ಮೈಸೂರು(ನ.20): ಐದು ದಿನಗಳಿಂದ ಉಡುಪಿಯಲ್ಲಿ ನಡೆದ ಬಾಬಾ ರಾಮ್‌ದೇವ್ ಯೋಗ ಶಿಬಿರ ಸಂಪನ್ನವಾಗಿದೆ. ಕೃಷ್ಣಮಠ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುತ್ತಿದ್ದ ಯೋಗ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಐದು ದಿನಗಳಿಂದ ನಡೆದ ಬಾಬಾ ರಾಮ್ ದೇವ್ ಯೋಗ ಶಿಬಿರ ಸಂಪನ್ನವಾಗಿದ್ದು, ಮಕ್ಕಳಿಗೆ ಹಾಗೂ ಮಹಿಳೆಯರಿಗೂ ವಿಶೇಷ ಯೋಗವನ್ನು ಹೇಳಿ ಕೊಡಲಾಗಿತ್ತು. ಕೃಷ್ಣಮಠ ಪಾರ್ಕಿಂಗ್ ಪ್ರದೇಶದಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ಯೋಗ ಶಿಬಿರಕ್ಕೆ ತೆರೆ ಬಿದ್ದಿದ್ದು, ಮುಂಜಾನೆ ಎರಡೂವರೆ ಗಂಟೆ ಕಾಲ ಬಾಬಾ ನೇತೃತ್ವದಲ್ಲಿ ಶಿಬಿರ ನಡೆಯುತ್ತಿತ್ತು.

ಮುಸ್ಲಿಂ ಲಾ ಬೋರ್ಡ್‌ನಿಂದ ಅಹಿಷ್ಣುತೆಯ ಸಂದೇಶ: ರಾಮ್‌ದೇವ್

ಸಾವಿರಾರು ಮಂದಿ ಯೋಗಪ್ರಿಯರು ಐದು ದಿನಗಳಿಂದ ಯೋಗಾಸನ, ಪ್ರಾಣಾಯಾಮದಲ್ಲಿ ಪಾಲ್ಗೊಂಡಿದ್ದರು. ಇಂದಿನ ಶಿಬಿರದಲ್ಲಿ ಪರ್ಯಾಯ ಶ್ರೀಗಳಿಂದ ಬಾಬಾ ರಾಮ್ ದೇವ್ ಗೆ ಸನ್ಮಾನ ನಡೆದಿದ್ದು, ಕೃಷ್ಣಮಠದ ವತಿಯಿಂದ ರಾಮ್ ದೇವ್ ಗೆ ಅಭಿನವ ಪತಂಜಲಿ ಬಿರುದು ನೀಡಿ ಸನ್ಮಾನಿಸಲಾಗಿದೆ. ಬಾಬಾ ರಾಮ್ ದೇವ್ ಅವರೂ ಪರ್ಯಾಯ ಶ್ರೀಗಳಿಗೆ ಗೌರವ ಸಮರ್ಪಿಸಿದ್ದಾರೆ.

ಸತ್ತ ಕುರಿಗಾಗಿ ಪತಿ-ಪತ್ನಿಯ ಜಗಳ ಕೊಲೆಯಲ್ಲಿ ಅಂತ್ಯ