ಮಂಗಳೂರು(ಜು.22):  ಇಸ್ಲಾಮಿಕ್ ಕ್ಯಾಲೆಂಡರ್‌ನ ದುಲ್‍ಹಜ್ಜ್ ತಿಂಗಳ ಚಂದ್ರದರ್ಶನ  ಮಂಗಳವಾರ ರಾತ್ರಿ ಆಗಿದೆ. ಈ ಹಿನ್ನೆಲೆಯಲ್ಲಿ ದುಲ್‍ಹಜ್ಜ್ 10ರ ಈದುಲ್ ಅಝ್‍ಹಾ (ಬಕ್ರೀದ್ ಹಬ್ಬ)ವನ್ನು ಜು.31ರಂದು ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಘೋಷಿಸಿದ್ದಾರೆ ಎಂದು ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮ್ಮಾ ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಅವರು ತಿಳಿಸಿದ್ದಾರೆ.

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜು.31ರಂದು ಬಕ್ರೀದ್ ಹಬ್ಬವನ್ನು  ಆಚರಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಎಲ್ಲ ಮುಸ್ಲಿಂ ಬಾಂಧವರು ಅಂದೇ ಹಬ್ಬವನ್ನ ಸರಳವಾಗಿ ಮನೆಯಲ್ಲಿಯೇ ಆಚರಿಸಲು ಕೋರಿದ್ದಾರೆ. 

ಕುಟುಂಬಕ್ಕೆ ಕೊರೋನಾ ತಟ್ಟಿದರೂ ಧೃತಿಗೆಡಲಿಲ್ಲ: ಅನ್ನ, ಆಹಾರ ಕೊಟ್ಟು ನೆರವಾದ್ರು ಅಕ್ಕಪಕ್ಕದ ಜನ

ಈ ಬಾರಿ ಮಹಾಮಾರಿ ಕೊರೋನಾ ವೈರಸ್‌ ಭಯ ಇರುವುದರಿಂದ ಬಕ್ರೀದ್ ಹಬ್ಬವನ್ನ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಹಮ್ಮದ್ ಹನೀಫ್ ಅವರು ತಿಳಿಸಿದ್ದಾರೆ.