ಶಾಲೆಯಲ್ಲಿದ್ದ 22 ಸಂತ್ರಸ್ತ ಕುಟುಂಬ ತೆರವುಗೊಳಿಸಿದ ಡಿಸಿ

ಹುನಗುಂದ ತಾಲೂಕಿನ ಧನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಾಸವಾಗಿದ್ದ 22 ಸಂತ್ರಸ್ತ ಕುಟುಂಬಗಳನ್ನು ತೆರವುಗೊಳಿಸಿದ ಡಿಸಿ| ಶಾಲೆಯಲ್ಲಿ ನೆರೆ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ| ಸಂತ್ರಸ್ತ ಕುಟುಂಬಗಳನ್ನು ತೆರವುಗೊಳಿಸುವಂತೆ ಶಿಕ್ಷಣ ಸಚಿವ ಸುರೇಶಕುಮಾರ ಹುನಗುಂದ  ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದ್ದರು| 

Bagalkot DC Clearances 22 Families Stay in School

ಹುನಗುಂದ:(ಸೆ.25)  ತಾಲೂಕಿನ ಧನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವಾಸವಾಗಿದ್ದ 22 ಸಂತ್ರಸ್ತ ಕುಟುಂಬಗಳನ್ನು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು ಮಂಗಳವಾರ ತಾವೇ ಮುಂದೆ ನಿಂತು ತೆರವುಗೊಳಿಸಿದ್ದಾರೆ. 


ನೆರೆ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಿರುವುದರಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತು ಸೆ.23 ರಂದು ‘ಸುವರ್ಣ ನ್ಯೂಸ್. ಕಾಂ' ವಿಸ್ತೃತ ವರದಿ  ಪ್ರಕಟಿಸಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಅವರು ಸಂತ್ರಸ್ತ ಕುಟುಂಬಗಳನ್ನು ತೆರವುಗೊಳಿಸಿ ವಿದ್ಯಾರ್ಥಿಗಳ ಸುಲಭ ಶಿಕ್ಷಣಕ್ಕೆ ಅನುವು ಮಾಡಿಕೊಡುವಂತೆ ಹುನಗುಂದ  ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ತೆರವುಗೊಳಿಸಲಾಗಿದೆ.

Latest Videos
Follow Us:
Download App:
  • android
  • ios