Asianet Suvarna News Asianet Suvarna News

‘ಸಮಾನತೆಯ ಸಂದೇಶ ಸಾರಿದ್ದು ಬಾಬಾ ಸಾಹೇಬರು’

ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆಲ್ಲರಿಗೂ ಸಮಾನತೆ ಸ್ವಾತಂತ್ರ್ಯವನ್ನು ಕೊಟ್ಟು ಎಲ್ಲರೂ ಸಹ ಬಾಳ್ವೆಯಿಂದ ಬಾಳಬೇಕು ಎಂದು ಸಂದೇಶ ನೀಡಿದ ಮಹಾನ್ ವ್ಯಕ್ತಿ ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು.

 Baba Saheb preached the message of equality snr
Author
First Published Dec 30, 2023, 10:10 AM IST

 ಕೊರಟಗೆರೆ :  ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆಲ್ಲರಿಗೂ ಸಮಾನತೆ ಸ್ವಾತಂತ್ರ್ಯವನ್ನು ಕೊಟ್ಟು ಎಲ್ಲರೂ ಸಹ ಬಾಳ್ವೆಯಿಂದ ಬಾಳಬೇಕು ಎಂದು ಸಂದೇಶ ನೀಡಿದ ಮಹಾನ್ ವ್ಯಕ್ತಿ ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಏರ್ಪಡಿಸಿದ್ದ ಕೊರಟಗೆರೆ ದಲಿತ ಸಂಘರ್ಷ ಸಮಿತಿಯಿಂದ ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಜ್ಞಾನಿಯಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ಯಾವುದೊ ಒಂದು ಸಮುದಾಯಕ್ಕೆ ಮೀಸಲಾಗದೆ ಪ್ರತಿಯೊಬ್ಬರ ಪರವಾಗಿ ದ್ವನಿಯಾಗಿ ಇದ್ದಂತಹ ಮಹಾನಾಯಕ, ಇಡೀ ಪ್ರಪಂಚದಲ್ಲೆ ಸಾಮಾಜಿಕ ನ್ಯಾಯ ಒದಗಿಸಿ, ದೇಶದ ಪ್ರಗತಿಯನ್ನು ಅಭಿವೃದ್ಧಿಯಲ್ಲಿ ಭಾರತ ಬೆಳೆದ ರೀತಿಯನ್ನು ನಾವು ಅಂಬೇಡ್ಕರ್ ಅವರಿಂದ ನೋಡುತ್ತಿದ್ದೇವೆ. 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದ ನಮಗೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುವಂತೆ ಮಾಡಿ ನಮಗಾಗಿ ಪಟ್ಟಂತಹ ಕಷ್ಟ ಇಂದು ನಾವೆಲ್ಲರೂ ನೆನಪಿಸಿಕೊಳ್ಳಬೇಕಿದೆ ಎಂದರು.

ಮಾಜಿ ಸೈನಿಕ ನರಸಿಂಹ ಮೂರ್ತಿ ಮಾತನಾಡಿ, ನಮ್ಮ ರಾಜ್ಯದ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಆಶಯದಂತೆ ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮ ಆಯೋಜಿಸಿದ್ದೇವೆ ನಾವೆಲ್ಲರೂ ಕೇವಲ ಅಂಬೇಡ್ಕರ್ ಅವರ ಪರಿ ನಿರ್ವಾಣದ ದಿನ ಅವರನ್ನ ನೆನಪಿಸಿಕೊಳ್ಳದೆ ಪ್ರತಿದಿನ ನಮ್ಮ ಎದೆಯಲ್ಲಿ ಅವರನ್ನು ಇಟ್ಟುಕೊಳ್ಳಬೇಕು. ನಮಗಾಗಿ ಅವರು ಪಟ್ಟಂತಹ ಕಷ್ಟವನ್ನು ನೆನೆಯಬೇಕು ಈ ದೇಶದ ಜನತೆಗೆ ಸಂವಿಧಾನವನ್ನು ರಚಿಸಿ ಸಮಾನತೆ ಎಂದರೆ ಏನೆಂಬುದನ್ನು ತಿಳಿಸಿದ ಮಹಾನ್ ವ್ಯಕ್ತಿ ಅಂಬೇಡ್ಕರ್. ಶಿಕ್ಷಣದ ಭಂಡಾರವನ್ನೇ ತಮ್ಮ ಎದೆಯಲ್ಲಿ ಇಟ್ಟುಕೊಂಡಿದ್ದವರು. ಅಂಬೇಡ್ಕರ್ ಅವರಂತಹ ವಿಶ್ವಜ್ಞಾನಿಯನ್ನು ಪಡೆದ ನಾವೇ ಪುಣ್ಯವಂತರು ಎಂದು ಹೇಳಿದರು.

ಪ್ರೊ.ಕೆ.ಸಿ. ಮುದ್ದಗಂಗಯ್ಯ ಮಾತನಾಡಿ, ಬಾಬಾ ಸಾಹೇಬರನ್ನು ನಮ್ಮ ಎದೆಯಲ್ಲಿ ಇಳಿಸಿಕೊಂಡಾಗ, ಪ್ರತಿದಿನ ಅವರನ್ನ ಸ್ಮರಿಸಿದಾಗ ಮಾತ್ರ ಅಂಬೇಡ್ಕರ್ ಅವರು ಯಾರೆಂದು ನಾವು ಅರಿಯಲು ಸಾಧ್ಯ, ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಮೂವತ್ತೆರಡು ಪದವಿಯನ್ನು ಪಡೆದು, ಸಾಮಾಜಿಕ ಚಳುವಳಿಯನ್ನು ಕೈಗೆತ್ತಿಕೊಂಡು ಹೋರಾಟ ಮಾಡಿ ಜನರಿಗೋಸ್ಕರ ವೋಟು ಹಾಕುವ ಅವಕಾಶ ನೀಡಿ ಎಂದು ಅಂಗಲಾಚಿದ್ದಾರೆ. ಅಂಬೇಡ್ಕರ್ ಅವರು ಸಂಘಟನೆಯನ್ನು ಸಿಂಹ ಶಕ್ತಿ ಎಂದು ಕರೆದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಸ್ಎಸ್ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾಕ್ಟರ್ ಪುರುಷೋತ್ತಮ್ ನಾಯ್ಕ್, ಪೊಲೀಸ್ ಇಲಾಖೆಯ ಎಎಸ್ಐ ಮಂಜುನಾಥ್, ದಾಸರಹಳ್ಳಿ ಶಿವರಾಮ್, ಮಂಜುನಾಥ್, ರಾಜು ಕೊಡ್ಲಾಪುರ, ಗಂಗರಾಜು, ತಿಮ್ಮಯ್ಯ, ಬಿ.ಪಿ. ರಾಜಣ್ಣ, ಗ್ರಾ.ಪಂ ಅಧ್ಯಕ್ಷೆ ಜಯಮ್ಮ, ಲಕ್ಷ್ಮೀದೇವಮ್ಮ, ನಾಗೇಶ್ ಮಲಪನಹಳ್ಳಿ, ರಮೇಶ್ ಅರಸಾಪುರ, ಬುಕ್ಕ ಪಟ್ಟಣ ದೊಡ್ಡಯ್ಯ ಇತರರು ಹಾಜರಿದ್ದರು. .

Follow Us:
Download App:
  • android
  • ios