Asianet Suvarna News Asianet Suvarna News

ಲಾಕ್‌ಡೌನ್‌: 'ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆ'

ವಿಲೇವಾರಿ ಬಾಕಿ ಉಳಿದಿರುವ 5141 ಬಿಪಿಎಲ್‌ ಕಾರ್ಡ್‌ ಅರ್ಜಿದಾರರಿಗೆ ಉಚಿತ 10 ಕೆಜಿ ಅಕ್ಕಿ ವಿತರಣೆ| ಏಪ್ರಿಲ್ ತಿಂಗಳಿಂದ ಮೂರು ತಿಂಗಳ ಅವಧಿಗೆ  ಪ್ರತಿ ತಿಂಗಳು ನೀಡಲಾಗುತ್ತದೆ: ಡಿಸಿ ಡಾ. ಕೆ . ರಾಜೇಂದ್ರ| ಅರ್ಜಿದಾರರು ಅರ್ಜಿ ಹಾಕಿದ ನಕಲು ಪ್ರತಿಯನ್ನು ನ್ಯಾಯಬೆಲೆ ಅಂಗಡಿಗೆ ನೀಡಿ ಆಹಾರಧಾನ್ಯ ಪಡೆಯುವಂತೆ ಡಿಸಿ ಆದೇಶ|
 
Bagalkot DC K Rajendra Talks Over Free Ration BPL Card Holders
Author
Bengaluru, First Published Apr 13, 2020, 10:17 AM IST
ಬಾಗಲಕೋಟೆ(ಏ.13): ಸರ್ಕಾರದ ಆದೇಶದನ್ವಯ ಜಿಲ್ಲೆಯಲ್ಲಿ ವಿಲೇವಾರಿ ಬಾಕಿ ಉಳಿದಿರುವ 5141 ಬಿಪಿಎಲ್‌ ಕಾರ್ಡ್‌ ಅರ್ಜಿದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ಏಪ್ರಿಲ್ ತಿಂಗಳಿಂದ ಮೂರು ತಿಂಗಳ ಅವಧಿಗೆ  ಪ್ರತಿ ತಿಂಗಳು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ. ಕೆ . ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಆಹಾರಧಾನ್ಯ ಪಡೆಯಲು ಇಚ್ಛೆಯನ್ನು ವ್ಯಕ್ತಪಡಿಸಿದ 76 ಎಪಿಎಲ್‌ ಅರ್ಜಿಗಳ ಅರ್ಜಿದಾರರಿಗೂ ಸಹಾಯಧನ  ದರ ಪ್ರತಿ ಕೆಜಿಗೆ 15 ರು. ದರದಲ್ಲಿ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

'ಕುಡುಕರು ಮನುಷ್ಯರಲ್ವಾ?: ಮದ್ಯ ಮಾರಾಟ ಆರಂಭಿಸಿದ್ರೆ ತಪ್ಪೇನಿಲ್ಲ'

ಅರ್ಜಿದಾರರು ಅರ್ಜಿ ಹಾಕಿದ ನಕಲು ಪ್ರತಿಯನ್ನು ನ್ಯಾಯಬೆಲೆ ಅಂಗಡಿಗೆ ನೀಡಿ ಆಹಾರಧಾನ್ಯ ಪಡೆಯುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
 
Follow Us:
Download App:
  • android
  • ios