Asianet Suvarna News Asianet Suvarna News

ನಾನೇ ಮೂರು ಸಾವಿರ ಮಠದ ಉತ್ತರಾಧಿಕಾರಿ: ದಿಂಗಾಲೇಶ್ವರ ಸ್ವಾಮೀಜಿ

2009ರಿಂದ ಇಲ್ಲಿಯ ತನಕ ಮೂರು ಸಾವಿರ ಮಠದಲ್ಲಿ ನಡೆದ ಬೆಳವಣಿಗೆ ಬಗ್ಗೆ ಎಲ್ಲರೂ ಉತ್ತರಿಸಲಿ| ನನ್ನ ವಿರುದ್ಧ ಇಲ್ಲಸಲ್ಲದ, ಆರೋಪ ಮಾಡಿ ತೆಜೋವಧೆ ಮಾಡಲಾಗುತ್ತಿತ್ತು| ನಾನು ಉತ್ತರಾಧಿಕಾರಿ ಆಗಲು ಪ್ರಯತ್ನಿಸಿದೆ ಎಂದು ಬಿಂಬಿಸಿದ್ದರು| 

Bale Hosuru Dingaleshwara Swamiji Talks Over Murusavira Matha Successor
Author
Bengaluru, First Published Feb 16, 2020, 2:27 PM IST

ಹುಬ್ಬಳ್ಳಿ(ಫೆ.16): ನಾನೇ ಮೂರು ಸಾವಿರ ಮಠದ ಉತ್ತರಾಧಿಕಾರಿಯಾಗಿದ್ದೇನೆ. ಇದು ನನ್ನ ಸ್ಪಷ್ಟವಾದ ಹೇಳಿಕೆಯಾಗಿದೆ. ಎಲ್ಲರೂ ಸೇರಿಯೇ ನನ್ನನ್ನು ಮೂರು ಸಾವಿರ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಿದ್ದಾರೆ. ಮೂರು ಸಾವಿರ ಮಠದ ಉತ್ತರಾಧಿಕಾರಿ ಆಗುವಂತೆ ಮಠದ ಪ್ರಮುಖರೇ ನನಗೆ ಆಹ್ವಾನಿಸಿದ್ದರು. ಇದಕ್ಕೆ ಬಸವರಾಜ್ ಹೊರಟ್ಟಿ, ಮಜಗೂ ಸ್ವಾಮೀಜಿ, ಮೋಹನ ಲಿಂಬಿಕಾಯಿ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಯಿ, ಶಂಕರಣ್ಣ ಮುನವಳ್ಳಿ ಉತ್ತರಿಸಬೇಕು ಎಂದು ಬಾಲೆ ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. 

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ಸಾವಿರ ಮಠಕ್ಕೆ ನಾನು ಉತ್ತರಾಧಿಕಾರಿಯಾಗಲು ಬಂದಿದ್ದನಾ? ಅಥವಾ ಅವರೆ ಕರೆದಿದ್ರಾ? ಎಂಬುದು ಅವರೇ ಹೇಳಲಿ. 2009ರಿಂದ ಇಲ್ಲಿಯ ತನಕ ಮೂರು ಸಾವಿರ ಮಠದಲ್ಲಿ ನಡೆದ ಬೆಳವಣಿಗೆ ಬಗ್ಗೆ ಎಲ್ಲರೂ ಉತ್ತರಿಸಲಿ. ನನ್ನ ವಿರುದ್ಧ ಇಲ್ಲಸಲ್ಲದ, ಆರೋಪ ಮಾಡಿ ತೆಜೋವಧೆ ಮಾಡಲಾಗುತ್ತಿತ್ತು. ನಾನು ಉತ್ತರಾಧಿಕಾರಿ ಆಗಲು ಪ್ರಯತ್ನಿಸಿದೆ ಎಂದು ಬಿಂಬಿಸಿದ್ದರು. ಮೂರು ಸಾವಿರ ಮಠಕ್ಕೆ ನೀವು ಬರಬೇಕು ಎಂದು ಮನವೊಲಿಸಿದ್ದು ಹಾಲಿ ಪೀಠಾದೀಶ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾಲ್ಕೈದು ಗಂಟೆಗಳ ಕಾಲ ನಿರಂತರವಾಗಿ ಮನವೊಲಿಸಿ ನನಗೆ ಒತ್ತಡ ಹಾಕಿದ್ದರು. ನನ್ನನ್ನು ಉತ್ತರಾಧಿಕಾರಿ ಮಾಡಲು 52 ಪ್ರಮುಖರು ಸಹಿ ಹಾಕಿದ್ದಾರೆ, ಅವರೆಲ್ಲ ಬಂದು ಗುರಸಿದ್ದೇಶ್ವರ ಕತೃ ಗದ್ದುಗೆ ಮುಟ್ಟಿ ಸತ್ಯ ನುಡಿಯಲಿ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios