800 ವರ್ಷಗಳ ಇತಿಹಾಸ ಹೊಂದಿರೋ ಶ್ರೀಈಶ್ವರ ದೇಗುಲ ಬ್ರಹ್ಮಕಲಶೋತ್ಸವ

800 ವರ್ಷಗಳ ಇತಿಹಾಸ ಹೊಂದಿರೋ ಶ್ರೀಈಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಫೆಬ್ರವರಿ 12 ರಿಂದ ಎಂಟು ದಿನಗಳ ಕಾಲ ನಡೆಯಲಿದೆ.

Baindur Taluk Sri Eshwar temple utsav held from Feb 12 to 20 rbj

ಉಡುಪಿ, (ಫೆ.03): ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಬೈಂದೂರು ತಾಲೂಕಿನ ಉಪ್ಪುಂದ ಸಮೀಪದ ಮಡಿಕಲ್ ಸಮುದ್ರ ತೀರದಲ್ಲಿರುವ ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ಆಗಿದೆ.

 ನೂತನ ಶಿಲಾ ದೇಗುಲ ಲೋಕಾರ್ಪಣೆ, ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಫೆಬ್ರವರಿ 12 ರಿಂದ ಆರಂಭಗೊಂಡು ಫೆಬ್ರವರಿ 20 ರ ತನಕ ನಡೆಯಲಿದೆ.

ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯಾ ಅಧ್ಯಕ್ಷರು ರತನ್ ರಾಜ್ ಎನ್. ಖಾರ್ವಿ , ಕಾರ್ಯದರ್ಶಿ ಪ್ರಸನ್ನ ಕುಮಾರ್ , ಹಾಗೂ ರತ್ನಾಕರ ಖಾರ್ವಿ, ಮಾಜಿ ಅಧ್ಯಕ್ಷರು ನವೀನ್ ಚಂದ್ರ ಉಪ್ಪುಂದ ಮಾಹಿತಿ ನೀಡಿದ್ದಾರೆ. 

17 ರಂದು ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಅಂಬಿಗರ ಚೌಡಯ್ಯ ಸ್ವಾಮೀಜಿಯವರು ಮತ್ತು 20 ರಂದು ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಘವೇಶ್ವರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಇರಲಿದೆ. 

ಅಂದು ಸಂಜೆ 5 ಗಂಟೆಗೆ ದೇವರ ಉತ್ಸವ ಮೂರ್ತಿ‌ ಪುರ ಮೆರವಣಿಗೆ ನಡೆಯಲಿದೆ. 8 ದಿನಗಳ ಕಾಲ ಸಮುದ್ರ ತೀರದಲ್ಲಿ‌ ತೆರೆದ ವೇದಿಕೆಯಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ಹಾಗೂ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿಗಳು ನಡೆಯಲಿದೆ. ನಿತ್ಯ ಮಧ್ಯಾಹ್ನ, ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.

Latest Videos
Follow Us:
Download App:
  • android
  • ios