ದಾವಣಗೆರೆ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಒತ್ತಾಯ, ಪ್ರತಿಭಟನೆ
ದಾವಣಗೆರೆ ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಹಾಗೂ ಫಾರಂ ನಂ. 53 ರಲ್ಲಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ವರದಿ; ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಫೆ.20): ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಹಾಗೂ ಫಾರಂ ನಂ. 53 ರಲ್ಲಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ದಾವಣಗೆರೆಯಲ್ಲಿ ಸುಮಾರು 70-80 ವರ್ಷಗಳಿಂದ ಭೂಹೀನ ಮತ್ತು ಬಡ ಕೃಷಿಕಾರ್ಮಿಕರು ಕಂದಾಯ ಅರಣ್ಯದ ಕುರುಚಲುಗಿಡ, ಕಲ್ಲು ಭೂಮಿ ಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಹಾಗೂ ಮಾಡುತ್ತಿದ್ದಾರೆ. ಬಹುಪಾಲು ರೈತರಿಗೆ ಇದರಿಂದ ಬರುವ ಅಲ್ಪಸ್ವಲ್ಪ ವರಮಾನವೇ ಜೀವನಾಧಾರವಾಗಿದೆ. ಬದುಕಲು ಬೇರೆದಾರಿ ಕಾಣದೆ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಹಲವು ದಶಕಗಳಿಂದಲೂ ಕಂದಾಯ ಹಾಗೂ ಅರಣ್ಯದಂಚಿನ ಜಮೀನಿನಲ್ಲಿ ರಾಜ್ಯದಾದ್ಯಂತ ಸಾಗುವಳಿ ಮಾಡುತ್ತಿರುವುದು ಸರ್ಕಾರದಗಮನದಲ್ಲಿದೆ.
ಏರೋ ಇಂಡಿಯಾದಲ್ಲಿ ಗಮನಸೆಳೆದ ಬೆಳೆ ರೋಗ ಪತ್ತೆ ಮಾಡಿ ಔಷಧಿ ಸಿಂಪಡಿಸುವ ಕಿಸಾನ್ ಡ್ರೋನ್
ಆದರೆ, ಸದರಿ ಸರ್ಕಾರಗಳು ಇಲ್ಲಿಯವರೆವಿಗೂ ಉಳುಮೆಗೆ ಅವಕಾಶ ಕೊಟ್ಟಿದ್ದರು ಸಾಗುವಳಿದಾರರಿಗೆ ಹಕ್ಕುಪತ್ರವನ್ನು ನೀಡಲು ಅವಶ್ಯಕ ಕ್ರಮಕೈಗೊಂಡಿಲ್ಲ. ಶಾಸನಬದ್ಧವಾಗಿ ಭೂಮಿಯ ಹಕ್ಕು ದೊರೆಯದ ಇರುವುದರಿಂದ ಸಾಗುವಳಿದಾರರು ಸಮಾಜದಲ್ಲಿನ ಇತರ ಜನರಂತೆ ನಿಶ್ಚಿತ ಬದುಕು ರೂಪಿಸಿಕೊಳ್ಳಲಾಗದೆ ದಶಕಗಳಿಂದ ತೀವ್ರ ಮಾನಸಿಕ ತೋಳಲಾಟದಲ್ಲಿದ್ದ ಜರ್ಜರಿತರಾಗಿದ್ದಾರೆ.
ನಿವೇಶನ ಹಂಚಿಕೆ ಹೆಸರಲ್ಲಿ ಭೂಮಿ ಕಸಿಯುವ ಯತ್ನ: ಶಾಸಕ ಶರತ್ ಬಚ್ಚೇಗೌಡ
ಇಲ್ಲಿಯವರೆಗೆ ಬಗರ್ ಹುಕುಂ ಸಾಗುವಳಿದಾರರ 12 ಲಕ್ಷ ಅರ್ಜಿಗಳು ಸರ್ಕಾರದ ಮುಂದೆ ಇದ್ದರು ಅವರುಗಳಿಗೆ ಹಕ್ಕುಪತ್ರಕೊಟ್ಟಿಲ್ಲ. ಇನ್ನೂ ಲಕ್ಷಾಂತರ ಭೂ ಹೀನ ಹಾಗೂ ಬಡರೈತ ಕೃಷಿಕಾರ್ಮಿಕರು ಹಕ್ಕುಪತ್ರ ಪಡೆಯಲು ಅರ್ಜಿ ಹಾಕಬೇಕೆಂದು ಕಾಯುತ್ತಿದ್ದರೂ ಸರ್ಕಾರ ಸೂಕ್ತ ತೀರ್ಮಾನತೆಗೆದು ಕೊಳ್ಳದ ಪರಿಣಾಮವಾಗಿ, ಬಗರ್ ಸಾಗುವಳಿದಾರರು ಮತ್ತಷ್ಟು ಆತಂಕದಿಂದಜೀವನ ಸಾಗಿಸುವಂತಾಗಿದೆ. ಬಗರ್ ಹುಕುಂ ಸಾಗುವಳಿದಾರರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ಕಿರುಕುಳಗಳ ನಿಲ್ಲಿಸಬೇಕು ಎಂದರು.