ಬೈಲಹೊಂಗಲ(ಆ.01):  ಕೋವಿಡ್‌- 19 ಸೋಂಕಿಗೆ ಒಳಗಾಗಿದ್ದ ಬೈಲಹೊಂಗಲ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಮಹಾಂತೇಶ ಕೌಜಲಗಿ ಗುಣಮುಖರಾಗಿದ್ದು ಅವರ ಮರು ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್‌.ಎಸ್‌.ಸಿದ್ದನ್ನವರ ಹೇಳಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ವೈದ್ಯಾಧಿಕಾರಿ ಡಾ.ಸಿದ್ದನ್ನವರ, ಶಾಸಕರ ಸಂಪರ್ಕದ ಅಧಿಕಾರಿಗಳ, ಕುಟುಂಬಸ್ಥರ, ಸಾರ್ವಜನಿಕರ ವರದಿಗಳು ನೆಗೆಟಿವ್‌ ಬಂದಿವೆ ಎಂದರು.

ಬೆಳಗಾವಿ: ಕಾಂಗ್ರೆಸ್‌ ಶಾಸಕನಿಗೆ ಅಂಟಿದ ಕೊರೋನಾ ಸೋಂಕು, ಹೆಚ್ಚಿದ ಆತಂಕ..!

ಇದರ ನಡುವೆ ಶಾಸಕರು ಸಹ ನಾನು ಗುಣಮುಖನಾಗಿದ್ದೇನೆ. ಯಾರು ಆತಂಕ ಪಡಬೇಕಾಗಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮತಕ್ಷೇತ್ರದ ಜನತೆಗೆ ಸಂದೇಶ ನೀಡಿದ್ದಾರೆ. ಶುಕ್ರವಾರ ಪಟ್ಟಣದ ಎಂ.ಜಿ. ಹೌಸಿಂಗ್‌ ಕಾಲೋನಿಯ, ನೀಲಗಾರ ಗಲ್ಲಿಯ ಓರ್ವನಿಗೆ ಸೊಂಕು ದೃಢಪಟ್ಟಿದ್ದು, ದೊಡವಾಡ 2, ಖೋದಾನಪೂರ 1, ಕಿತ್ತೂರ 1 ಸೇರಿ 6 ಪ್ರಕರಣಗಳು ದಾಖಲಾಗಿವೆ.