ಮಹಾರಾಷ್ಟ್ರದ ಜತ್ತ ಬಳಿ ಬಾಗಲಕೋಟೆ ಕ್ರೂಸರ್ ಭೀಕರ ಅಪಘಾತ; ಮದುವೆಗೆ ಹೊರಟಿದ್ದ ನಾಲ್ವರು ಮಸಣ ಸೇರಿದರು
ಬಾಗಲಕೋಟೆಯಿಂದ ಮಹಾರಾಷ್ಟ್ರಕ್ಕೆ ಮದುವೆಗೆ ಹೋಗಿದ್ದ ಕ್ರೂಸರ್ ವಾಹನ ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತಕ್ಕೀಡಾಗಿದ್ದು, ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದಂತೆ 10 ಜನರಿಗೆ ಗಂಭೀರ ಗಾಯವಾಗಿದೆ.
ಬಾಗಲಕೋಟೆ (ಏ.18) ಮಹಾರಾಷ್ಟ್ರದಲ್ಲಿರುವ ನೆಂಟರಿಷ್ಟರ ಮದುವೆಗೆ ಜಮಖಂಡಿಯಿಂದ ಹೋಗಿದ್ದ ಕ್ರೂಷರ್ ಖಾಸಗಿ ಸ್ಲೀಪರ್ ಕೋಚ್ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಮೂವರು ಯುವತಿಯರು, ಓರ್ವ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಜೊತೆಗೆ, 10 ಮಂದಿಗೆ ಗಂಭೀರ ಗಾಯಗಳಾಗಿವೆ.
ಭೀಕರ ರಸ್ತೆ ಅಪಘಾತವು ಮಹಾರಾಷ್ಟ್ರದ ಜತ್ತ ಬಳಿ ಗುರುವಾರ ಬೆಳಗಿನ ಜಾವ ನಡೆದಿದೆ. ಹೆದ್ದಾರಿಯಲ್ಲಿ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ಗೆ ಕ್ರೂಸರ್ ವಾಹನ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಬಾಗಲಕೋಟೆ ಮೂಲದ ಮೂವರು ಯುವತಿಯರು ಹಾಗೂ ವಿಜಯಪುರ ಜಿಲ್ಲೆಯ ಒಬ್ಬ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಜೊತೆಗೆ, ವಾಹನದಲ್ಲಿದ್ದ ಇತರೆ 10 ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಹಾರಾಷ್ಟ್ರದ ಮೀರಜ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್, ರಾಜ ವಂಶದ ಕುಡಿಯಲ್ಲ; ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಟೀಕೆ
ಇನ್ನು ಕ್ರೂಸರ್ ವಾಹನವು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಮಹಾರಾಷ್ಟ್ರದಲ್ಲಿರುವ ನೆಂಟರಿಷ್ಟರ ಮದುವೆಗೆ ರಾತ್ರಿ ವೇಳೆ ಹೊರಟಿತ್ತು. ಆದರೆ, ಮುದವೆ ಮನೆಗೆ ಸೇರಬೇಕಿದ್ದವರು, ಮಸಣ ಸೇರಿದ್ದಾರೆ. ಮೃತರನ್ನು ಜಮಖಂಡಿ ತಾಲ್ಲೂಕಿನ ರೆಹಮತ್ಪೂರ ಗ್ರಾಮದ ಭಾಗ್ಯಶ್ರೀ ಅಂಬೇಕರ್ (17), ಅಡಿಹುಡಿ ಗ್ರಾಮದ ಉಜ್ವಲಾ ಶಿಂಧೆ (21), ಲೋಕಾಪುರ ನಿವೇದಿತಾ (20) ಹಾಗೂ ವಿಜಯಪುರ ಜಿಲ್ಲೆ ಕಣಮಡಿ ಗ್ರಾಮದ ಅನುಸೂಯಾ ಎಂದು ಗುರುತಿಸಲಾಗಿದೆ.
ಬೆಂಗಳೂರಿಂದ-ಸಂಡೂರಿಗೆ ಹೊರಡಬೇಕಿದ್ದ ಎಸ್‌ಆರ್‌ಜೆ ಸ್ಲೀಪರ್ ಬಸ್ ಮೆಜೆಸ್ಟಿಕ್‌ನಲ್ಲೇ ಬೆಂಕಿಗಾಹುತಿ! ಬೆಂಗಳೂರು (ಏ.18): ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಸಂಡೂರಿಗೆ ಹೊರಡಲು ನಿಂತಿದ್ದ ಎಸ್‌ಆರ್‌ಜೆ ಕಂಪನಿಯ ಖಾಸಗಿ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಇಡೀ ಬಸ್ ಧಗಧಹಿಸಿ ಉರಿದು ಹೋಗಿದೆ. ಇನ್ನು ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ.
ತಮಿಳನಾಡಲ್ಲಿ ಭೀಕರ ರಸ್ತೆ ಅಪಘಾತ: ವಿಜಯಪುರ IRB ಪೊಲೀಸ್ ಸೇರಿ ಮೂವರು ಸ್ಥಳದಲ್ಲೇ ಸಾವು!
ಹೌದು, ಬೆಂಗಳೂರಿನಿಂದ ಪ್ರತಿನಿತ್ಯ ರಾತ್ರಿ 9 ಗಂಟೆಗೆ ಸಂಡೂರಿಗೆ ಪ್ರಯಾಣಿಕರನ್ನು ಹೊತ್ತೊಯ್ಯುವ ಎಸ್‌ಆರ್‌ಜೆ ಕಂಪನಿಯ ಖಾಸಗಿ ಬಸ್ ಮೆಜೆಸ್ಟಿಕ್ ನಿಲ್ದಾಣದ ಬಳಿ ಹೊತ್ತಿ ಉರಿದಿದೆ. ಈ ಬಸ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಸುಮಾರು 20 ನಿಮಿಷಗಳ ಕಾಲ ಬಸ್ ಬೆಂಕಿಯ ಉಂಡೆಯಂತೆ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಇಡೀ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಬಸ್‌ನ ಬಹುತೇಕ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಟೈರ್ ಸ್ಪೋಟ ಆಗುವುದನ್ನು ಅಗ್ನಿ ಶಾಮಕ ಸಿಬ್ಬಂದಿ ತಪ್ಪಿಸಿದ್ದಾರೆ.