'ಕುಡುಕರು ಮನುಷ್ಯರಲ್ವಾ?: ಮದ್ಯ ಮಾರಾಟ ಆರಂಭಿಸಿದ್ರೆ ತಪ್ಪೇನಿಲ್ಲ'

ಸಾರಾಯಿ ಮಾರಾಟ ಆರಂಭಿಸಿದರೆ ತಪ್ಪೇನಿಲ್ಲ: ಮಾಜಿ ಸಚಿವ ತಿಮ್ಮಾಪುರ| ಕುಡುಕರನ್ನು ಬದುಕಿಸುವ ಕಡೆ ಸರ್ಕಾರ ಗಮನ ಹರಿಸಬೇಕಿದೆ| ಇಂತಹ ಸಾವುಗಳನ್ನು ತಪ್ಪಿಸಲು ಸಾರಾಯಿ ಆರಂಭಿಸಿದರೆ ಸಾರಾಯಿ ಆರಂಭಿಸಿದರೆ ಒಳ್ಳೆಯದು|
Former Minister R B  Timmapur Talks Over Liquor sales
ಬಾಗಲಕೋಟೆ(ಏ.13):ರಾಜ್ಯದಲ್ಲಿ ಕೊರೋನಾದಿಂದ 6 ಜನ ಮೃತ ಪಟ್ಟಿದ್ದರೆ ಸಾರಾಯಿ ಬಂದ್‌ ಆಗಿರುವುದಕ್ಕೆ 28 ಜನ ಸತ್ತಿದ್ದಾರೆ. ಅವರು ಸಹ ಜೀವಗಳೇ, ಸಾರಾಯಿಗೆ ಅಂಟಿಕೊಂಡವರು ಮನೋರೋಗಿಗಳಾಗುತ್ತಿದ್ದಾರೆ. ಅವರನ್ನು ಬದುಕಿಸುವ ಕಡೆ ಸರ್ಕಾರ ಗಮನ ಹರಿಸಬೇಕಿದೆ. ಇಂತಹ ಸಾವುಗಳನ್ನು ತಪ್ಪಿಸಲು ಸಾರಾಯಿ ಆರಂಭಿಸಿದರೆ ಒಳ್ಳೆಯದು ಎಂದು ಮಾಜಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಸಲಹೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಲಾಕ್‌ಡೌನ್‌ ನಂತರ ಸರ್ಕಾರ ಸಾರಾಯಿ ಮಾರಾಟವನ್ನು ಬಂದ್‌ ಮಾಡಿದೆ ನಿಜ, ಹಾಗಂತ ರಾಜ್ಯದಲ್ಲಿ ಸಾರಾಯಿ ಮಾರಾಟ ನಿಂತಿಲ್ಲ. ಹೆಚ್ಚಿನ ಬೆಲೆಯಲ್ಲಿ ಸಾರಾಯಿ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. 

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಇನ್ನೊಂದೆಡೆ ಕಳ್ಳಭಟ್ಟಿ ಸಾರಾಯಿ ಎಗ್ಗಿಲ್ಲದೆ ಮಾರಾಟ ವಾಗುತ್ತಿದೆ. ಹಾಗಾದರೆ ಸರ್ಕಾರದ ಬಂದ್‌ ನಿರ್ಧಾರಕ್ಕೆ ಅರ್ಥವೇನು? ಅದಕ್ಕೆ ನನ್ನ ಅಭಿಪ್ರಾಯದ ಪ್ರಕಾರ ಸಾರಾಯಿ ಮಾರಾಟವನ್ನು ಆರಂಭಿಸಿದರೆ ತಪ್ಪೆನಿಲ್ಲಾ ಎಂದಿದ್ದಾರೆ. ಸಂಪೂರ್ಣವಾಗಿ ಸಾರಾಯಿ ನಿಷೇಧ ಮಾಡಿದ್ದರೆ ಸಂತೋಷವಿತ್ತು ಎಂದು ಸಹ ಇದೆ ಸಂದರ್ಭದಲ್ಲಿ ಮಾಜಿ ಅಬಕಾರಿ ಸಚಿವರು ಹೇಳಿದ್ದಾರೆ.
 
Latest Videos
Follow Us:
Download App:
  • android
  • ios