ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್ ಹಾಕುವಂತೆ ಬಜರಂಗದಳ ಒತ್ತಾಯ

ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆಗಮಿಸುತ್ತಿದೆ. ಅದರಲ್ಲೂ ಪಬ್, ಕ್ಲಬ್, ಹೋಟ್‌ಲ್‌ಗಳಲ್ಲಿ ಹೊಸ ವರ್ಷಾಚರಣೆಯ ಪಾರ್ಟಿಗಳ ಆಯೋಜನೆ ಜೋರಾಗಿ ಯುಕವರು ನಡೆಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇದೀಗ ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್ ಹಾಕುವಂತೆ ಬಜರಂಗದಳ ಒತ್ತಾಯ ಮಾಡಿದೆ. 

Bajrang Dal insists to break the New Year parties in Bengaluru gvd

ಬೆಂಗಳೂರು (ಡಿ.23): ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆಗಮಿಸುತ್ತಿದೆ. ಅದರಲ್ಲೂ ಪಬ್, ಕ್ಲಬ್, ಹೋಟ್‌ಲ್‌ಗಳಲ್ಲಿ ಹೊಸ ವರ್ಷಾಚರಣೆಯ ಪಾರ್ಟಿಗಳ ಆಯೋಜನೆ ಜೋರಾಗಿ ಯುಕವರು ನಡೆಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇದೀಗ ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್ ಹಾಕುವಂತೆ ಬಜರಂಗದಳ ಒತ್ತಾಯ ಮಾಡಿದೆ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ಇದಕ್ಕೆಲ್ಲಾ ಕಡಿವಾಣ ಹಾಕುವಂತೆ ಬಜರಂಗದಳದಿಂದ ಪೊಲೀಸ್ ಕಮಿಷನರ್‌ಗೆ ಮನವಿ ಪತ್ರವನ್ನು ನೀಡಿದ್ದೇವೆ ಎಂದು ಬಜರಂಗದಳದ ವಿಭಾಗ ಸಂಯೋಜಕ ಗೋವರ್ಧನ್ ತಿಳಿಸಿದ್ದಾರೆ. 

ಯುವಕರನ್ನ ಮಾದಕ ವಸ್ತು ವ್ಯಸನಿಯನ್ನಾಗಿಸುವ ಸಲುವಾಗಿ ಈ ಹೊಸವರ್ಷದ ಸಂಭ್ರಮಾಚರಣೆ ಮಾಡಲಾಗುತ್ತೆ‌. ಮಾದಕ ವಸ್ತಗಳ ಜಾಲದ ಮಾಫಿಯಾ ನಡೆಸೋಕೆ ಸಿದ್ಧತೆ ನಡೀತಿದೆ. ಮಾದಕ ವ್ಯಸನದಿಂದ ಯುವಕರು ಸಮಾಜಘಾತುಕ ಶಕ್ತಿಗಳಾಗಿ ಬದಲಾಗ್ತಾರೆ. ಪಬ್‌ಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಂಟ್ರಿಯನ್ನ ಕೊಡಲಾಗುತ್ತೆ. ಈ ವೇಳೆ ಹೆಣ್ಣುಮಕ್ಕಳಿಗೆ ಸಿಂಥೆಟಿಕ್ ಡ್ರಗ್ಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನ ನೀಡಿ ವ್ಯಸನಿಗಳನ್ನಾಗಿಸುವ ಹುನ್ನಾರ ನಡೀತಿದೆ‌. ಪಾಶ್ಚಿಮಾತ್ಯೀಕರಣವನ್ನ ಅಳವಡಿಸಿಕೊಳ್ಳುವ ಕೆಲಸ ಮಾಡಬಾರದು. ಸೆಲೆಬ್ರೇಷನ್ ಸಂದರ್ಭದಲ್ಲಿ ಡಿಜೆಗಳನ್ನ, ಪಟಾಕಿಗಳನ್ನ ಬಳಸ್ತಾರೆ. ಇದರಿಂದ ಶಬ್ಧ ಹಾಗೂ ವಾಯುಮಾಲಿನ್ಯವಾಗುತ್ತೆ. ಅದಕ್ಕಾಗಿ ಈ ಎಲ್ಲಾ ವಿಚಾರಕ್ಕೆ ಕಡಿವಾಣ ಹಾಕೋ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ನೀಡಿದ್ದೇವೆ ಎಂದು ಗೋವರ್ಧನ್ ಹೇಳಿದರು.

ನ್ಯೂ ಇಯರ್ ಸೆಲೆಬ್ರೇಷನ್‌ಗೆ ಕೊರೋನಾ ಆತಂಕ: ಬೆಂಗಳೂರಿನಲ್ಲಿ ಅಲರ್ಟ್

ಹೊಸ ವರ್ಷಾಚರಣೆಯಲ್ಲಿ ಮುಸ್ಲಿಂ ಯುವಕರಿಗೆ ಅವಕಾಶ ಬೇಡ: ಡಿ.31ರಂದು ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು, ನ್ಯೂ ಇಯರ್‌ ಪಾರ್ಟಿಗೆ ಮುಸ್ಲಿಂ ಯುವಕರು ಬರಬಾರದು ಎಂದು ಬಜರಂಗದಳ ಪೊಲೀಸ್‌ ಇಲಾಖೆಯನ್ನು ಆಗ್ರಹಿಸಿದೆ. ಮದ್ಯಪಾನ ಮಾಡಬಾರದು ಎಂಬ ನಿಯಮವಿದ್ದರೂ ಪಬ್‌ಗಳಿಗೆ ಮುಸ್ಲಿಂ ಯುವಕರು ಬರ್ತಾ ಇದ್ದಾರೆ. ಇದರ ಹಿಂದೆ ದುಷ್ಕೃತ್ಯದ ಸಂಚಿದೆ. ಹೀಗಾಗಿ ನ್ಯೂ ಇಯರ್‌ ನ ಎಲ್ಲ ಪಾರ್ಟಿ ಬಂದ್‌ ಮಾಡಬೇಕು ಎಂದು ಬಜರಂಗದಳ ಪೊಲೀಸ್‌ ಕಮಿಷನರ್‌ಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ.

ಹೊಸ ವರ್ಷದ ಹೆಸರಿನಲ್ಲಿ ಡಿ.31ರಂದು ಹಲವು ಹೋಟೆಲ್, ಪಬ್‌ಗಳು ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾನ ಪಾರ್ಟಿಗಳನ್ನು ಆಯೋಜನೆ ಮಾಡಿದ್ದು ನಮ್ಮ ಗಮನಕ್ಕೆ ಬಂದಿರುತ್ತದೆ. ಹೊಸ ವರ್ಷದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಪಾಶ್ಚಾತ್ಯ ಸಂಸ್ಕೃತಿಯಿಂದ ಕೂಡಿದ್ದು ಇದನ್ನು ಬಜರಂಗದಳ ತೀವ್ರವಾಗಿ ವಿರೋಧಿಸುತ್ತದೆ. ಈಗಾಗಲೇ ಲವ್‌ ಜಿಹಾದ್‌ ಹೆಸರಿನಲ್ಲಿ ಮುಗ್ಧ ಹೆಣ್ಣು ಮಕ್ಕಳನ್ನು ಮೋಸಗೊಳಿಸಿ ಅವರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತದೆ. 

ಕ್ರಿಸ್‌ಮಸ್, ನ್ಯೂ ಇಯರ್‌ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ

ಈಗಾಗಲೇ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೊಂದು ಯುವಕರು ಇಂತಹ ಕೃತ್ಯಗಳಲ್ಲಿ ಸಕ್ರೀಯರಾಗಿದ್ದು, ಡ್ರಗ್ಸ್‌ ಮಾಫಿಯಾ, ಸೆಸ್ಕ್‌ ಮಾಫಿಯಾದಂತಹ ಜಾಲಗಳು ಜಾಸ್ತಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಯಾವುದೇ ಹೋಟೆಲ್, ಪಬ್‌ಗಳಲ್ಲಿ ಹೊಸ ವರ್ಷದ ಪ್ರಯುಕ್ತ ನಡೆಯುವ ಪಾರ್ಟಿ, ಅಶ್ಲೀಲ ನೃತ್ಯಗಳಿಗೆ ಅನುಮತಿ ನೀಡಬಾರದು ಮತ್ತು ಎಲ್ಲ ಬಾರ್‌, ಪಬ್‌ ಮತ್ತು ಹೋಟೆಲ್‌ಗಳನ್ನು ನಿಗದಿತ ಸಮಯದ ಒಳಗೆ ಮುಚ್ಚಿಸಲು ಕ್ರಮಕೈಗೊಳ್ಳಬೇಕೆಂದು ಪೊಲೀಸ್‌ ಕಮಿಷನರ್‌ಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.

Latest Videos
Follow Us:
Download App:
  • android
  • ios