆ ಮಾಡುವಂತೆ ಆಯುಕ್ತರು ಶಿಪಾರಸ್ಸು ಮಾಡಿರುವುದು ವಿಶೇಷವಾಗಿದೆ.
 
ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತೆಯಿಂದ ದಿಟ್ಟ ಕ್ರಮಕ್ಕೆ ಸದಸ್ಯರ ಸ್ವಾಗತ:
ಪಾಲಿಕೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಕಷ್ಟಸಾಧ್ಯವಾಗಿದೆ ಎನ್ನುವದು ಮೇಲ್ನೋಟಕ್ಕೆ ಇರೋ ಕಾರಣವಾಗಿದೆ. ಆದ್ರೇ, ಅಂತರೀಕ ವಿಚಾರನೇಂದ್ರೆ ಬಹುತೇಕ ಎಲ್ಲ ಸಿಬ್ಬಂದಿ ಶಾಸಕ ಸಚಿವರ ಹಿಂಬಾಲಕರೇ ಆಗಿದ್ದಾರೆ.  ತಮಗೆ ಬೇಕಾದ ಕೆಲಸ ಮಾತ್ರ ಮಾಡುತ್ತಿದ್ದಾರೆ ಮತ್ತು ಕಚೇರಿಯ ಅಂತರಿಕ ವಿಚಾರ ಬಹಿರಂಗ ಗೊಳಿಸುತ್ತಿರೋ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. 

ಕೋಟೆನಾಡಿಗೆ ಮೆಡಿಕಲ್ ಕಾಲೇಜ್ ಬಂದ್ರೆ 200 ವಿದ್ಯಾರ್ಥಿಗಳಷ್ಟೇ ಹೆಲ್ಪ್ ಆಗೋದು: ಮುರುಗ ಶರಣರು

ಇನ್ನು  ಪಾಲಿಕೆಯ ಆಯುಕ್ತರ ನಡೆಯಿಂದ ಅಧಿಕಾರಿಗಳು- ಸಿಬ್ಬಂದಿಗೆ ಡವ ಡವ ಶುರುವಾಗಿದ್ರೇ, ಆಯುಕ್ತರ ಈ ದಿಟ್ಟತನಕ್ಕೆ ಪಾಲಿಕೆ ಸದಸ್ಯರು ಸಹ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.  ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಗೆ ನಮ್ಮ ಬೆಂಬಲವಿದೆ. ಕೂಡಲೇ ಆಯುಕ್ತರ ಪತ್ರದ ಪ್ರಕಾರ ಸಿಬ್ಬಂದಿ  ಅಧಿಕಾರಿಗಳನ್ನ ವರ್ಗಾವಣೆ ಮಾಡಬೇಕು ಅಂತಿದ್ದಾರೆ ಪಾಲಿಕೆ ಸದಸ್ಯ ಗಾದೆಪ್ಪ ಸೇರಿದಂತೆ ಹಲವರು ಬೆಂಬಲಿಸಿದ್ದಾರೆ.
 
ಕ್ರಮಕ್ಕೆ ಮಂದಾಗ್ತದೆಯೇ ಸರ್ಕಾರ ?
ಬಳ್ಳಾರಿ ಪಾಲಿಕೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಹಲವು ವರ್ಷಗಳಿಂದ ಕತ್ಯವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಬೇರೆಡೆ ವರ್ಗಾವಣೆ  ಮಾಡುವಂತೆ ಆಯುಕ್ತರು ಪತ್ರ ಬರೆದಿರುವುದು ವಿಶೇಷವಾಗಿದೆ. ಆಯುಕ್ತರ ಪತ್ರದ ಪ್ರಕಾರ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಲು ಆದೇಶ ಮಾಡುತ್ತೋ. ಇಲ್ವೋ ಅಥವಾ  ಶಾಸಕರು-ಸಚಿವರ ಒತ್ತಡಕ್ಕೆ ಮಣಿದು ಭ್ರಷ್ಟ್ರ ಅಧಿಕಾರಿಗಳ ಬೆನ್ನಿಗೆ ನಿಲ್ಲುತ್ತೋ ಅನ್ನೋದು ಇದೀಗ ಕುತೂಹಲ ಮೂಡಿಸಿದೆ.

Latest Videos
Follow Us:
Download App:
  • android
  • ios