*  ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಯೋಧ ಶಂಕ್ರಪ್ಪ ಕಿನ್ನಾಳ *  ಅನಾರೋಗ್ಯದಿಂದ ಯೋಧ ಶಂಕ್ರಪ್ಪ ಕಿನ್ನಾಳ ನಿಧನ*  ಇಂದು ಗ್ರಾಮಕ್ಕೆ ಪಾರ್ಥಿವ ಶರೀರ ಅಗಮನ 

ಬಾದಾಮಿ(ಆ.04): ಕಳೆದ ಒಂದು ವಾರದ ಹಿಂದೆ ಸ್ವಗ್ರಾಮಕ್ಕೆ ರಜೆಯ ಮೇಲೆ ಬಂದು ಕರ್ತವ್ಯಕ್ಕೆ ಮರಳಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರ ಗ್ರಾಮದ ಬಿಎಸ್‌ಎಫ್‌ ಯೋಧ ಅನಾರೋಗ್ಯದಿಂದ ಪಂಜಾಬ್‌ನ ಅಮೃತಸರದ ಬಿಎಸ್‌ಎಫ್‌ ಕ್ಯಾಂಪ್‌ನಲ್ಲಿ ಮೃತಪಟ್ಟಿದ್ದಾರೆ. 

ಬೇಲೂರ ಗ್ರಾಮದ ಚಂದ್ರಶೇಖರ ಶಂಕ್ರಪ್ಪ ಕಿನ್ನಾಳ (53) ಮೃತಪಟ್ಟಿರುವ ಯೋಧ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವಿದೆ. 4ರಂದು ಪಾರ್ಥಿವ ಶರೀರ ಗ್ರಾಮಕ್ಕೆ ಬರಲಿದೆ.

ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಗದಗದ ಯೋಧ ಲಕ್ಷ್ಮಣ

ಕಳೆದ ಒಂದು ವಾರದ ಹಿಂದೆ ಸ್ವಗ್ರಾಮಕ್ಕೆ ರಜೆಯ ಮೇಲೆ ಬಂದು ಜು.26 ರಂದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಸೋಮವಾರ ಸಂಜೆ ಕರ್ತವ್ಯದ ವೇಳೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಆ.4ರಂದು ಪಾರ್ಥಿವ ಶರೀರ ಗ್ರಾಮಕ್ಕೆ ಬರಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಬೇಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.