ರಬಕವಿ-ಬನಹಟ್ಟಿ:(ಸೆ.20) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ರಾಮಮಂದಿರವನ್ನು ಕಟ್ಟುತ್ತಾರೆ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ಕೂಡಾ ವಶಪಡಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ಹೇಳಿದರು. 

ನಗರದ ಬಸ್‌ ನಿಲ್ದಾಣದ ಹತ್ತಿರ ಪ್ರಧಾನಿ ಮೋದಿ ಅವರ ಜನ್ಮದಿನಾಚರಣೆ ನಿಮಿತ್ತ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೇಕ್‌ ಕತ್ತರಿಸಿ ಸಿಹಿ ಹಂಚಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ದೇಶಕಂಡ ಮಹಾನ್ ನಾಯಕರಾಗಿದ್ದಾರೆ. ಅವರು ತಮ್ಮ ನೇರ ನಿಷ್ಠುರ ನುಡಿಗಳಿಂದ ವಿರೋಧಿಗಳಿಗೆ ಸಿಂಹಸಪ್ನರಾಗಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಭಾರತವನ್ನು ವಿಶ್ವದ ಅಗ್ರಗಣ್ಯರಾಷ್ಟ್ರಗಳಲ್ಲಿ ಒಂದಾಗಿಸುವಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಅಲ್ಲದೇ ಅವರ ನಿರ್ಧಾರಗಳಿಂದ ಜನ ಅವರತ್ತ ಆಕರ್ಷಿತರಾಗಿದ್ದಾರೆ ಎಂದು ತಿಳಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೇ ಸಂದರ್ಭದಲ್ಲಿ ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನರೇಂದ್ರ ಮೋದಿ ಜನ್ಮದಿನಾಚರಣೆ ನಿಮಿತ್ತ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್‌ ವಿತರಣೆ ಮಾಡಲಾಯಿತು.

ಮೋದಿ ಗೆಲುವಿಗೆ ದೇಹ ದಾನ:

ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ತಮ್ಮ ಮರಣಾ ನಂತರ ದೇಹದಾನ ಮಾಡುವುದಾಗಿ ಬನಹಟ್ಟಿಯ ರವೀಂದ್ರ ಕರಲಟ್ಟಿ ವಾಗ್ದಾನ ಮಾಡಿದ್ದಾರೆ ಎಂದು ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಹೇಳಿದರು.

ಈ ವೇಳೆ ಜಿಪಂ ಸದಸ್ಯರಾದ ಪರಶುರಾಮ ಬಸವ್ವಗೋಳ, ಪುಂಢಲೀಕ ಪಾಲಬಾಂವಿ, ರಾಜು ಅಂಬಲಿ, ರಾಜು ಬಾಣಕಾರ, ಕುಮಾರ ಕದಂ, ಭೀಮಸಿ ಮಗದುಮ, ವಿಷ್ಣು ಲಡ್ಡಾ, ಅಶೋಕ ಕಲಬುರ್ಗಿ, ಸಿದ್ರಾಮ ಸವದತ್ತಿ, ಅಶೋಕ ಹಳ್ಳೂರ, ನಾಮದೇವ ಆಲಗೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.